ಬ್ರಿಕ್ಸ್ ಶೃಂಗಸಭೆ ಊಟದ ವದಂತಿಗಳ ಬಗ್ಗೆ ವದಂತಿಗಳಿಗೆ ಸಚಿವಾಲಯದ ಸ್ಪಷ್ಟನೆ  
ದೇಶ

BRICS ಶೃಂಗಸಭೆ ಊಟದಿಂದ ಜಿನ್‌ಪಿಂಗ್‌, ರಾಮಾಫೋಸಾ ಅಸ್ವಸ್ಥ? ಕೊನೆಗೂ ಸತ್ಯ ಬಯಲು ಮಾಡಿದ ವಿದೇಶಾಂಗ ಸಚಿವಾಲಯ! MEA on BRICS Summit Meal

ನವದೆಹಲಿ: ಭಾರತದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡು ದಿನ (ಸೆ. 12 ರಿಂದ 13) ಗಳ ವರೆಗೆ ನಡೆದಿದ್ದ, ಬ್ರಿಕ್ಸ್​ ಶೃಂಗ ಸಭೆಗೆ ಆಗಮಿಸಿ, ಇಲ್ಲಿಯ ಊಟವನ್ನು ಸೇವಿಸಿದ ಅನೇಕ ವಿಶ್ವ ನಾಯಕರು ಅನಾರೋಗ್ಯ ಪೀಡಿತರಾಗಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ಇಂದು (ಗುರುವಾರ, ಸೆ.17) ಈ ಎಲ್ಲಾ ವದಂತಿಗಳ ಬಗ್ಗೆ ಮೌನ ಮುರಿದಿರುವ ವಿದೇಶಾಂಗ ಸಚಿವಾಲಯ (MEA on BRICS Summit Meal), ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದ್ದು, ಬ್ರಿಕ್ಸ್​ ಸಮಾವೇಶಕ್ಕೆ ಆಗಮಿಸಿದ್ದ ಅತಿಥಿಗಳ ಆರೋಗ್ಯ ಸ್ಥಿತಿ ಚೆನ್ನಾಗಿಯೇ ಇದೆ ಎಂದು ಸ್ಪಷ್ಟಿಕರಣ ನೀಡಿದೆ.

ಜಿನ್‌ ಪಿಂಗ್, ರಾಮಫೋಸಾ ಆರೋಗ್ಯದಲ್ಲಿ ವ್ಯತ್ಯಯ!

ಭಾರತದಲ್ಲಿ ನಡೆದಿದ್ದ ಬ್ರಿಕ್ಸ್​ ಶೃಂಗಸಭೆಗೆ ಸದಸ್ಯ ದೇಶಗಳು ಸೇರಿ ವಿದೇಶಗಳ ನೂರಾರು ಅತಿಥಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಭಾರತದಲ್ಲಿ ತಯಾರಿಸಲಾದ ಅಡುಗೆಗಳನ್ನು ಸೇವಿಸಿ, ವಿಶ್ವ ದರ್ಜೆ ನಾಯಕರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದು ಕೆಲ ಸುದ್ದಿ ಸಂಸತೆಗಳು ವರದಿ ಮಾಡಿದ್ದವು.
ಅದರಲ್ಲೂ, ಚೀನಾ ಅಧ್ಯಕ್ಷ ಜಿನ್‌ ಪಿಂಗ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್​ ರಾಮಫೋಸಾ ಅವರ ಆರೋಗ್ಯದಲ್ಲಿ ಭಾರಿ ವ್ಯತ್ಯಯವಾಗಿದೆ ಎಂಬ ತಲೆ ಬರಹವುಳ್ಳ ವರದಿಗಳು ಪ್ರಕಟವಾಗಿದ್ದವು. ಈ ಮೂಲಕ ಭಾರತದಲ್ಲಿ ಯಶಸ್ವಿಯಾಗಿ ನಡೆದ ಬ್ರಿಕ್ಸ್​ ಸಮಾವೇಶಕ್ಕೆ ಕೆಟ್ಟ ಹೆಸರನ್ನು ತರುವುದು ಉದ್ದೇಶವಾಗಿತ್ತು.

ಇವೆಲ್ಲಾ ಸುಳ್ಳು ಸುದ್ದಿ!

ಆದರೆ, ಈಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ವಿದೇಶಾಂಗ ಸಚಿವಾಲಯ, ತಮ್ಮ ಫ್ಯಾಕ್ಟ್​ಚೆಕ್​ (ಸತ್ಯಾಂಶ ಪರಿಶೀಲನೆ) ಅನ್ನು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡುವ ಮೂಲಕ, ಇವೆಲ್ಲಾ ಕೇವಲ ಸುಳ್ಳುಸುದ್ದಿಗಳೆಂದು ತಿಳಿಸಿದೆ. ಬ್ರಿಕ್ಸ್​ ಸಮಾವೇಶಕ್ಕೆ ಕಳಪೆ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಬಳಸಲಾಗಿದೆ, ಶುಚಿತ್ವವಿಲ್ಲದ ಸ್ಥಳದಲ್ಲಿ ಅಡುಗೆ ಮಾಡಲಾಗಿದೆ ಹಾಗೂ ಆರೋಗ್ಯವನ್ನು ಕೆಡಿಸುವಂತ ಆಹಾರವನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ ಎಂದು ಬಿಂಬಿಸುವ ಪೋಸ್ಟಗಳು ಸರಿಯಿಲ್ಲ, ಸತ್ಯಾಂಶದಿಂದ ಕೂಡಿಲ್ಲವೆಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತದಲ್ಲಿ ನಡೆದ ಬ್ರಿಕ್ಸ್​!
ಈ ಬಾರಿಯ ಅಂದರೆ 18 ನೇ ಬ್ರಿಕ್ಸ್​ ಶೃಂಗಸಭೆಯು ಭಾರತದ ನವದೆಹಲಿಯಲ್ಲಿ ಸೆಪ್ಟೆಂಬರ್​ 12 ಮತ್ತು 13 ರಂದು ನಡೆಯಿತು. ಈ ಸಮಾವೇಶಕ್ಕೆ ಬ್ರಿಕ್ಸ್​ ಸದಸ್ಯ ದೇಶಗಳ ಜೊತೆಗೆ ಇತರೆ ವೀಕ್ಷಕ ದೇಶಗಳ ಪ್ರತಿನಿಧಿಗಳು, ನಾಯಕರು ಆಗಮಿಸಿದ್ದರು. ಭಾರತದಲ್ಲಿ ನಡೆದ ಈ ಬ್ರಿಕ್ಸ್​ ಸಮಾವೇಶವು, ಯುರೋಪಿಯನ್​ ಯೂನಿಯನ್​ ಹಾಗೂ ಅಮೆರಿಕ ನೇತೃತ್ವದ ನಾಟೋಗೆ ನೇರವಾಗಿ ಸವಾಲನ್ನು ಒಡ್ಡಿದೆ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಶೃಂಗ ಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಚೀನಾ ಅಧ್ಯಕ್ಷ ಜಿನ್‌ ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್​ ರಾಮಾಫೋಸಾ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಅಬುಧಾಬಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಮೊದಲಾದ ಜಾಗತಿಕ ನಾಯಕರು ಈ ಎರಡು ದಿನದ ಶೃಂಗ ಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು, (ಏಜೆನ್ಸೀಸ್​).