ಗೌರವ್-ಅಕಾಂಕ್ಷಾ ಡೈವೋರ್ಸ್ ವಿಚಾರ
- ಗೌರವ್-ಅಕಾಂಕ್ಷಾ ಡೈವೋರ್ಸ್ ವಿಚಾರ ಭಾರೀ ಚರ್ಚೆ
- ವ್ಯೂಸ್‌ಗಾಗಿ ಗೌರವ್ ಹೆಸರನ್ನು ಬಳಸುತ್ತಿದ್ದಾರೆ ಎಂದ ಒರ್ರಿ
- ಅಕಾಂಕ್ಷಾ ಒಂದು ‘ಸ್ನೇಕ್ ಇನ್ ದಿ ಗ್ರಾಸ್’- ಒರ್ರಿ ಕಿಡಿ
Gaurav-Akanksha Divorce: ಬಾಲಿವುಡ್ ನಟ ಗೌರವ್ ಖನ್ನಾ ಹಾಗೂ ಅಕಾಂಕ್ಷಾ ಚಮೋಲಾ ಅವರ ಡೈವೋರ್ಸ್ ಸುದ್ದಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ‘ಖತ್ರೋಂ ಕೆ ಖಿಲಾಡಿ 15’ ಸ್ಪರ್ಧಿ ಒರ್ರಿ, ಗೌರವ್ ಖನ್ನಾ ಪರ ಬ್ಯಾಟ್ ಬೀಸಿದ್ದು, ಅಕಾಂಕ್ಷಾ ವಿರುದ್ಧ ಕಿಡಿಕಾರಿದ್ದಾರೆ.
‘ಲಾಕ್ ಅಪ್ ಸೀಸನ್ 2’ ಪ್ರೀಮಿಯರ್ ವೇಳೆ ಅಕಾಂಕ್ಷಾ, ತಾವು ಮತ್ತು ಗೌರವ್ ವಿಚ್ಛೇದನ ಪಡೆದಿದ್ದಾಗಿ ಅಂತ ಹೇಳಿಕೊಂಡಿದ್ದರು. ತಮ್ಮ ವೈಯಕ್ತಿಕ ಜೀವನದ ಈ ವಿಚಾರವನ್ನು ಇದೇ ಮೊದಲ ಸಲ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ ಎಂದಿದ್ದರು. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿತ್ತು. ಇದೇ ವಿಚಾರಕ್ಕೆ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯಿಸಿದ ಒರ್ರಿ, ಅಕಾಂಕ್ಷಾ ಗೌರವ್ ಖನ್ನಾ ಹೆಸರನ್ನು ವ್ಯೂಸ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ ಆರೋಪಿಸಿದ್ದಾರೆ.
‘ರಿಯಲ್ ಸ್ನೇಕ್ ಇನ್ ದಿ ಗ್ರಾಸ್’
ಒರ್ರಿ ತಮ್ಮ ಕಾಮೆಂಟ್‌ನಲ್ಲಿ ಅಕಾಂಕ್ಷಾ ಅವರನ್ನು ‘ರಿಯಲ್ ಸ್ನೇಕ್ ಇನ್ ದಿ ಗ್ರಾಸ್’ ಎಂದು ಕರೆದಿದ್ದಾರೆ. ಗೌರವ್ ಅವರ ಒಳ್ಳೆಯ ಹೆಸರನ್ನು ಹಾಳು ಮಾಡುತ್ತಿದ್ದಾರೆ ಮತ್ತು ವ್ಯೂಸ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಶಗುನ್ ಶರ್ಮಾ ಕೂಡ ಗೌರವ್ ವಿರುದ್ಧ ರಿಯಾಲಿಟಿ ಶೋದಲ್ಲಾದ ಅನುಭವದ ಬಗ್ಗೆ ಮಾತನಾಡಿದ್ದರು. ಶೂಟಿಂಗ್ ವೇಳೆ ಗೌರವ್ ತಮ್ಮನ್ನು ಸಾಕಷ್ಟು ಟಾರ್ಗೆಟ್ ಮಾಡುತ್ತಿದ್ದರು ಎಂದು ಶಗುನ್ ಆರೋಪಿಸಿದ್ದರು.
ಪ್ರೀತಿಸಿ ಮದುವೆಯಾಗಿದ್ದ ಅಕಾಂಕ್ಷಾ-ಗೌರವ್
ಇನ್ನು, 2016ರ ನವೆಂಬರ್ 24ರಂದು ಅಕಾಂಕ್ಷಾ-ಗೌರವ್ ವಿವಾಹವಾಗಿದ್ದರು. ಇಬ್ಬರೂ ಆಡಿಷನ್ ವೇಳೆ ಭೇಟಿಯಾಗಿ, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಈ ಹಿಂದೆ ‘ಲಾಕ್ ಅಪ್: ಸಚ್ ಯಾ ಸಝಾ’ಗೆ ಗೌರವ್ ಬಂದಾಗ, ತಾವು ಇನ್ನೂ ಕಾನೂನುಬದ್ಧವಾಗಿ ಪತಿ-ಪತ್ನಿಯಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದಿದ್ದರು. ಇದೀಗ ಅಕಾಂಕ್ಷಾ ಹೇಳಿಕೆ, ಶಗುನ್ ಆರೋಪ ಮತ್ತು ಒರ್ರಿಯ ಪ್ರತಿಕ್ರಿಯೆಯಿಂದ ಗೌರವ್ ಸುತ್ತಲಿನ ವಿವಾದ ಮತ್ತಷ್ಟು ಜೋರಾಗಿದೆ,(ಏಜೆನ್ಸೀಸ್).