Leonardo DiCaprio: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಹೆಸರನ್ನು ಉಲ್ಲೇಖಿಸಿ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಜೆಫ್ರಿ ಎಪ್ಸ್ಟೀನ್ ಫೈಲ್ನಲ್ಲಿನ ಡಿಕಾಪ್ರಿಯೊರನ್ನು ನರಭಕ್ಷಕ ಎಂದು ಬಿಂಬಿಸಲಾಗಿದೆ ಎಂಬ ವದಂತಿಗಳು ಹಬ್ಬಿದ್ದು, ಈ ಸುದ್ದಿಯ ಅಸಲಿಯತ್ತೇನು ಎನ್ನುವುದು ಇಲ್ಲಿ ನೋಡೋಣ.
ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾದ ಸಾವಿರಾರು ಪುಟಗಳ ದಾಖಲೆಗಳಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಸೇರಿದಂತೆ ಅನೇಕ ಗಣ್ಯರ ಹೆಸರುಗಳು ಉಲ್ಲೇಖವಾಗಿವೆ. ಆದರೆ, ಆ ದಾಖಲೆಗಳಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ ಅಥವಾ ಅವರು ದ್ವೀಪಕ್ಕೆ ಭೇಟಿ ನೀಡಿದ್ದಾರೆ ಎಂಬ ಪುರಾವೆಗಳಿಲ್ಲ. ಕೇವಲ ಸಂಭಾಷಣೆ ಅಥವಾ ಇತರೆ ಸಂದರ್ಭಗಳಲ್ಲಿ ಅವರ ಹೆಸರುಗಳು ಬಂದಿವೆ ಎಂದು ವರದಿಯಾಗಿದೆ.
ನರಭಕ್ಷಕಣೆಯ ಅಸಲಿಯತ್ತೇನು..?
ಡಿಕಾಪ್ರಿಯೊ ವುಡಿ ಅಲೆನ್ ಎನ್ನುವವರಿಗೆ ಇಮೇಲ್ ಕಳುಹಿಸಿ ಮಕ್ಕಳ ಮಾಂಸ ಸೇವನೆಯ ಬಗ್ಗೆ ಬರೆದಿದ್ದಾರೆ ಎಂಬ ಸುದ್ದಿಗೆ ಯಾವುದೇ ಆಧಾರವಿಲ್ಲ. ಇಂತಹ ಯಾವುದೇ ಇಮೇಲ್ ಅಥವಾ ಸಾಕ್ಷ್ಯಗಳು ನ್ಯಾಯಾಲಯದ ದಾಖಲೆಗಳಲ್ಲಿ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
ಡಿಕಾಪ್ರಿಯೊ 70 ಪೌಂಡ್ ಮಾಂಸ ಸೇವಿಸಿದ್ದಾರೆ ಮತ್ತು ವುಡಿ ಅಲೆನ್ಗೆ ಇಮೇಲ್ ಕಳುಹಿಸಿ ಅದರ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನುವುದು ಕಟ್ಟು ಕಥೆಯಾಗಿದ್ದು, ಅಧಿಕೃತವಾಗಿ ಬಿಡುಗಡೆಯಾದ ಯಾವುದೇ ನ್ಯಾಯಾಲಯದ ದಾಖಲೆಗಳಲ್ಲಿ ಇಂತಹ ಉಲ್ಲೇಖಗಳಿಲ್ಲ.
ವುಡಿ ಅಲೆನ್ ಮತ್ತು ಡಿಕಾಪ್ರಿಯೊ ಸಂಪರ್ಕ
ವುಡಿ ಅಲೆನ್ ಮತ್ತು ಡಿಕಾಪ್ರಿಯೊ ಹಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳಾಗಿದ್ದು, ಅವರ ನಡುವೆ ಇಂತಹ ಕ್ರಿಮಿನಲ್ ಚಟುವಟಿಕೆಯ ಸಂವಹನ ನಡೆದಿದೆ ಎನ್ನಲು ಯಾವುದೇ ಅಧಿಕೃತ ತನಿಖಾ ಸಂಸ್ಥೆಗಳು ಸಾಕ್ಷ್ಯ ನೀಡಿಲ್ಲ.
ಎಪ್ಸ್ಟೀನ್ ಪ್ರಕರಣದ ಹಿನ್ನಲೆ
ಜೆಫ್ರಿ ಎಪ್ಸ್ಟೀನ್ ಒಬ್ಬ ಅಮೆರಿಕನ್ ಫೈನಾನ್ಷಿಯರ್ ಆಗಿದ್ದು, ಲೈಂಗಿಕ ಅಪರಾಧಗಳಿಗಾಗಿ ಜೈಲು ಸೇರಿದ್ದರು. ಅವರ ದ್ವೀಪಕ್ಕೆ ಹೋಗುತ್ತಿದ್ದ ಗಣ್ಯರ ಪಟ್ಟಿಯಲ್ಲಿ ಅನೇಕ ರಾಜಕಾರಣಿಗಳು ಮತ್ತು ನಟರ ಹೆಸರಿದೆ ಎನ್ನುವುದು ಸತ್ಯ(ಏಜೆನ್ಸೀಸ್).