Dhurandhar 
ದೇಶ

'ಧುರಂಧರ್' ನಟ ನದೀಮ್ ಖಾನ್ ಅರೆಸ್ಟ್: ಮನೆಗೆಲಸದ ಮಹಿಳೆ ಮೇಲೆ 10 ವರ್ಷಗಳ ಅ*ತ್ಯಾಚಾರ ನಡೆಸಿದ ಆರೋಪ ..Dhurandhar

ಮುಂಬೈ: ಸುಮಾರು ಒಂದು ದಶಕದ ಕಾಲ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿದ ಗಂಭೀರ ಆರೋಪದ ಮೇಲೆ ( Dhurandhar) 'ಧುರಂಧರ್' ಸಿನಿಮಾದಲ್ಲಿ ರಹಮಾನ್ ಡಕಾಯಿತನ ಅಡುಗೆಯವನ ಪಾತ್ರ ಮಾಡಿದ್ದ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ದೂರು ನೀಡಿದ ಮಹಿಳೆಯು ಮನೆಗೆಲಸದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಹಲವಾರು ಬಾಲಿವುಡ್ ನಟರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. 2015 ರಲ್ಲಿ ನದೀಮ್ ಖಾನ್ ಅವರ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ನದೀಮ್ ಖಾನ್ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಈ ಮಾತನ್ನು ನಂಬಿ ನಾನು ಅವರೊಂದಿಗೆ ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡಿದ್ದೆ. ಕಳೆದ ಒಂದು ದಶಕದಿಂದ ನದೀಮ್ ಖಾನ್ ತಮ್ಮ ನಿಮನೆಯಲ್ಲಿ ಹಲವಾರು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇತ್ತೀಚೆಗೆ ಮದುವೆಯ ಬಗ್ಗೆ ಒತ್ತಾಯಿಸಿದಾಗ, ನದೀಮ್ ಖಾನ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಎಂದು 41 ವರ್ಷದ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯು ಮೊದಲು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಮೊದಲ ಬಾರಿ ಕೃತ್ಯ ನಡೆದದ್ದು ಮಾಲ್ವಾನಿ ಪೊಲೀಸ್ ವ್ಯಾಪ್ತಿಯಲ್ಲಿ ಆದ ಕಾರಣ, ಪ್ರಕರಣವನ್ನು 'ಝೀರೋ ಎಫ್‌ಐಆರ್' (Zero FIR) ಮೂಲಕ ಮಾಲ್ವಾನಿ ಠಾಣೆಗೆ ವರ್ಗಾಯಿಸಲಾಯಿತು. ತನಿಖೆ ನಡೆಸಿದ ಮಾಲ್ವಾನಿ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ.

ಯಾರು ಈ ನದೀಮ್ ಖಾನ್?

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಬಿಗ್ ಬಜೆಟ್ ಚಿತ್ರ 'ಧುರಂಧರ್' ನಲ್ಲಿ ನದೀಮ್ ಖಾನ್ ಪೋಷಕ ಪಾತ್ರವೊಂದರಲ್ಲಿ (ಅಹ್ಲಾಕ್ ಎಂಬ ಅಡುಗೆಯವನ ಪಾತ್ರ) ಕಾಣಿಸಿಕೊಂಡಿದ್ದರು. ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಹೊತ್ತಿನಲ್ಲೇ ಈ ನಟ ಅರೆಸ್ಟ್​​ ಆಗಿದ್ದಾನೆ.