ಚಿತ್ರದಲ್ಲಿನ 'ಬಡೇ ಸಾಬ್' ರಹಸ್ಯ ಕೊನೆಗೂ ಬಯಲು
- ಮಾರ್ಚ್ 19 ರಂದು ತೆರೆಕಂಡ ಧುರಂಧರ್ ಸಿನಿಮಾ
- ಚಿತ್ರದಲ್ಲಿನ 'ಬಡೇ ಸಾಬ್' ರಹಸ್ಯ ಕೊನೆಗೂ ಬಯಲು
- ಭೂಗತ ಪಾತಕಿ ದಾವೂದ್ ಪಾತ್ರದಲ್ಲಿ ನಟ ಡ್ಯಾನಿಶ್ ಇಕ್ಬಾಲ್
ಬಾಲಿವುಡ್: ಇಂದು (ಮಾರ್ಚ್.19) ಭಾರತೀಯ ಸಿನಿ ಪ್ರೇಕ್ಷಕರು ಬಹು ಸಮಯದಿಂದ ಕಾತುರತೆಯಿಂದ ಕಾಯುತ್ತಿದ್ದ ಸಿನಿಮಾ ಧುರಂಧರ್ 2: ದಿ ರಿವೆಂಜ್ ತೆರೆಕಂಡಿದೆ. ಈ ಸಿನಿಮಾದಲ್ಲಿ ಬಡೇ ಸಾಬ್ (Dhurandhar 2 Bade Saab) ಪಾತ್ರ ಮತ್ತು ಅದನ್ನು ಯಾರು ನಿರ್ವಹಿಸಲಿದ್ದಾರೆ? ಎಂಬ ಕುರಿತು ಹಲವಾರು ವದಂತಿಗಳು ಮತ್ತು ಉಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ಉಹಾಪೋಹಗಳಿಗೆ ಸಿನಿಮಾದಲ್ಲಿ ಸ್ವಷ್ಟ ಉತ್ತರವನ್ನು ನೀಡಲಾಗಿದೆ.
ಯಾರು ಈ ಬಡೇ ಸಾಬ್?
ಧುರಂಧರ್ ಸಿನಿಮಾದ ಮೊದಲ ಭಾಗದಲ್ಲಿ ಈ ಬಡೇ ಸಾಬ್ ಮೇಜರ್ ಇಲ್ಯಾಸ್ ಕಶ್ಮೀರಿ (ಅರ್ಜುನ್ ರಾಂಪಾಲ್ ನಿರ್ವಹಿಸಿರುವ ಪಾತ್ರ) ಯ ಮೇಲಾಧಿಕಾರಿ ಎಂಬ ರೀತಿಯಲ್ಲಿ ತೋರಿಸಲಾಗಿತ್ತು. ಸಂಜಯ್ ದತ್ ನಿರ್ವಹಿಸಿರುವ ಪಾತ್ರವಾದ ಎಸ್ಪಿ ಚೌಧರಿ ಅಸ್ಲಂ ಆಗಾಗ ಈ ಬಡೇ ಸಾಬ್ನ ಹೆಸರನ್ನು ಉಲ್ಲೇಖಿಸುತ್ತಾ ಇರುವುದನ್ನು ಸಿನಿಮಾದಲ್ಲಿ ನೋಡಬಹುದಾಗಿದೆ.
ಅದರೆ ಈ ಬಡೇ ಸಾಬ್ ಪಾತ್ರ ಯಾರನ್ನು ಪ್ರೇರಣೆಯಾಗಿ ತೆಗೆದುಕೊಂಡು ನಿರ್ಮಿಸಲಾಗುತ್ತಿದೆ ಎನ್ನುವುದಕ್ಕೆ ಸಿನಿಮಾ ತಂಡದಿಂದ ಸ್ಪಷ್ಟ ಉತ್ತರ ದೊರೆತಿರಲಿಲ್ಲ. ಕೆಲವರು ಈ ಪಾತ್ರ ಭೂಗತಪಾತಕಿ ದಾವೂದ್ ಇಬ್ರಾಹಿಂನ ಕುರಿತಾದ ಪಾತ್ರವಿರಬಹುದು ಎಂದರೆ ಇನ್ನು ಕೆಲವರು ಇದು ಪಾಕಿಸ್ತಾನದ ಮಾಜಿ ಪ್ರಧಾನಿ ಪರವೇಜ್ ಮುಷ್ರರಫ್ ಕುರಿತಾದ ಪಾತ್ರ ಎಂದು ಹೇಳಲಾಗುತ್ತಿತ್ತು.
ಇನ್ನೂ ಈ ಬಡೇ ಸಾಬ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಥವಾ ಇಮ್ರಾನ್ ಹಾಶ್ಮಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಬಿ ಟೌನ್ನಲ್ಲಿ ಹಬ್ಬಿತ್ತು. ಆದರೆ ಇಂದು ಈ ಧುರಂಧರ್ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳ ಒಂದು ಊಹೆ ಸರಿಯಾದರೆ ಇನ್ನೊಂದು ಊಹೆ ತಪ್ಪಾಗಿದೆ.
ದಾವೂದ್ ಇಬ್ರಾಹಿಂ: ದಿ ಬಡೇ ಸಾಬ್!
ಕಟ್ಟಪ್ಪ ಬಾಹುಬಲಿಯನ್ನು ಏಕೆ ಸಾಯಿಸಿದ ಎಂಬ ಪ್ರಶ್ನೆಯಷ್ಟೇ ಕಾತುರಕ್ಕೆ ಕಾರಣವಾಗಿದ್ದ, ಈ ಬಡೇ ಸಾಬ್ ಪಾತ್ರವನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಚಿತ್ರಿಸಿರುವ ಪಾತ್ರವೆಂದು ಈದೀಗ ತಿಳಿದುಬಂದಿದೆ. ಆದರೆ ಈ ಪಾತ್ರವನ್ನು ಸಲ್ಮಾನ್ ಖಾನ್ ಅಥವಾ ಇಮ್ರಾನ್ ಹಾಶ್ಮಿ ಬದಲು ಡ್ಯಾನಿಶ್ ಇಕ್ಬಾಲ್ ಎಂಬ ನಟ ದಾವೂದ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.
ಯಾರು ಈ ಡ್ಯಾನಿಶ್ ಇಕ್ಬಾಲ್?
ಡ್ಯಾನಿಶ್ ಇಕ್ಬಾಲ್ ಒಬ್ಬ ನಟ, ರಂಗಭೂಮಿ ನಿರ್ದೇಶಕ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಟಕಕಾರರಾಗಿದ್ದಾರೆ. ಅಷ್ಟೇ ಅಲ್ಲದೇ ಡ್ಯಾನಿಶ್ ಇಕ್ಬಾಲ್, ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಧುರಂಧರ್ 2 ನಲ್ಲಿ ಬಡೇ ಸಾಬ್ ಪಾತ್ರವನ್ನು ನಿರ್ವಹಿಸುವ ಮೊದಲು ಫರ್ಜ, ಹಕ್, ಭಕ್ಷಕ್ ಹಾಗೂ ಹಾಲಿವುಡ್ನ ದಿ ಮೈಟಿ ಹಾರ್ಟ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ,(ಏಜನ್ಸೀಸ್).