ಹಿಂದೂ ದೇವತೆಗಳ ಕುರಿತು ಯೂಟ್ಯೂಬರ್ ಧ್ರುವ್ ರಾಠಿ ಅವಮಾನ
- ಹಿಂದೂ ದೇವತೆಗಳ ಕುರಿತು ಯೂಟ್ಯೂಬರ್ ಧ್ರುವ್ ರಾಠಿ ಅವಮಾನ
- ಶ್ರೀರಾಮ, ಸೀತೆ ಮತ್ತು ಕೃಷ್ಣ ಮದ್ಯ ಮತ್ತು ಮಾಂಸ ಸೇವಿಸುತ್ತಿದ್ದಾಗಿ ಹೇಳಿಕೆ
- ಭಾರತದಲ್ಲಿ ಧ್ರುವ್ ರಾಠಿ ವಿಡಿಯೋವನ್ನು ರದ್ದು ಮಾಡಿದ್ದಾಗಿ ಗೂಗಲ್ ಸ್ಪಷ್ಟನೆ
ನವದೆಹಲಿ: ಹಿಂದೂ ದೇವತೆಗಳಾದ ಪ್ರಭು ಶ್ರೀರಾಮ, ಸೀತೆ ಮತ್ತು ಕೃಷ್ಣ ಇವರು ಮಾಂಸ ಮತ್ತು ಮದ್ಯವನ್ನು ಸೇವಿಸುತ್ತಿದ್ದರೆಂದು ಧ್ರುವ್ ರಾಠಿ (Dhruv Rathee Insult to Hindu Deities) ಹರಿಬಿಟ್ಟಿದ್ದ ವಿಡಿಯೋವನ್ನು ಭಾರತದಲ್ಲಿ ಪ್ರಸಾರವಾಗದಂತೆ ಮಾಡಲಾಗಿದ್ದು, ಜಾಗತಿಕವಾಗಿ ಈ ವಿಡಿಯೋವನ್ನು ತೆಗೆದು ಹಾಕುವುದಾಗಿ ಗೂಗಲ್ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಈ ವಿಡಿಯೋಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿ ಗೂಗಲ್ ಅನ್ನು ಸಂಪರ್ಕಿಸಿ ಈ ವಿಡಿಯೋವನ್ನು ನಿಷೇಧ ಮಾಡುವುದಾಗಿ ಕೇಳಿಕೊಂಡ ಬೆನ್ನಲ್ಲೆ ತಾವು ಕ್ರಮ ಕೈಗೊಂಡಿದ್ದಾಗಿ ಗೂಗಲ್ ನ್ಯಾಯಪೀಠಕ್ಕೆ ತಿಳಿಸಿದೆ.
ಹಿಂದೂಗಳ ಭಾವನೆಗೆ ಧಕ್ಕೆ!
ಧ್ರವ್ ರಾಠಿ ಮಾರ್ಚ್ 21, 2026 ರಲ್ಲಿ ಹಂಚಿಕೊಂಡಿದ್ದ ಹಿಂದೂಗಳು ದನದ ಮಾಂಸವನ್ನು ಸೇವಿಸುತ್ತಾರೆಯೇ? ಕೇರಳಾ ಸ್ಟೋರಿ 2 ವಿಶ್ಲೇಷಣೆ ಎಂಬ ವಿಡಿಯೋದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ್ದಾನೆ. ಇದರಿಂದ ಧಾರ್ಮಿಕ ನಂಬಿಕೆಗೆ, ಆಚರಣೆಗೆ ಧಕ್ಕೆ ಉಂಟಾಗಿದೆ ಎಂದು ವಕೀಲೆ ಅಮಿತಾ ಸಚ್ಚದೇವಾ ಪಿಐಎಲ್ ಸಲ್ಲಿಸಿದ್ದರು.
ನಂತರ ಈ ಕುರಿತು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ, ಗೂಗಲ್ ಅನ್ನು ಸಂಪರ್ಕಿಸಿ, ಈಗ ವಿಡಿಯೋ ಭಾರತದಲ್ಲಿ ಪ್ರಸಾರಚಾಗದಂತೆ ಮಾಡಲಾಗಿದೆ. ಆದರೆ VPN ಮೂಲಕ ಈ ವಿಡಿಯೋವನ್ನು ನೋಡಲು ಸಾಧ್ಯವಾಗುವ ಕಾರಣ ಬೇರೆ ದೇಶದಲ್ಲಿ ಕೂಡ ಈ ವಿಡಿಯೋ ಪ್ರಸಾರವಾಗದಂತೆ ಮಾಡಬೇಕು ಎನ್ನುವುದು ಅಮಿತಾ ಸಚ್ಚದೇವಾ ಅವರ ವಾದವಾಗಿದೆ.
ಅಮಿತಾ ಅವರು ಹೇಳಿದಂತೆ, ಧ್ರವ್ ರಾಠಿ ಅವರ ಈ ವಿಡಿಯೋ, ಅವಹೇಳನಾಕಾರಿ, ಪ್ರಚೋದನಾಕಾರಿ ಹಾಗೂ ಧಾರ್ಮಿಕ ಸೂಕ್ಷ್ಮ ಸಂಗತಿಯಾಗಿದ್ದು, ಇಂತಹ ವಿಡಿಯೋಗಳಿಂದ ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196, 299 ಮತ್ತು 302 ರ ಅಡಿಯಲ್ಲಿ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದೆ ಎಂದು ಅಮಿತಾ ವಾದ ಮಂಡಿಸಿದ್ದರು, (ಏಜನ್ಸೀಸ್).