Dharmendra Pradhan's daughter quits Instagram
- ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ
- ಇನ್ಸ್ಟಾಗ್ರಾಮ್ನಲ್ಲಿ ಧರ್ಮೇಂದ್ರ ಪ್ರಧಾನ್ ಮಗಳ ವಿದೇಶದ ಶಿಕ್ಷಣದ ವಿರುದ್ಧ ಕಿಡಿಕಾರಿದ ನೆಟ್ಟಿಗರು
- ಟ್ರೋಲ್ಗೆ ಒಳಗಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಖಾತೆ ಡಿ ಆಕ್ಟೀವೇಟ್ ಮಾಡಿದ ನೈಮಿಷಾ ಪ್ರಧಾನ್
ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ಕೇಂದ್ರ ಶಿಕ್ಷಣ ಸಚಿವರ ಮಗಳು ನೈಮಿಷಾ ಪ್ರಧಾನ್(Dharmendra Pradhan's daughter quits Instagram ) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ.
ಐಡಿ ಹುಡುಕಿ ಕಾಮೆಂಟ್ ಮಾಡಿದ ನೆಟ್ಟಿಗರು
ಸೋಮವಾರ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ನಡೆದ ಹಲ್ಲೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ ಅವರ ಮಗಳು ನೈಮಿಷಾ ಪ್ರಧಾನ್ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿರುವ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಖಾತೆಯ ಐಡಿಯನ್ನು ಜಾಲಾಡಿ, ಪೋಸ್ಟ್‌ಗಳ ಕಾಮೆಂಟ್ ವಿಭಾಗದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.
ಕೆಲವು ಬಳಕೆದಾರರು 'ಟಫ್ಟ್ಸ್ ಯುನಿವರ್ಸಿಟಿ'ಯ ಸೋಶಿಯಲ್ ಮೀಡಿಯಾದ ಪುಟಗಳಲ್ಲೂ ಕಾಮೆಂಟ್ ಮಾಡಿ ಆಕೆಯ ವಿದೇಶಿ ಶಿಕ್ಷಣವನ್ನು ಪ್ರಶ್ನಿಸಿದ್ದಾರೆ
ನೈಮಿಷಾ ಯಾರು?
ಧರ್ಮೇಂದ್ರ ಪ್ರಧಾನ್ ನೈಮಿಷಾ ಪ್ರಧಾನ್ ಮ್ಯಾಸಚೂಸೆಟ್ಸ್‌ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಾದಿಂದ ಎಲ್ಎಲ್ಎಂ (LL.M.) ಪದವಿ ಪೂರೈಸಿದ್ದಾರೆ. 2023ರಲ್ಲಿ ಪದವಿ ಪೂರೈಸಿರುವ ಅವರು ಪ್ರಸ್ತುತ ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟನರ್ಶಿಪ್ಫೋರಂ ಸಂಸ್ಥೆಯಲ್ಲಿ ಸೀನಿಯರ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಶಿಕ್ಷಣ ಸಚಿವರ ಮಗಳು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಿರುವುದನ್ನು ಪ್ರಶ್ನಿಸಿದ ಅನೇಕರು, ಇದು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲಿರುವ ನಂಬಿಕೆಯ ಕೊರತೆಯನ್ನು ಎತ್ತಿಹಿಡಿಯುತ್ತದೆ ಎಂದು ವಾದಿಸಿದ್ದಾರೆ.
ಪರ-ವಿರೋಧ ಚರ್ಚೆ
ರಾಜಕೀಯ ವಿಮರ್ಶೆಗಳು ಮತ್ತು ಪ್ರಶ್ನೆಗಳು ಜನಪ್ರತಿನಿಧಿಗಳು ಹಾಗೂ ನೀತಿ ನಿರೂಪಕರಿಗೆ ಮಾತ್ರ ಸೀಮಿತವಾಗಿರಬೇಕೇ ಹೊರತು ಅವರ ರಕ್ತಸಂಬಂಧಿಗಳಿಗಲ್ಲ ಎಂದು ಕೆಲವರು ನೈಮಿಷಾ ಪರ ನಿಂತಿದ್ದಾರೆ.
ಧರ್ಮೇಂದ್ರ ಪ್ರಧಾನ್ ಏನಂದ್ರು?
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗಗೊಂದಲ ಸೃಷ್ಟಿಸಲು ವಿದ್ಯಾರ್ಥಿಗಳನ್ನು ಗಾಳವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಾರ್ವಜನಿಕವಾಗಿ ತೊಂದರೆ ಉಂಟು ಮಾಡಿದ್ದಾರೆ. ಜೊತೆಗೆ ಭದ್ರತಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಿದರು, (ಏಜೆನ್ಸೀಸ್).