Dharmendra Pradhan resignationKailash Vijayvargiya statement
- ಪ್ರತಿಭಟನೆಯ ಮೊದಲ ದಿನವೇ ರಾಜೀನಾಮೆ ನೀಡಲು ಮುಂದಾಗಿದ್ದ ಧರ್ಮೇಂದ್ರ ಪ್ರಧಾನ್
- ಹೈಕಮಾಂಡ್ ಸೂಚನೆಯಂತೆ ಪರಿಸ್ಥಿತಿ ಬಂದಾಗ ಕ್ಷಣಮಾತ್ರದಲ್ಲಿ ರಾಜೀನಾಮೆ ನೀಡಿದ ಪ್ರಧಾನ್.
- ಬಾಂಗ್ಲಾಮತ್ತು ಶ್ರೀಲಂಕಾದಂತೆ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ವಿದೇಶಿ ಶಕ್ತಿಗಳ ಪಿತೂರಿ ವಿಫಲ ಎಂದ ಕೈಲಾಶ್ ವಿಜಯ್‌ವರ್ಗಿಯಾ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಕಾಕ್ರೋಚ್ ಜನತಾ ಪಾರ್ಟಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ ಮೊದಲ ದಿನವೇ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯ್‌ವರ್ಗಿಯಾ ಸ್ಫೋಟಕ ವಿಚಾರವನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ
ವಿದ್ಯಾರ್ಥಿ ಜೀವನದಿಂದ ರಾಜಕೀಯದವರೆಗೂ ಧರ್ಮೇಂದ್ರ ಅವರನ್ನು ಬಲ್ಲೆ ಎಂದು ತಿಳಿಸಿದ ಮಧ್ಯಪ್ರದೇಶ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಕೈಲಾಶ್ ವಿಜಯ್‌ವರ್ಗಿಯಾ, ಧರ್ಮೇಂದ್ರ ಪ್ರಧಾನ್ ಅವರ ಪ್ರಾಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವವನ್ನು ಪ್ರಶಂಸಿದರು.
ಕೈಲಾಶ್ ವಿಜಯ್‌ವರ್ಗಿಯಾ ಹೇಳಿದ್ದೇನು?
ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಾದ ಲೋಪದೋಷ ಸಂಬಂಧ ಪ್ರತಿಭಟನೆ ನಡೆಸಲು ಶುರುಮಾಡಿದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲು ಬಯಸಿದ್ದರು. ರಾಜೀನಾಮೆಯಿಂದ ಪಕ್ಷಕ್ಕೆ ಅಥವಾ ಪರಿಸ್ಥಿತಿಗೆ ಪರಿಹಾರ ಸಿಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.
ಆದರೆ ಪಕ್ಷದ ಅಧ್ಯಕ್ಷರು ಅದನ್ನು ತಿರಸ್ಕರಿಸಿದ್ದರು. ನಂತರ ಯಾವಾಗ ಪಕ್ಷವು ಅವರು ಕೆಳಗಿಳಿಯಬೇಕು ಎಂದು ನಿರ್ಧರಿಸಿತೋ, ಆಗ ಕೇವಲ ಒಂದು ಸೆಕೆಂಡ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದು ಒಬ್ಬ ಉತ್ತಮ ಕಾರ್ಯಕರ್ತನ ಒಳ್ಳೆಯ ಲಕ್ಷಣ. ಎಂದು ಕೈಲಾಶ್ ವಿಜಯ್‌ವರ್ಗಿಯಾ ಹೇಳಿದರು.
ವಿದೇಶಿ ಶಕ್ತಿಗಳ ಪಿತೂರಿ ಆರೋಪ
ದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವ್ಯಂಗ್ಯ ರಾಜಕೀಯ ಚಳವಳಿಯ ನೇತೃತ್ವದಲ್ಲಿ ತಿಂಗಳಿಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯ ತೀವ್ರತೆಯ ಬಳಿಕ ಪ್ರಧಾನ್ ರಾಜೀನಾಮೆ ಘೋಷಿಸಿದ್ದರು. ಪ್ರತಿಭಟನೆಯನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವ ದೃಢಸಂಕಲ್ಪದಿಂದಲೇ ತಾವು ಹುದ್ದೆ ತ್ಯಜಿಸಿರುವುದಾಗಿ ಪ್ರಧಾನ್ ತಿಳಿಸಿದ್ದರು.
ವಿದೇಶಿ ಶಕ್ತಿ ವಿಫಲ
ಬಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಡೆದಂತೆ ಹಿಂಸಾಚಾರವನ್ನು ಸೃಷ್ಟಿಸಿ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ವಿದೇಶಿ ಶಕ್ತಿಗಳ ಸಂಚು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ವಿಫಲಗೊಂಡಿದೆ ಎಂದು ವಿಜಯವರ್ಗೀಯ ತಿಳಿಸಿದರು.
ಮುಂದುವರೆದು, ವಿದ್ಯಾರ್ಥಿಗಳು ಸ್ವತಃ ಆಂದೋಲನವನ್ನು ಹುಟ್ಟುಹಾಕಿದರು ಮತ್ತು ಕಾಂಗ್ರೆಸ್ ಕೇವಲ ಅವರ ಹಿಂದೆ ನಿಂತಿತ್ತು ಅಷ್ಟೇ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ವಿರೋಧ ಪಕ್ಷಗಳು ಸಂಪೂರ್ಣ ನೈತಿಕ ಸ್ಥೈರ್ಯ ಕಳೆದುಕೊಂಡಿದ್ದವು. ಆ ಹತಾಶೆಯಲ್ಲಿದ್ದ ಅವರಿಗೆ ಸಿಜೆಪಿ ಪ್ರತಿಭಟನೆ ಒಂದು ಅಸ್ತ್ರವಾಗಿ ಸಿಕ್ಕಿತು ಎಂದು ವಿಜಯವರ್ಗೀಯ ವಾಗ್ದಾಳಿ ನಡೆಸಿದರು, (ಏಜೆನ್ಸೀಸ್).