Nuclear Bomb 
ದೇಶ

ಇಡೀ ಜಗತ್ತು ಪರಮಾಣು ಬಾಂಬ್​ನಿಂದ ನಾಶವಾದರೂ, ಈ ಜೀವಿ ಮಾತ್ರ ಬದುಕುಳಿಯುತ್ತದೆ!

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನಿಗಳು ಆಶ್ಚರ್ಯಕರವಾದ ಆವಿಷ್ಕಾರ ಬಹಿರಂಗ
  • ಪರಮಾಣು ಬಾಂಬ್​ಗಳಿಗೂ ನಾಶವಾಗದ ಜಿರಳೆಗಳು!
ಬೆಂಗಳೂರು: ಒಮ್ಮೆ ಊಹೆ ಮಾಡಿಕೊಳ್ಳಿ ಈ ಜಗತ್ತು ಪರಮಾಣು ಬಾಂಬ್​ಗಳಿಂದ ನಾಶವಾದರೆ ಯಾರಾದರರೂ ಬದುಕುಳಿಯುದುಂಟೆ! ಆದರೆ, ಸಂಶೋಧನೆಗಳ ಪ್ರಕಾರ, ಈ ಒಂದು ಜೀವಿ ಮಾತ್ರ ಬದುಕುಳಿಯಲಿದೆ. ಅಲ್ಲದೆ, ಕಳೆದ ಹಲವು ವರ್ಷಗಳಿಂದೆ ಭೂಮಿ ಮೇಲೆ ನಡೆದ ಪರಮಾಣು ಬಾಂಬ್​ ದಾಳಿ ಬಳಿಕ ಈ ಜೀವಿಗಳು ಬದುಕುಳಿದ್ದಿದ್ದವು ಎಂದು ಸಾಬೀತಾಗಿದೆ.
ಹೌದು, ಎರಡನೇ ಮಹಾಯುದ್ಧದ ಬಳಿಕ ವಿಜ್ಞಾನಿಗಳು ಸಂಶೋಧನೆಯಿಂದ ತಿಳಿದು ಬಂದಿದ್ದೇನೆಂದರೆ ಜಿರಳೆ ಮಾತ್ರ ಬದುಕುಳಿದ್ದು ಕಂಡುಬಂದಿದೆ. ಅದು ಕೇವಲ ಒಂದು ಅಥವಾ ಎರಡಲ್ಲ ಸಹಸ್ರಾರು ಸಂಖ್ಯೆಯಲ್ಲಿ ಬದುಕುಳಿದ್ದವು ಎಂದು ವರದಿ ಹೇಳಿದೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ನಡೆದ ಪರಮಾಣು ಬಾಂಬ್ ದಾಳಿಗಳು ಮಾನವ ನಾಗರಿಕತೆಯ ದುರ್ಬಲತೆಯ ಬಗ್ಗೆ ಜಗತ್ತನ್ನು ಚಿಂತಿಸುವಂತೆ ಮಾಡಿದವು.ಪರಮಾಣು ವಿಕಿರಣವು ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲವನ್ನೂ ನಾಶಮಾಡಿದರೆ, ವಿನಾಶದ ನಂತರ ಆ ಪ್ರದೇಶವನ್ನು ಸಮೀಕ್ಷೆ ಮಾಡಿದ ವಿಜ್ಞಾನಿಗಳು ಆಶ್ಚರ್ಯಕರವಾದ ಆವಿಷ್ಕಾರವನ್ನು ಬಹಿರಂಗಪಡಿಸಿದರು. ಅದು ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜೀವಂತವಾಗಿರುವುದು ಕಂಡುಬಂದಿದೆ.

ಜಿರಳೆಗಳು ಬದುಕುಳಿದ್ದೇಗೆ..?

ಹೆಚ್ಚಿನ ಮಟ್ಟದ ವಿಕಿರಣವು ಮನುಷ್ಯರನ್ನು ತಕ್ಷಣವೇ ಕೊಲ್ಲಬಹುದಾದರೂ ಜಿರಳೆಗಳು ಹೇಗೆ ಬದುಕುಳಿದವು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ವ್ಯಾಪಕವಾದ ಸಂಶೋಧನೆಯನ್ನು ಪ್ರಾರಂಭಿಸಿದರು. ಈ ಸಂಶೋಧನೆಗಳು ಜಿರಳೆಗಳ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಏರಿಸುತ್ತವೆ. ಮೊದಲನೆಯದಾಗಿ, ಜಿರಳೆಗಳು ಮನುಷ್ಯರಿಗಿಂತ ಹೆಚ್ಚಿನ ವಿಕಿರಣ ಸಹಿಷ್ಣುತೆಯನ್ನು ಹೊಂದಿವೆ ಎಂದು ಕಂಡುಹಿಡಿಯಲಾಯಿತು. 800 ರಾಡ್‌ಗಳಷ್ಟು ಕಡಿಮೆ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಮನುಷ್ಯರು ಸಾಯಬಹುದಾದರೂ, ಜಿರಳೆಗಳು 10,000 ರಾಡ್‌ಗಳವರೆಗೆ ತಡೆದುಕೊಳ್ಳಬಲ್ಲವು ಎಂದು ಕಂಡುಕೊಂಡಿದ್ದಾರೆ.

ವಿಕಿರಣವು ಜಿರಳೆಗಳ ಮೇಲೆ ಏಕೆ ಪರಿಣಾಮಕಾರಿಯಲ್ಲ..?

ಜಿರಳೆಗಳು ವಿಕಿರಣದಿಂದ ಏಕೆ ಸಾಯುವುದಿಲ್ಲ ಎಂಬುದಕ್ಕೆ ಉತ್ತರವು ಅವುಗಳ ದೇಹದ ಜೀವಕೋಶಗಳ ಗುಣಲಕ್ಷಣದಲ್ಲಿದೆ. ಮಾನವರಲ್ಲಿ, ಜೀವಕೋಶಗಳು ಬಹಳ ಬೇಗನೆ ವಿಭಜನೆಯಾಗುತ್ತವೆ ಮತ್ತು ಅವು ವೇಗವಾಗಿ ವಿಭಜನೆಯಾದಷ್ಟೂ ವಿಕಿರಣದ ಪರಿಣಾಮಗಳು ಹೆಚ್ಚು ಮಾರಕವಾಗುತ್ತವೆ. ಜಿರಳೆಗಳಲ್ಲಿ, ಈ ಪ್ರಕ್ರಿಯೆಯು ತುಂಬಾ ನಿಧಾನವಾಗಿರುತ್ತದೆ, ವಾರಕ್ಕೊಮ್ಮೆ ಮಾತ್ರ ಸಂಭವಿಸುತ್ತದೆ. ಅದಕ್ಕಾಗಿಯೇ ವಿಕಿರಣವು ಅವುಗಳ ಜೀವಕೋಶಗಳಿಗೆ ತಕ್ಷಣ ಹಾನಿ ಮಾಡುವುದಿಲ್ಲ (ಏಜೆನ್ಸೀಸ್​).