ಭಾರತೀಯ ರೈಲ್ವೆನಲ್ಲಿ ಸಂಚರಿಸಿದ ಕಿಮ್​ ದಂಪತಿ 
ದೇಶ

ರೈಲಿನಲ್ಲಿ ಕಿರಿಕಿರಿ ನಡುವೆಯೂ ಸಿಕ್ಕಿತು ಕುಟುಂಬದ ಪ್ರೀತಿ! ಭಾರತೀಯ ಪರಂಪರೆಗೆ ಮನಸೋತ ವಿದೇಶಿ ದಂಪತಿ | Foreign Couple

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ರೈಲ್ವೆನಲ್ಲಿ ಸಂಚರಿಸಿದ ಕೆನಡಾ ದಂಪತಿ
  • ಭಾರತೀಯರ ಹೃದಯ ವೈಶಾಲತೆಗೆ ಮನಸೋತ ಕಿಮ್​ ದಂಪತಿ
  • ನಿದ್ದೆ ಬೇಕಿತ್ತು ಆದರೆ ಜೀವಮಾನಕ್ಕೆ ಸಾಕಾಗುವಷ್ಟು ನೆನೆಪುಗಳು ದೊರೆತವು ಎಂದು ಬರೆದುಕೊಂಡ ಜೋಡಿ
ಜಲಗಾಂವ್: ಕೆನಡಾದ ಕಿಮ್ ಗ್ರೀನ್‌ವುಡ್ ಮತ್ತು ಅವರ ಸಂಗಾತಿ (Foreign Couple) ಜಲಗಾಂವ್‌ನಿಂದ ಚಂದ್ರಾಪುರಕ್ಕೆ ಏಳು ಗಂಟೆಗಳ ರೈಲು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದ್ದರು. ಸ್ಲೀಪರ್ ಕ್ಲಾಸ್ ಅಂದಮೇಲೆ ಆರಾಮವಾಗಿ ನಿದ್ದೆ ಮಾಡಿಕೊಂಡು ಹೋಗಬಹುದು ಎಂಬುದು ಅವರ ಪ್ಲಾನ್ ಆಗಿತ್ತು. ಆದರೆ ರೈಲನ್ನು ಹತ್ತಿದ ಬಳಿಕ ಅವರಿಗೆ ಭಾರತೀಯ ರೈಲ್ವೆಯ ಸ್ಲೀಪರ್ ಕೋಚ್​ನ ಅಸಲಿ ಮುಖ ಅನಾವರಣಗೊಂಡಿದೆ.

ನಿದ್ದೆ ಮಾಯ, ಮಕ್ಕಳು ಪ್ರತ್ಯಕ್ಷ!

ಗ್ರೀನ್‌ವುಡ್ ಅವರ ಸಂಗಾತಿ ಸೀಟಿನ ಮೇಲೆ ಮಲಗಿ ವಿಶ್ರಾಂತಿ ಪಡೆಯಲು ಹೋದರೆ, ಸುತ್ತಲೂ ಸ್ಥಳೀಯ ಮಕ್ಕಳ ದಂಡೇ ಜಮಾಯಿಸಿತ್ತು. ಮೊದಲೇ ವಿದೇಶಿ ಪ್ರವಾಸಿಗರು, ಅವರ ಮಾತು, ಬಟ್ಟೆಬರೆ ನೋಡಿ ಭಾರತೀಯ ಮಕ್ಕಳು ಬಿಡುತ್ತಾರೆಯೇ? ಕಿಮ್ ಮತ್ತು ಅವರ ಸಂಗಾತಿಗೆ ನಿದ್ದೆ ಮಾಡಲು ಸಾಧ್ಯವೇ ಆಗಲಿಲ್ಲ. ಸಾಮಾನ್ಯವಾಗಿ ಯಾರಾದರೂ ಇಂತಹ ಸಂದರ್ಭದಲ್ಲಿ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಆದರೆ ಈ ಕೆನಡಿಯನ್ ಜೋಡಿ ಮಾತ್ರ ಆ ಮಕ್ಕಳ ಕಿಟಲೇಯನ್ನು ಎಂಜಾಯ್ ಮಾಡಿದರು.

ರೈಲಿನಲ್ಲಿ ಕಂಡ 'ದೊಡ್ಡ ಕುಟುಂಬ'

ತಮ್ಮ ರೈಲಿನ ಪಯಣದ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಗ್ರೀನ್‌ವುಡ್, ನಮ್ಮ ಬೋಗಿ ಸೇರಿದ್ದ ಜನರೆಲ್ಲರೂ ಬೇರೆ ಬೇರೆ ಕುಟುಂಬದವರು. ಆದರೆ ಅವರೆಲ್ಲರೂ ಸೇರಿ ಒಂದು ದೊಡ್ಡ ಕುಟುಂಬದಂತೆ ಇರುವುದನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಭಾರತದ ಈ ಸಮುದಾಯ ಪ್ರಜ್ಞೆ ಅದ್ಭುತ, ಎಂದು ಅವರು ಹೊಗಳಿದ್ದಾರೆ.
ಸಹ ಪ್ರಯಾಣಿಕರು ನಮ್ಮ ದೇಶದಲ್ಲಿರುವವರಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತಾವು ಮನೆಯಿಂದ ತಂದಿದ್ದ ಚಪಾತಿ, ಪಲ್ಯ ಮತ್ತು ರೈಲಿನಲ್ಲಿ ಖರೀದಿಸಿದ ಸ್ನ್ಯಾಕ್ಸ್​ನ್ನು ನಮ್ಮ ಜೊತೆಗೂ ಹಂಚಿಕೊಡರು ಎಂದು ಗ್ರೀನ್‌ವುಡ್ ಬರೆದುಕೊಂಡಿದ್ದಾರೆ. ನಮಗೆ ಬೇಕಾಗಿದ್ದು ಏಳು ಗಂಟೆಗಳ ನಿದ್ದೆಯಾಗುತ್ತು,ಆದರೆ ಜೀವಮಾನ ಸಾಕಾಗುವಷ್ಟು ನೆನಪುಗಳನ್ನು ನಾವು ಪಡದಿದ್ದೆವೆ ಎಂದು ಕಿಮ್ ಖುಷಿ ಹಂಚಿಕೊಂಡಿದ್ದಾರೆ.

ನೆಟ್ಟಿಗರ ಮೆಚ್ಚುಗೆ

ಈ ವಿಡಿಯೋ ಮತ್ತು ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪ್ರವಾಸಿಗರ ಮುಕ್ತ ಮನಸ್ಸನ್ನು ಶ್ಲಾಘಿಸುತ್ತಿದ್ದಾರೆ. ಒಬ್ಬ ಬಳಕೆದಾರರು, ಹೆಚ್ಚಿನ ಜನರು ನಿದ್ದೆ ಕೆಟ್ಟರೆ ಅಸಮಾಧಾನಗೊಳ್ಳುತ್ತಾರೆ, ಆದರೆ ನೀವು ಇದನ್ನು ಸಾಂಸ್ಕೃತಿಕ ಅನುಭವವಾಗಿ ಸ್ವೀಕರಿಸಿದ್ದು ಗ್ರೇಟ್! ಎಂದು ಬರೆದಿದ್ದಾರೆ. ಮತ್ತೊಬ್ಬರು, "ಭಾರತೀಯ ರೈಲಿನಲ್ಲಿ ಬಸ್ ಅಥವಾ ವಿಮಾನಕ್ಕಿಂತ ಹೆಚ್ಚು ಕಥೆಗಳು ಸಿಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಕಮೆಂಟ್ ಮಾಡಿದ್ದಾರೆ.
ಭಾರತೀಯ ರೈಲ್ವೆಯ ಸ್ಲೀಪರ್ ಕ್ಲಾಸ್‌ನಲ್ಲಿ ಇರುವ ಗದ್ದಲ, ಜನರ ಸೌಹಾರ್ದತೆ ಮತ್ತು ಹಂಚಿ ತಿನ್ನುವ ಗುಣವೇ ನಮ್ಮ ದೇಶದ ಅಸಲಿ ಸೌಂದರ್ಯ ಎಂಬುದನ್ನು ಈ ಕೆನಡಾದ ಜೋಡಿ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ,(ಏಜನ್ಸೀಸ್​).