ಬೀದಿಯಲ್ಲೇ ಹೆರಿಗೆ ಮಾಡಿಸಿದ ವೈದ್ಯರು
- ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ ನೋವು
- ಬೀದಿಯಲ್ಲೇ ಹೆರಿಗೆ ಮಾಡಿಸಿದ ವೈದ್ಯರು
- ನೆಟ್ಟಿಗರಿಂದ ಅಪಾರ ಮೆಚ್ಚುಗೆ
ವೈರಲ್: ಜೀವನದಲ್ಲಿ ಕೆಲವೊಮ್ಮೆ, ಯಾವುದೇ ಸಿದ್ಧತೆ, ಯಾವುದೇ ತಯಾರಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಕೆಲಸ ಮಾಡಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಇತ್ತೀಚೆಗೆ, ಇದೇ ರೀತಿಯ ಸನ್ನಿವೇಶದ ವಿಡಿಯೋವೊಂದು ಸೋಷಿಯಲ್ ಮೀಡಿಯಾ (Viral Video) ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಗರ್ಭಿಣಿಯೊಬ್ಬಳಿಗೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡುರಸ್ತೆಯಲ್ಲಿಯೇ ಮಹಿಳಾ ವೈದ್ಯರು ತೋರಿದ ಸಾಹಸ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಆಸ್ಪತ್ರೆ ತಲುಪುವ ಮೊದಲೇ ಬೀದಿಯಲ್ಲಿ ತೀವ್ರ ಹೆರಿಗೆ ನೋವು ಅನುಭವಿಸಿ ಪ್ರಜ್ಞಾಹೀನ ಸ್ಥಿತಿಗೆ ತಲುಪುವಂತಾಗುತ್ತಾಳೆ. ಆದರೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಿಳಾ ವೈದ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಡುರಸ್ತೆಯಲ್ಲೇ ಹೆರಿಗೆ ಮಾಡಿಸಿದ್ದಾರೆ.
ದುಪ್ಪಟ್ಟಾದಿಂದ ಆಪರೇಷನ್ ಥಿಯೇಟರ್ ನಿರ್ಮಾಣ!
ಈ ಘಟನೆಯನ್ನು ನೋಡುತ್ತಿದ್ದ ಸಾರ್ವಜನಿಕರು ವೈದ್ಯರ ಸಹಾಯಕ್ಕೆ ಧಾವಿಸಿ ಬಂದು ತಮ್ಮ, ಸೀರೆ, ದುಪ್ಪಟ್ಟಾ ಹಾಗೂ ಮಹಿಳೆಯರೇ ಸುತ್ತುವರಿದು ನಿಂತು ಕೃತಕ ಆಪರೇಷನ್ ಥಿಯೇಟರ್ನ್ನು ನಿರ್ಮಿಸಿದ್ದಾರೆ. ನಂತರ ಆಪರೇಷನ್ ಮಾಡಲು ವೈದ್ಯರು ಮುಂದಾಗಿದ್ದು, ಕೆಲ ಸಮಯದ ನಂತರ ಮಗುವನ್ನು ಕೈಯಲ್ಲಿ ಹಿಡಿದು ವೈದ್ಯಾಧಿಕಾರಿಗಳು ಆಚೆ ಬಂದಿದ್ದಾರೆ. ಪ್ರಸ್ತುತ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಫುಲ್ ವೈರಲ್ ಆಗುತ್ತಿದ್ದು, ಜನರ ಮನಸ್ಸನ್ನು ಗೆದ್ದಿದ್ದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆಯ ಕಮೆಂಟ್ಗಳು ಹರಿದುಬಂದಿವೆ. ಇಂತಹ ವೈದ್ಯರಿರುವ ಕಾರಣದಿಂದಲೇ ನಮ್ಮಲ್ಲಿ ಮಳೆ-ಬೆಳೆ ಸರಿಯಾಗಿ ಆಗುತ್ತಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಆ ವೈದ್ಯರ ಸಮಯ ಪ್ರಜ್ಞೆಗೆ ನನ್ನದೊಂದು ಸಲಾಂ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದರೆ, ಆ ವೈದ್ಯರಿಗೆ ಸಹಕರಿಸಿದ ಸಾರ್ವಜನಿಕರಿಗೂ ವಂದನೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್).