ಬ್ಲಿಂಕಿಟ್ ಡೆಲಿವರಿ ಹುಡುಗನೊಬ್ಬ ಗಂಟೆಗಟ್ಟಲೆ ಸ್ಥಬ್ದವಾಗಿ ನಿಂತಿರುವ ವಿಡಿಯೋ ವೈರಲ್
- ಬ್ಲಿಂಕಿಟ್ ಡೆಲಿವರಿ ಹುಡುಗನೊಬ್ಬ ಗಂಟೆಗಟ್ಟಲೆ ಸ್ಥಬ್ದವಾಗಿ ನಿಂತಿರುವ ವಿಡಿಯೋ ವೈರಲ್
- ಚಂಡೀಗಢದ ಸೆಕ್ಟರ್ 33 ರಲ್ಲಿ ನಡೆದಿರುವ ಘಟನೆ
- ಜೋಂಬಿ ವೈರಸ್ ಎಂದ ನೆಟ್ಟಿಗರು
- ಇದು ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಎಂದ ಜನ
ಚಂಡೀಗಢ: ಭಾರತದಲ್ಲಿ ಇಂರ್ಟನೆಟ್ ಕ್ರಾಂತಿಯಾದ ದಿನದಿಂದ ಒಂದಿಲ್ಲೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಕೆಲ ದಿನಗಳ ಹಿಂದೆ ಚಂಡೀಗಢದಲ್ಲಿ ಸೆರೆ ಹಿಡಿಯಲಾದ ಎಂಬ ವಿಡಿಯೋ ಸಖತ್ ಸುದ್ದಿ ಮಾಡುತ್ತಿದೆ.
ಕಲ್ಲಿನಿಂತೆ ನಿಂತಿರವ ವ್ಯಕ್ತಿ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಒಬ್ಬ ಬ್ಲಿಕಿಂಟ್ ಡೆಲಿವರಿ ಹುಡುಗ ಬಾಯಲ್ಲಿ ಬೀಡಿಯನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸುಮಾರು ಎರಡರಿಂದ ಮೂರು ಗಂಟೆ ಒಂದೇ ಸ್ಥಳದಲ್ಲಿ ನಿಂತಿರುವುದು ಸ್ಥಳೀಯರಲ್ಲಿ ಭಯವನ್ನು ಹುಟ್ಟಿಸಿದ ಘಟನೆ ಚಂಡೀಗಢದ ಸೆಕ್ಟರ್ 33 ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಜೋಂಬಿ ವೈರಸ್ ಎಂದ ನೆಟ್ಟಿಗರು!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬೆರಳುಗಳಿಗೆ ಕೆಲಸ ಕೊಟ್ಟಿದ್ದಾರೆ. ಕೆಲವರು ಇದೊಂದು ಜೋಂಬಿ ವೈರಸ್, ಇದು ಅಮೆರಿಕ ಮತ್ತು ಇತರೆ ಯುರೋಪಿಯನ್ ದೇಶಗಳಲ್ಲಿ ಇದನ್ನು ನೋಡಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಮಾದಕ ವಸ್ತುಗಳ ಅತಿಯಾದ ಬಳಕೆಯಿಂದ ಉಂಟಾಗುವ ಸ್ಥಿತಿ, ಪಂಜಾಬ್ ಮತ್ತು ಚಂಡೀಗಢದ ಯುವಕರು ಈ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ದುಃಖದ ಸಂಗತಿ ಎಂದು ಹೇಳಿದ್ದಾರೆ.
ಇನ್ನೂ ಕೆಲ ಬಳಕೆದಾರರು, ಬಹುಶಃ ಇವನು ಮಾನಸಿಕ ಅಸ್ವಸ್ಥನಿರಬೇಕು, ಈ ರೀತಿಯ ಜನರನ್ನು ಡೆಲವರಿ ಕೆಲಸಕ್ಕೆ ತೆಗೆದುಕೊಳ್ಳುವುದು ತಪ್ಪು. ಒಂದು ವೇಳೆ ಡೆಲವರಿ ಸಂದರ್ಭದಲ್ಲಿ ಜನರ ಮೇಲೆ ಹಲ್ಲೆಗೆ ಮುಂದಾದರೆ ಯಾರು ಹೊಣೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಈ ವ್ಯಕ್ತಿ ಯಾರು? ಯಾಕೆ ಹೀಗೆ ಒಂದೇ ಸ್ಥಳದಲ್ಲಿ ತನ್ನ ಮೇಲೆ ಹಿಡಿತ ಕಳೆದುಕೊಂಡು ನಿಂತಿದ್ದ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಇಲ್ಲಿವರೆಗೆ ದೊರೆತಿಲ್ಲ, (ಏಜನ್ಸೀಸ್).