Delhi’s Ola Cab Passenger Recalls ‘Scam’
- ಓಲಾ ಕ್ಯಾಬ್ ಸ್ಕ್ಯಾಮ್ನಿಂದ ಕಾಪಾಡಲು ಪ್ರಯಾಣಿಕನ ಮನವಿ.
- ಆರಂಭದಲ್ಲಿ 1,285 ರೂ. ತೋರಿಸಿದ್ದ ಪ್ರಯಾಣದ ದರ ಕೊನೆಗೆ 5,662 ರೂ.ಗೆ ಏರಿಕೆ
- ಮಹಿಪಾಲ್‌ಪುರದಿಂದ ಯಶೋಭೂಮಿಗೆ 6 ಗಂಟೆ ಹಾಗೂ 60 ಕಿ.ಮೀ ಪ್ಯಾಕೇಜ್‌ನಲ್ಲಿ ಕ್ಯಾಬ್ ಬುಕ್
Delhi’s Ola Cab Passenger Recalls Scam: ಇತ್ತೀಚೆಗೆ ದೆಹಲಿಯ ಪ್ರಯಾಣಿಕರೊಬ್ಬರು ಓಲಾ ಕ್ಯಾಬ್ ಬುಕ್ ಮಾಡಿ, ಕೊನೆಗೆ ದುಬಾರಿ ಹಣ ಪಾವತಿಸಿದ ಬಗ್ಗೆ ರೆಡ್ಡಿಟ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಏಜೆನ್ಸಿಯ ಸ್ಕ್ಯಾಮ್ ಬಗ್ಗೆ ಸಹಾಯ ಬೇಕು ಎಂದು NewDelhi..Immediate_Baker2096 ಎನ್ನುವ ಖಾತೆಯಿಂದ ಬರೆದುಕೊಳ್ಳಲಾಗಿದೆ.
ಓಲಾ ಮಾತ್ರವಲ್ಲ ಇತರ ಕ್ಯಾಬ್, ಆಟೋ ಬುಕ್ಕಿಂಗ್ ವಾಹನಗಳು ಸಹ ಪ್ರಯಾಣಿಕರಿಗೆ ಹಾಗೂ ರೈಡರ್ ಮತ್ತು ಚಾಲಕರಿಗೆ ಬೇರೆಯದ್ದೇ ಹಣವನ್ನು ತೋರಿಸುತ್ತದೆ. ನಂತರ ಗಮ್ಯ ಸ್ಥಾನ ತಲುಪುವ ಹೊತ್ತಿಗೆ ಮುಂಚೆ ತೋರಿಸಲಾಗಿದ್ದ ಹಣವು ಬದಲಾಗುತ್ತದೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುವ ಪ್ರಸಂಗಳು ಇವೆ.
ರೆಡ್ಡಿಟ್ ಬಳಕೆದಾರ ಬರೆದುಕೊಂಡಿರುವುದು ಹೀಗೆ..
ನಾವು ಬೆಳಿಗ್ಗೆ 10 ಗಂಟೆಗೆ ಓಲಾ ಕ್ಯಾಬ್‌ನಲ್ಲಿ 6 ಗಂಟೆಗಳು (60 ಕಿ.ಮೀ) ಪ್ಯಾಕೇಜ್‌ಗಾಗಿ ಕ್ಯಾಬ್ ಬುಕ್ ಮಾಡಿದ್ದೆವು. ಮಹಿಪಾಲ್‌ಪುರದಲ್ಲಿರುವ ನಮ್ಮ ಹೋಟೆಲ್‌ನಿಂದ ನಮ್ಮನ್ನು ಪಿಕ್ ಮಾಡಿಕೊಂಡು ಯಶೋಭೂಮಿಯಲ್ಲಿ ಡ್ರಾಪ್ ಮಾಡಿದರು.
ನಾವು ಯಶೋಭೂಮಿಯಲ್ಲಿ ನಡೆಯುತ್ತಿದ್ದ ಪ್ರದರ್ಶನದಲ್ಲಿ ಭಾಗವಹಿಸಲು ಹೋಗಿದ್ದೆವು ಮತ್ತು ಮಧ್ಯಾಹ್ನ 3:45 ರವರೆಗೆ ಅಲ್ಲಿಯೇ, ಕೇವಲ ಅಲ್ಲಷ್ಟೇ ಇದ್ದೆವು. ಮಧ್ಯಾಹ್ನ 3:45ಕ್ಕೆ ನಾವು ನಮ್ಮ ವಿಮಾನವನ್ನು ಹಿಡಿಯಲು ನೇರವಾಗಿ ವಿಮಾನ ನಿಲ್ದಾಣಕ್ಕೆ ಹೊರಟೆವು. ಡ್ರೈವರ್ ನಮ್ಮ ಬಳಿ ಕೇಳಿದ ಒಟ್ಟು ಹಣವನ್ನು ನೋಡಿ ನಮಗೆ ತೀವ್ರ ಆಘಾತವಾಯಿತು.
ಕ್ಯಾಬ್ ಬುಕ್ ಮಾಡುವಾಗ ತೋರಿಸಲಾದ ಮೂಲ ದರವು 1285 ರೂ. ಆಗಿತ್ತು, ಆದ್ದರಿಂದ ನಾವು ಇದರ ಸುತ್ತಮುತ್ತ ಅಥವಾ ಸ್ವಲ್ಪ ಹೆಚ್ಚಿಗೆ ಶುಲ್ಕ ವಿಧಿಸಲಾಗುತ್ತದೆ ಎಂದುಕೊಂಡಿದ್ದೆವು. ಆದರೆ ಓಲಾ ಆ್ಯಪ್‌ನಲ್ಲಿ ಒಟ್ಟು ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿ 5662/- ರೂ. ಆಯಿತು ಮತ್ತು ನಮಗೆ ಹೆಚ್ಚುವರಿಯಾಗಿ 250 ಕಿ.ಮೀ ಗೆ ಶುಲ್ಕ ವಿಧಿಸಲಾಗಿದೆ. ಇದು ಹೇಗೆ ಆಯಿತು ಎಂದು ನಮಗೆ ಇನ್ನೂ ತಿಳಿದಿಲ್ಲ.ಓಲಾ ಸಹಾಯವಾಣಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆವು, ಆದರೆ ವಾರಾಂತ್ಯವಾಗಿದ್ದರಿಂದ (Weekend) ನಮಗೆ ತಂಡದ ಯಾರೊಬ್ಬರ ಸಂಪರ್ಕಕ್ಕೂ ಸಿಗಲು ಸಾಧ್ಯವಾಗಲಿಲ್ಲ. ಯಾವುದಾದರೂ ಸಲಹೆಗಳಿದ್ದರೆ ದಯವಿಟ್ಟು ತಿಳಿಸಿ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಏನಂದ್ರು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೀವು ಪ್ರದರ್ಶನ ವೀಕ್ಷಿಸುತ್ತಿದ್ದಾಗ ಡ್ರೈವರ್ ಹಾಗೇ ಸುಮ್ಮನೆ ಕುಳಿತುಕೊಳ್ಳದೆ, ಕಾರನ್ನು ಬೇರೆಡೆ ಓಡಿಸಿರಬಹುದು ಎಂದು ಒಬ್ಬರು ಅಭಿಪ್ರಾಯಪಟ್ಟರೆ, "ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಿ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ" ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಇದೊಂದು ದೊಡ್ಡ ಹಗರಣ ನನಗೂ ನಾಲ್ಕು ವರ್ಷದ ಹಿಂದೆ ಹೀಗೆ ಆಗಿತ್ತು. ಮೀರತ್ ವಿಮಾನ ನಿಲ್ದಾಣಕ್ಕೆ. ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ, ಬೆಂಬಲ ನೀಡುವುದು ಕಷ್ಟ, ಯಾರೂ ಕರೆ ಮಾಡುವುದಿಲ್ಲ. ಗ್ರಾಹಕರ ನ್ಯಾಯಾಲಯಕ್ಕೆ ಮೇಲ್ ಮಾಡಿದ ನಂತರ, ನಿಮಗೆ ಅವರಿಂದ ಕರೆ ಬರುತ್ತದೆ ಮತ್ತು ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಎಂದು ಕಾಲಚೂರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).