CEO 
ದೇಶ

ದೆಹಲಿ ಟ್ರಾಫಿಕ್‌: ಇದು ನರಕದ ಅನುಭವ.. ಮೋದಿ ಜೊತೆಗಿನ ಡಿನ್ನರ್ ಮಿಸ್‌ ಮಾಡಿಕೊಂಡ ವಿದೇಶಿ CEO!

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆಪ್ರತಿಷ್ಠಿತ ಗಾಲಾ ಔತಣಕೂಟದಲ್ಲಿ ಭಾಗವಹಿಸುವ ಅವಕಾಶ ಸಿಗುವುದು ಯಾರಿಗಾದರೂ ಒಂದು ಕನಸಿನ ವಿಷಯ.ಆದರೆ, 'ಅಡಾಪ್ಟಿವ್ ಲ್ಯಾಬ್ಸ್' (Adaption Labs) CEO ಸಾರಾ ಹೂಕರ್ ಅವರಿಗೆ ಈ ಕನಸು ನನಸಾಗುವಮೊದಲೇ ದೆಹಲಿಯ ಟ್ರಾಫಿಕ್ ಜಾಂ ಎಂಬ ಕರಾಳ ವಾಸ್ತವಕ್ಕೆ ಬಲಿಯಾಗಿದೆ.

ಕಂಪ್ಯೂಟರ್‌ವಿಜ್ಞಾನಿ ಮತ್ತು ಉದ್ಯಮಿಯಾಗಿರುವ ಸಾರಾ ಅವರಿಗೆ ಪ್ರಧಾನಿ ಮೋದಿಯವರ ಜೊತೆಗಿನ ಪ್ರತಿಷ್ಠಿತ ಔತಣಕೂಟಕ್ಕೆಆಮಂತ್ರಣವಿತ್ತು. ಕಾರ್ಯಕ್ರಮಕ್ಕೆ ಹೋಗುವ ಮೊದಲು ಉಡುಪು ಬದಲಾಯಿಸಲು (ಗಾಲಾ ಅಟೈರ್) ಹೋಗಿದ್ದ ಸಾರಾ,ವಾಪಸ್ ಬರಲು ಕಾರು ಹತ್ತಿದಾಗ ದೆಹಲಿಯ ರಸ್ತೆಗಳಲ್ಲಿ ಸಿಲುಕಿಕೊಂಡರು. ಕೇವಲ ಕೆಲವೇ ಕಿಲೋಮೀಟರ್ ದೂರತಲುಪಲು ಅವರು ಬರೋಬ್ಬರಿ 4 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯಬೇಕಾಯಿತು!

ತಮ್ಮ ಈ ಕರಾಳಅನುಭವವನ್ನು 'X' (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಅವರು, "ಪ್ರಧಾನಿಯವರ ಜೊತೆಗಿನ ಗಾಲಾಔತಣಕೂಟಕ್ಕೆ ಆಮಂತ್ರಣವಿತ್ತು. ಆದರೆ ಬಟ್ಟೆ ಬದಲಿಸಿ ವಾಪಸ್ ಬರುವಷ್ಟರಲ್ಲಿ 4 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿಸಿಲುಕಿದೆ. ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗದಿದ್ದಕ್ಕೆ ಬೇಸರವಿದೆ, ಕೊನೆಗೆ ರಾತ್ರಿ 11 ಗಂಟೆಗೆಹೋಟೆಲ್ ರೂಮ್ ಸರ್ವಿಸ್ ಆರ್ಡರ್ ಮಾಡಿ ಊಟ ಮಾಡಿದೆ" ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರಪ್ರತಿಕ್ರಿಯೆಗಳು

ಸಾರಾ ಅವರ ಈಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರತದ ಟ್ರಾಫಿಕ್ ಬಗ್ಗೆ ಹಾಸ್ಯಮಯವಾಗಿ ಮತ್ತು ವ್ಯಂಗ್ಯವಾಗಿಕಮೆಂಟ್ ಮಾಡಿದ್ದಾರೆ."ಭಾರತಕ್ಕೆ ಸ್ವಾಗತ, ನಾವು ದಿನಕ್ಕೆ ಸರಾಸರಿ 5 ಗಂಟೆ ಟ್ರಾಫಿಕ್‌ನಲ್ಲೇಕಳೆಯುತ್ತೇವೆ" ಎಂದು ಒಬ್ಬರು ಕಾಲೆಳೆದಿದ್ದಾರೆ. "ನಾನು ಒಮ್ಮೆ ದೆಹಲಿಯಲ್ಲಿ 2 ಗಂಟೆನಡೆದುಕೊಂಡು ಹೋಗಿದ್ದೆ, ಕಾರಿಗಿಂತ ಅದೇ ವೇಗವಾಗಿತ್ತು" ಎಂದು ಇನ್ನೊಬ್ಬರು ದೆಹಲಿಯ ರಸ್ತೆಗಳಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಾರಾ ತಿನ್ನುತ್ತಿದ್ದ ರೂಮ್ ಸರ್ವಿಸ್ ಊಟ ನೋಡಿಮರುಕಪಟ್ಟ ಜನರು, "ದಯವಿಟ್ಟು ಒಬ್ಬ ಸ್ಥಳೀಯ ವ್ಯಕ್ತಿಯನ್ನು ಜೊತೆಗಿಟ್ಟುಕೊಳ್ಳಿ, ದೆಹಲಿಯಒಳ್ಳೆ ಊಟದ ರುಚಿ ತೋರಿಸುತ್ತಾರೆ" ಎಂದು ಸಲಹೆ ನೀಡಿದ್ದಾರೆ.

ಈ ಘಟನೆಯು ರಾಷ್ಟ್ರದರಾಜಧಾನಿಯಾದ ದೆಹಲಿಯಲ್ಲಿ ವಿಐಪಿಗಳಿಗೂ ಮತ್ತು ವಿದೇಶಿ ಪ್ರತಿನಿಧಿಗಳಿಗೂ ಟ್ರಾಫಿಕ್ ಎಂತಹ ದೊಡ್ಡತಲೆನೋವಾಗಿದೆ ಎಂಬುದನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ,(ಏಜೆನ್ಸೀಸ್‌).