ದೇಶ

'ತಿರಂಗಾ ಯಾತ್ರೆ ನಡೆಸುವಂತಿಲ್ಲ'​; ಅಭಿಜಿತ್ ದೀಪ್ಕೆಗೆ ನೋಟಿಸ್ ಕೊಟ್ಟ ದೆಹಲಿ ಪೊಲೀಸರು.. Abhijeet Dipke

  • ಲೆಹರಾ ದೋ ತಿರಂಗಾ ಯಾತ್ರೆಕ್ಕೆ ಬ್ರೇಕ್​ ಹಾಕಿದ ದೆಹಲಿ ಪೊಲೀಸರು.

  • ಪ್ರತಿಭಟನೆ ನಡೆಸದಂತೆ ಅಭಿಜಿತ್​ ದೀಪ್ಕೆಗೆ ಪೊಲೀಸರಿಂದ ನೋಟಿಸ್​ .

  • ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ತಿರಂಗಾ ಯಾತ್ರ ನಡೆಸದಂತೆ ಎಚ್ಚರಿಕೆ.

Delhi Police at Abhijeet Dipke's home: ಕಾಕ್ರೋಚ್​ ಜನತಾ ಪಾರ್ಟಿ(ಸಿಜೆಪಿ)ಯ ಸಂಸ್ಥಾಪಕ ಅಭಿಜಿತ್​ ದೀಪ್ಕೆ ಅವರು ತಂಗಿರುವ ಎನ್‌ಸಿಪಿ-ಎಸ್‌ಸಿಪಿ ವಕ್ತಾರ ಅನೀಶ್ ಗವಾಂಡೆ ಅವರ ನಿವಾಸಕ್ಕೆ ದೆಹಲಿ ಪೊಲೀಸರು ಖುದ್ದಾಗಿ ಭೇಟಿ ನೀಡಿ, ತಿರಂಗಾ ಯಾತ್ರೆ ನಡೆಸದಂತೆ ಸೂಚಿಸಿದ್ದಾರೆ.

ಅ.16ರಂದು ಅಭಿಜಿತ್​ ದೀಪ್ಕೆ ಅವರ ನಿವಾಸಕ್ಕೆ ತೆರಳಿದ ದೆಹಲಿ ಪೊಲೀಸ್​ ಅಧಿಕಾರಿಗಳು, ತಿರಂಗ ಯಾತ್ರೆಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಮೆರವಣಿಗೆಗೆ ಇಳಿಯಬೇಡಿ ಎನ್ನುವ ಸಂದೇಶವನ್ನು ಖುದ್ದಾಗಿ ತಲುಪಿಸಿದ್ದಾರೆ. ಅವರ ಈ ಸಂಭಾಷಣೆಯ ಫೋಟೋ, ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗಿದೆ.

ಎನ್‌ಸಿಪಿ-ಎಸ್‌ಸಿಪಿ ವಕ್ತಾರ ಅನೀಶ್ ಗವಾಂಡೆ ಅವರ ನಿವಾಸದಲ್ಲಿ ತಲುಪಿರುವ ದೆಹಲಿ ಅಭಿಜಿತ್​ ದೀಪ್ಕೆ ಅವರನ್ನು ದೆಹಲಿ ಪೊಲೀಸರು ಭೇಟಿ ಮಾಡಿ ನೋಟಿಸ್​ ಕೊಟ್ಟರು, ಪೊಲೀಸ್ ಮೂಲಗಳ ಪ್ರಕಾರ, ಸೆಕ್ಷನ್ 163 ನಿರ್ಬಂಧಗಳು ಜಾರಿಯಲ್ಲಿವೆ ಮತ್ತು ಎನ್‌ಡಿಎಂಸಿ ಮೆರವಣಿಗೆಗೆ ಅನುಮತಿ ನೀಡಿಲ್ಲ. ಈ ನಿರ್ಬಂಧಗಳ ಹೊರತಾಗಿಯೂ ಕಾರ್ಯಕ್ರಮವನ್ನು ಮುಂದುವರಿಸುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ನೋಟಿಸ್ ನೋಡಿ ದೀಪ್ಕೆ ಕಿಡಿ

ನೋಟಿಸ್​​ ಪತ್ರವನ್ನು ನೋಡುತ್ತಾ ದೆಹಲಿ ಪೊಲೀಸರೊಂದಿಗೆ ಮಾತನಾಡಿದ ಅಭಿಜಿತ್​ ದೀಪ್ಕೆ, ನೀವು ನನ್ನ ವಿರುದ್ಧ ಯಾವ ರೀತಿ ಆರೋಪ ಹೊರೆಸಿದ್ದೀರಿ ಎಂದು ಬೆನ್ನಿನ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಿಕೊಂಡು ದೀಪ್ಕೆ, ತಮ್ಮ ಮುಂದೆ ಕುಳಿತಿದ್ದ ದೆಹಲಿ ಪೊಲೀಸರನ್ನು ಕೇಳಿದರು. ಸೋಫಾ ಮೇಲೆ ಕುಳಿತಿದ್ದ ಪೊಲೀಸರು ನೀವು ​​ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುತ್ತಲೇ ಇದ್ದೀರಿ, ಇದು ಕಾನೂನುಬಾಹಿರ ಎಂದು ಉಲ್ಲೇಖಿಸಲಾಗಿದೆ.

'ಇದೆಂತಾ ತಮಾಷೆಯ ನೋಟಿಸ್​. ಇದನ್ನೇ ನೀವು ನೋಟಿಸ್​ ಎಂದು ಕರೆಯುತ್ತೀರಾ. ನಿಮ್ಗೆ ಅನಿಸಿದ್ದನ್ನು ಬರೆಯುತ್ತಿದ್ದೀರಾ. ಇದು ಹೀಗೆ ಮುಂದುವರೆಯಲಿ ನೀವು ನನ್ನನ್ನು ಗಲ್ಲಿಗೇರಿಸಿ ಬಿಡಿ. ಇದೆಂಥಾ ತಮಾಷೆ ನೋಟಿಸ್​ ನೀವು ಕೊಟ್ಟಿರುವುದು'. ಎಂದು ಹೇಳುತ್ತಿರುವುದು ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿದೆ.

ಸೌರವ್​, ಅಶುತೋಷ್​ ಜೈಲಲ್ಲಿ

ಇತ್ತೀಚೆಗೆ ಜಂತರ್​ ಮಂತರ್​​ನಲ್ಲಿ ಧರಣಿ, ಪ್ರತಿಭಟನೆ, ಮೆರವಣಿಗೆ ನಡೆಸುವಂತಿಲ್ಲ ಎಂದು ದೆಹಲಿ ಪೊಲೀಸರು ಆದೇಶ ಹೊರಡಿಸಿದ್ದರು. ಅದನ್ನು ಹೊರೆತುಪಡಿಸಿ, ಸಿಜೆಪಿ ನಾಯಕರಾದ ಸೌರವ್​ ದಾಸ್​, ಅಶುತೋಷ್​ ಸೇರಿದಂತೆ ಹಲವರು ಜಂತರ್​ ಮಂತರ್​ನೊಳಕ್ಕೆ ನುಗ್ಗಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದರು. ಅವರನ್ನು ಪೊಲೀಸರು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದರು. ಸಿಸಿಎಚ್​ ಕೋರ್ಟ್​ ಅವರನ್ನು ತಿಹಾರ್​​ ಜೈಲಿಗೆ ಕಳುಹಿಸಿದ್ದು 5 ದಿನ ನ್ಯಾಯಾಂಗ ಬಂಧನದಲ್ಲಿರಿಸಿದೆ.

ಹೀಗಾಗಿ ಸಿಜೆಪಿ ಸಂಸ್ಥಾಪಕ ಕನ್ನಾಟ್ ಪ್ಲೇಸ್​ನಲ್ಲಿರುವ ಸೆಂಟ್ರಲ್​ ಪಾರ್ಕ್​ ಹಾಗೂ ದೇಶದ ವಿವಿಧ ಕಡಎ ಲೆಹರಾ ದೋ ತಿರಂಗಾ ಎಂದು ಪ್ರತಿಭಟನೆ ನಡೆಸಲು ಅಭಿಜಿತ್​ ದೀಪ್ಕೆ ಅವರು ಕರೆ ನೀಡಿದ್ದರು. ದೆಹಲಿಯ ಹಲವು ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಜೊತೆಗೆ ಇದೇ ನಿಯಮ ಅಭಿಜಿತ್​ ದೀಪ್ಕೆ ಪ್ರತಿಭಟಿಸಲು ಸಿದ್ಧವಾಗಿರುವ ಕೆನ್ನಾಟ್​ನಲ್ಲಿಯೂ ನಿಯಮ ಜಾರಿಯಲ್ಲಿದೆ. ಜೊತೆಗೆ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸುವಂತಿಲ್ಲ. ಅಕಸ್ಮಾತ್​ ಹೆಚ್ಚು ಜನರನ್ನು ಸೇರಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ಮಾಹಿತಿ ಹೊರಡಿಸಿದ್ದಾರೆ, (ಏಜೆನ್ಸೀಸ್).