ಆಗಸ್ಟ್ 9 ರಿಂದ ದೆಹಲಿ ಮೆಟ್ರೋದಲ್ಲಿ ಭದ್ರತೆ ಹೆಚ್ಚಳ
- ಆಗಸ್ಟ್ 9ರಿಂದ ದೆಹಲಿ ಮೆಟ್ರೋದಲ್ಲಿ ಹೈ ಅಲರ್ಟ್
- ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ CISF ಹದ್ದಿನಕಣ್ಣು
- ಮುಂಚಿತವಾಗಿ ನಿಲ್ದಾಣಕ್ಕೆ ಬರುವಂತೆ ಪ್ರಯಾಣಿಕರಿಗೆ ಸೂಚನೆ
ನವದೆಹಲಿ: ಸ್ವಾತಂತ್ರ್ಯ ದಿನದ ಹಬ್ಬವನ್ನು ಸಂಭ್ರಮಿಸಲು ಇಡೀ ದೇಶ ಸಜ್ಜಾಗುತ್ತಿದೆ. ವಿಶೇಷವಾಗಿ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಆಗಸ್ಟ್ 9ರಿಂದ 16ರವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಸಿಐಎಸ್‌ಎಫ್ ತಂಡ ಕಟ್ಟುನಿಟ್ಟಿನ ತಪಾಸಣೆ ನಡೆಸಲಿದ್ದಾರೆ ಎಂದು ಡಿಎಂಆರ್‌ಸಿ ತಿಳಿಸಿದೆ.
ಭದ್ರತಾ ತಪಾಸಣೆ ಹೆಚ್ಚಿಸುವುದರಿಂದ ಮೆಟ್ರೋ ನಿಲ್ದಾಣಗಳಲ್ಲಿ, ಅದರಲ್ಲೂ ಪೀಕ್ ಅವರ್‌ಗಳಲ್ಲಿ, ಸಾಮಾನ್ಯವಾಗಿ ಹೆಚ್ಚು ಜನ ಕ್ಯೂ ನಿಲ್ಲುವ ಸಾಧ್ಯತೆ ಇರುತ್ತೆ. ಹೀಗಾಗಿ ಪ್ರಯಾಣಿಕರು ಸ್ವಲ್ಪ ಮುಂಚಿತವಾಗಿಯೇ ನಿಲ್ದಾಣಕ್ಕೆ ಬರುವಂತೆ ಡಿಎಂಆರ್‌ಸಿ ಸೂಚಿಸಿದೆ.
ಹೆಚ್ಚುವರಿ ಲಗೇಜ್ಗಳನ್ನು ತರಬೇಡಿ
ಪ್ರಯಾಣಿಕರು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ, ಅಗತ್ಯವಿಲ್ಲದ ಹೆಚ್ಚುವರಿ ಲಗೇಜ್ಗಳನ್ನು ತೆಗೆದುಕೊಂಡು ಹೋಗದಂತೆ ಹಾಗೂ ನಿಷೇಧಿತ ವಸ್ತುಗಳನ್ನು ಮೆಟ್ರೋ ನಿಲ್ದಾಣಕ್ಕೆ ತರದಂತೆ ಸೂಚಿಸಲಾಗಿದೆ. ಇದರಿಂದ ಹೆಚ್ಚು ಗೊಂದಲ ಉಂಟಾಗುವುದನ್ನು ತಪ್ಪಿಸಬಹುದು ಅಂತ ಸಿಐಎಸ್‌ಎಫ್ ತಿಳಿಸಿದೆ.
ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ನಿಗಾ
ಆಗಸ್ಟ್ 15ಕ್ಕೂ ಮುನ್ನ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಲಗೇಜ್ಸಿಐಎಸ್ಎಫ್ ಸಿಬ್ಬಂದಿ ಸಂಪೂರ್ಣವಾಗಿ ಚೆಕ್ ಮಾಡುತ್ತಾರೆ. ಇಂಟರ್‌ಚೇಂಜ್ ನಿಲ್ದಾಣಗಳಲ್ಲೂ ಹೆಚ್ಚಿನ ಭದ್ರತಾ ತಪಾಸಣೆ ನಡೆಯಲಿದೆ. ಹೀಗಾಗಿ ಮೆಟ್ರೋದಲ್ಲಿ ಪ್ರಯಾಣಿಸುವವರು ಮುಂಚಿತವಾಗಿಯೇ ಮನೆಯಿಂದ ಹೊರಡುವುದು ಉತ್ತಮ,(ಏಜೆನ್ಸೀಸ್).