ರಸ್ತೆಯಲ್ಲಿ ಪ್ರಾಂಕ್ 
ದೇಶ

ಶಾರ್ಟ್​ಕಟ್​ನಲ್ಲಿ ರಸ್ತೆ ದಾಟೋದನ್ನ ತಪ್ಪಿಸೋಕೆ ಮಾಟ-ಮಂತ್ರ ಪ್ರಾಂಕ್!; ನಾಗರಿಕ ಸಮಸ್ಯೆಗೆ ಧಾರ್ಮಿಕ ಪರಿಹಾರ ಕರೆಕ್ಟ್ ಎಂದ ನೆಟ್ಟಿಗರು..Delhi

  • ದೆಹಲಿಯಲ್ಲಿ ಮಾಟ-ಮಂತ್ರದ ಪ್ರಾಂಕ್ ಮಾಡಿದ ಯುವಕ.

  • ರಸ್ತೆ ಅಪಘಾತದಿಂದ ಜನರನ್ನು ಕಾಪಾಡಲು ಮಾಟ-ಮಂತ್ರದ ಪ್ರಾಂಕ್ ಮಾಡಿ..ಜನರು ನಡೆದಾಡುವ ಮಾರ್ಗ ಬದಲಿಸಿದ ಯುವಕ.

  • ಜನರ ಸಮಸ್ಯೆಗೆ ಅವರು ನಂಬುವ ಧಾರ್ಮಿಕ ನಂಬಿಕೆಗಳ ಮೂಲಕವೇ ಮದ್ದನ್ನೆರೆಯುವುದು ಸರಿ ಎಂದ ನೆಟ್ಟಿಗರು.

Delhi man uses a totka prank: ಭಾರತದಲ್ಲಿ ಸಾಮಾನ್ಯವಾಗಿ ಮಾಟ-ಮಂತ್ರವನ್ನು ಗಾಢವಾಗಿ ನಂಬಲಾಗುತ್ತದೆ. ಇದರಿಂದ ಅದೆಷ್ಟೋ ಜನಕ್ಕೆ ಸಮಸ್ಯೆಯಾಗಿದೆ ಎನ್ನುವ ಮಾತು ಇದೆ. ತೊಂದರೆ ಕೊಡುವವರನ್ನು ಇಕ್ಕಟ್ಟಿಗೆ ಸಿಕ್ಕಿಸುವ ಈ ವಿಧಾನವನ್ನೇ ತಂತ್ರ ಮಾಡಿಕೊಂಡು.. ಶಾರ್ಟ್​ ಕಟ್​​ನಲ್ಲಿ ರಸ್ತೆ ದಾಟುವುದನ್ನು ಬಿಟ್ಟು, ಪಾದಚಾರಿಗಳು ತಮ್ಮ ಮಾರ್ಗವನ್ನು ಬದಲಾಯಿಸುವಂತೆ ಮಾಡಲು ಯುವಕನೊಬ್ಬ ಟಾಟ್ಕಾ ಪ್ರಾಂಕ್(ಮಾಟ-ಮಂತ್ರ) ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಾಗರ್ ಭಾಟಿಯಾ ಎಂಬುವವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ.. ದೆಹಲಿಯ ವಾಯುವ್ಯ ಜಿಲ್ಲೆಯಲ್ಲಿರುವ ಮಂಗೋಲ್‌ಪುರಿಯ ರಸ್ತೆಯೊಂದರಲ್ಲಿ ವಿಭಜಕ ಇದ್ದು, ಅಲ್ಲೊಂದು ಗ್ಯಾಪ್ ಕಾಣಿಸಿಕೊಂಡಿದೆ. ಹೆಚ್ಚು ವಾಹನ ಓಡಾಡುವ ಅದೇ ರಸ್ತೆಯಲ್ಲಿ, ಪ್ರಾಣದ ಹಂಗು ತೊರೆದು, ಜನರು ಶಾರ್ಟ್​ ಕಟ್​​ನಲ್ಲಿ.. ರಸ್ತೆ ದಾಟುತ್ತಿರುವುದು ಕಂಡು ಬಂದಿದೆ. ಜನರ ಈ ಹುಚ್ಚಾಟ ಕಂಡು ಬೇಸರಗೊಂಡ ಅದೇ ಊರಿನ ಯುವಕ, ಜನರು ಶಾರ್ಟ್​ ಕಟ್​ನಲ್ಲಿ ರಸ್ತೆ ದಾಟುವುದನ್ನು ತಡೆಯಲು ರಸ್ತೆ ವಿಭಜಕ ಅಂತರದ ಮಧ್ಯೆ ಮಾಟ ಮಂತ್ರದ ಪ್ರಾಂಕ್ ಮಾಡಿದ್ದಾನೆ. ಪಾದಚಾರಿಗಳು ತಮ್ಮ ಮಾರ್ಗವನ್ನು ಬದಲಾಯಿಸುವಂತೆ ಮಾಡಿರುವುದು ಬೆಳಕಿಗೆ ಬಂದಿದೆ.

ಏನಿದೆ ವಿಡಿಯೋದಲ್ಲಿ?

ಜನರನ್ನು ಕಾಪಾಡುವ ನಿಟ್ಟಿನಲ್ಲಿ..ಶಾರ್ಟ್ ಕಟ್​ನಲ್ಲಿ ಸಂಚರಿಸುತ್ತಿದ್ದ ಜಾಗಕ್ಕೆ ಕೆಂಪು ಕುಂಕುಮದ ಮೂಲಕ ವೃತ್ತಾಕಾರ ಹಾಕಿ, ಅಲ್ಲಿ ಹೂ, ನಿಂಬೆ, ಹಣ್ಣು ಲವಂಗ, ಮೆಣಸಿನಕಾಯಿ ಇಟ್ಟಿದ್ದಾರೆ. ಶಾರ್ಟ್​ಕಟ್​ನಲ್ಲಿ ರಸ್ತೆ ದಾಟಲು ಬರುವ ಜನರು ಈ ಮಾಟ ಮಂತ್ರ ಕಂಡು ಹೆದರಿ ಬೇರೆ ರಸ್ತೆಯಲ್ಲಿ ಪ್ರಯಾಣಿಸಲು ಆರಂಭಿಸಿದ್ದಾರೆ. ಹಲವರು ಆ ವಿಭಜಕದ ಬಳಿ ಬರುತ್ತಿದ್ದಂತೆ..ಮಾಟ ಮಂತ್ರದ ಪ್ರಾಂಕ್ ಕಂಡು ಬೇರೆ ಕಡೆಗೆ ನಡೆದಿದ್ದಾರೆ.

ಟಾಟ್ಕಾ ಪ್ರಾಂಕ್ ಎಂದರೆ ಏನು?

ಸಾಗರ್ ಭಾಟಿಯಾ ಅವರ ಈ ಪ್ರಾಂಕ್​​ಗೆ ಟಾಟ್ಕಾ ತಮಾಷೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ರೀಲ್ಸ್​​ ವ್ಯೂವ್ಸ್ ಹೆಚ್ಚಳಕ್ಕಾಗಿ ಮನೆಯವರನ್ನು ಹೆದರಿಸುವ ಸಲುವಾಗಿ ಈ ಮಾಟ-ಮಂತ್ರದ ಪ್ರಾಂಕ್ ಮಾಡಲಾಗುತ್ತದೆ. ಆದರೆ, ಈ ಯುವಕ ಜನರನ್ನು ಅಪಘಾತಗಳಿಂದ ಕಾಪಾಡಲು ಈ ಪ್ರ್ಯಾಂಕ್ ಬಳಕೆ ಮಾಡಿದ್ದಾರೆ. ಮೆಣಸಿನಕಾಯಿ. ಕಪ್ಪುದಾರ, ಮೊಟ್ಟೆ, ಕೆಂಪು ಕುಂಕುಮ, ಪಿನ್​ಗಳಿಂದ ಅಥವಾ ಲವಂಗದಿಂದ ಚುಚ್ಚಿದ ನಿಂಬೆ ಹಣ್ಣು ಒಟ್ಟು..ವೃತ್ತಾಕಾರ ಹಾಕಿ ಅದು ಮಾಟ ಮಂತ್ರ ಎಂದು ಬಿಂಬಿಸಲಾಗುತ್ತದೆ.

ನೆಟ್ಟಿಗರು ಏನಂದ್ರು?

ಮೂಢನಂಬಿಕೆಯ ಆಚರಣೆಗಳನ್ನು..ಜನರ ಒಳಿತಿಗಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಲವು ಇನ್​ಸ್ಟಾಗ್ರಾಮ್​ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ತಡೆಗೋಡೆಯಿಂದ ತಡೆಯಲು ಸಾಧ್ಯವಾಗದ ವ್ಯಕ್ತಿಯನ್ನು ಅವರದ್ದೇ ಮೂಢನಂಬಿಕೆಯಿಂದ ರಕ್ಷಿಸಲಾಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಕ್ಷಯ್​ ಎಂಬುವವರು ಪ್ರತಿಯೊಂದು ತಪ್ಪು ದಾರಿಯಲ್ಲೂ ಹೀಗೆ ಮಾಡಿ ಎಂದು ಬರೆದುಕೊಂಡಿದ್ದಾರೆ. ಭಾರತೀಯ ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳೇ ಸಾಕು ಎಂದಿದ್ದಾರೆ ಇನ್ನು ಕೆಲವರು. ಸರ್ಕಾರಿ ನಿಯಮಗಳು ಅಲ್ಲ ಮಾಟಮಂತ್ರದ ಪರಿಣಾಮಗಳು ಬೆಸ್ಟ್ ಸಮಸ್ಯೆ ಪರಿಹಾರಕ್ಕೆ ಎಂದಿದ್ದಾರೆ.

ತುಂಬಾ ಉತ್ತಮ ಐಡಿಯಾ ಯಾವುದೇ ಶಿಕ್ಷಣವು ಇದಕ್ಕಿಂತ ಕಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತೀಯ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸಹ ಅಲ್ಲಿಂದ ದಾಟುವುದಿಲ್ಲ. ನಾಗರಿಕ ಸಮಸ್ಯೆಗಳಿಗೆ ಧಾರ್ಮಿಕ ಪರಿಹಾರ ಎನ್ನುವುದನ್ನು ಸೇರಿದಂತೆ ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).