Delhi Judge Suicide 
ದೇಶ

ಪತ್ನಿ, ಅತ್ತಿಗೆಯಿಂದ ನಿತ್ಯ ಮಾನಸಿಕ ಕಿರುಕುಳ?; ದೆಹಲಿಯಲ್ಲಿ 30 ವರ್ಷದ ನ್ಯಾಯಧೀಶ ಆತ್ಮಹತ್ಯೆ..Aman Kumar Sharma

ಪ್ರಮುಖ ಮುಖ್ಯಾಂಶಗಳು

  • ದೆಹಲಿ ನ್ಯಾಯಾಧೀಶ ಅಮನ್ ಕುಮಾರ್ ಶರ್ಮಾ ನಿಗೂಢ ಸಾವು
  • ಪತ್ನಿ ಮತ್ತು ಅತ್ತಿಗೆ ಮೇಲೆ ಕಿರುಕುಳ ಆರೋಪ ಹೊರೆಸಿದ ಕುಟುಂಬಸ್ಥರು
  • ಪತ್ನಿ ಸ್ವಾತಿ ಅಮನ್​ ವಿರುದ್ಧ ಅಧಿಕಾರ ಸಾಧಿಸುತ್ತಿದ್ದಳು ಎಂದು ಆರೋಪಿಸಿದ ತಂದೆ
ನವ ದೆಹಲಿ: ಸಫ್ದರ್ಜಂಗ್​​​ ಪ್ರದೇಶದಲ್ಲಿ 30 ವರ್ಷದ ನ್ಯಾಯಾಧೀಶರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರ ಕುಟುಂಬಸ್ಥರು ಅವರ ಪತ್ನಿ ಮತ್ತು ಅತ್ತಿಗೆ ವಿರುದ್ಧ ಆರೋಪಿಸಿದ್ದು, ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ, ಜೊತೆಗೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್​​ನೋಟ್​ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ದಕ್ಷಿಣ ದೆಹಲಿಯ ಗ್ರೀನ್​ ಪಾರ್ಕ್​ನಲ್ಲಿರುವ ನಿವಾಸದ ಬಾತ್​ ರೂಂನಲ್ಲಿ ಅಮನ್​ ಕುಮಾರ್​ ಶರ್ಮಾ(Aman Kumar Sharma) ಮೃತದೇಹ ಪತ್ತೆಯಾಗಿತ್ತು.  ಅವರು ಬಾತ್​ರೂಮ್​ ಒಳಗೆ ಲಾಕ್​ ಮಾಡಿಕೊಂಡಿದ್ದನ್ನು ಸಂಬಂಧಿಕರು ಗಮನಿಸಿದ್ದಾರೆ. ಕೂಡಲೇ ಸೆಕ್ಯುರಿಟಿ ಗಾರ್ಡ್ ಶಂಕರ್ ಏಣಿ ಹತ್ತಿ, ಕಿಟಕಿ ಒಡೆದು ಶೌಚಾಲಯದೊಳಗೆ ಪ್ರವೇಶಿಸಿದಾಗ ಅವರು ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. 

ಏನಿದು ಘಟನೆ?

ಅಮನ್​ ಕುಮಾರ್​ ಶರ್ಮಾ ಮತ್ತು ಪತ್ನಿ  ಸ್ವಾತಿ ಕೂಡ ನ್ಯಾಯಾಂಗ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಆತನ ಜೀವನದ ಮೇಲೆ ಹಸ್ತಕ್ಷೇಪ ವ್ಯಕ್ತಪಡಿಸುತ್ತಿದ್ದಳು ಎನ್ನಲಾಗಿದೆ, ಇನ್ನು ಅವರ ಮನೆಯ ಮೇಲೆ ಅಧಿಕಾರ ವಹಿಸುತ್ತಿದ್ದಳು ಎನ್ನಲಾಗಿದೆ. 

ಅಮನ್​ ತಂದೆ ಹೇಳಿದ್ದೇನು?

‘ಅಮನ್​ ಆತ್ಮಹತ್ಯೆ ಮಾಡಿಕೊಳ್ಳುವ ದಿನದಂದು ತಂದೆಗೆ ಕರೆ ಮಾಡಿ ಅಳುತ್ತಿದ್ದರು ಎನ್ನಲಾಗಿದೆ. ಪತ್ನಿ ಮತ್ತು ಜಮ್ಮುವಿನಲ್ಲಿ ಐಎಎಸ್ ಅಧಿಕಾರಿಯಾಗಿರುವ ಅತ್ತಿಗೆ ನಿಧಿ ಮಲಿಕ್​ನಿಂದ ನಿತ್ಯ  ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು. ಎಲ್ಲ ತಾನು ಹೇಳಿದಂತೆ ತನ್ನ ಹಿಡಿತದಲ್ಲಿರಲಿ ಎಂದು ಬಯಸುತ್ತಿದ್ದಳು. ನ್ಯಾಯಧೀಶರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ದಿನ ಜೋರಾಗಿ ಅಳುತ್ತಿದ್ದರು ಎನ್ನಲಾಗಿದೆ.
ಇನ್ನು ಪೊಲೀಸರು ಅಮನ್​ ತಂದೆ ಕೊಟ್ಟ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು,  ಕಿರುಕುಳ ಆರೋಪದ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತಾರ ಪರೀಕ್ಷೆಯ ವರದಿ ಬೆಳಕಿಗೆ ಬಂದ ನಂತರ ಸತ್ಯಾಂಶ ಏನು ಎನ್ನುವುದು ತಿಳಿಯಲಿದೆ ಎಂದಿದ್ದಾರೆ. ಇನ್ನು ಅಮನ್​ ಅವರ ವಿರುದ್ಧ ಯಾವುದೇ  ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. 
ಜೂನ್ 19, 2021ರಲ್ಲಿ ಅಮನ್​ ಶರ್ಮಾ ಅವರು ದೆಹಲಿ ನ್ಯಾಯಾಂಗ ಸೇವೆಗೆ ಸೇರಿಕೊಂಡಿದ್ದರು. ಸದ್ಯ ಅವರು  ಕರ್ಕರ್ಡೂಮಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪುಣೆಯ ಸಿಂಬಯೋಸಿಸ್ ಲಾ ಸ್ಕೂಲ್‌ನ ಪದವೀಧರರಾಗಿದ್ದರು, (ಏಜೆನ್ಸೀಸ್​).