DC vs RCB: ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 19ನೇ ಆವೃತ್ತಿಯ ಪಂದ್ಯದಲ್ಲಿ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್ಮನ್ಗಳು ತತ್ತರಿಸಿದ್ದು, 9 ವಿಕೆಟ್ಗಳ ಅಂತರಿಂದ ಆರ್‌ಸಿಬಿ ತಂಡ ಗೆದ್ದು ಬೀಗಿದ್ದು, ತವರಿನಲ್ಲಿ ಸೋತಿದ್ದ ಸೇಡನ್ನು ತೀರಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ ಸರಳ 76 ರನ್‌ಗಳನ್ನು ಬೆನ್ನಟ್ಟಿದ ಆರ್‌ಸಿಬಿ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿ ಗೆದ್ದು ಬೀಗಿದೆ. ಈ ಆವೃತ್ತಿಯಲ್ಲಿನ 6ನೇ ಗೆಲುವನ್ನು ಕಂಡಿದೆ. ಇದೇ ವೇಳೆ ಐಪಿಎಲ್ನಲ್ಲಿ 9,000 ರನ್ ಗಳಿಸಿದ ಇತಿಹಾಸದಲ್ಲಿ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದಕೊಂಡ ಆರ್‌ಸಿಬಿ, ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಡೆಲ್ಲಿ ತಂಡದ ರನ್ ಗಳಿಕೆಯನ್ನು ಅಲ್ಪ ಮೊತ್ತಕ್ಕೆ ಇಳಿಸಿದರು. ಕೇವಲ 16.4 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಸಿ ಡೆಲ್ಲಿ ತಂಡ ಆಲೌಟ್ ಆಗಿತ್ತು.
ಆರ್‌ಸಿಬಿ ಮೊತ್ತ: 77/1 (6.3 ಓವರ್)
ಮುಂಬೈ ಮೊತ್ತ: 75/10 (16.4 ಓವರ್)