ನವದೆಹಲಿ: ನಿಗದಿತ ಸಮಯದೊಳಗೆ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿ ಇಲ್ಲದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ದೇಶದ ಐಎಎಸ್ ಅಧಿಕಾರಿಗಳಿಗೆ(IAS officers) ಇಂದು(ಡಿ. 26) ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ಆದೇಶದಲ್ಲಿ, ಮುಂದಿನ ವರ್ಷದ ಜನವರಿ 31 ರೊಳಗೆ ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಘೋಷಿsಬೇಕು. ವಿವರಗಳನ್ನು ಸಲ್ಲಿಸುವಲ್ಲಿ ವಿಳಂಬವಾದರೆ ಅಧಿಕಾರಿಗಳು ಬಡ್ತಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ವೇತನ ಮಾನದಂಡಗಳನ್ನು ಅನ್ವಯಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಜನವರಿ 2017ರಿಂದ ಐಎಎಸ್ ಅಧಿಕಾರಿಗಳು ಆನ್‌ಲೈನ್ ಐಪಿಆರ್‌ಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಎಲ್ಲಾ ಐಎಎಸ್ ಅಧಿಕಾರಿಗಳು ನಿಗದಿತ ಸಮಯದೊಳಗೆ ತಮ್ಮ ಐಪಿಆರ್‌ಗಳನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ (ಏಜೆನ್ಸೀಸ್).