ಸಿಎಂ ಮೋಹನ್ ಯಾದವ್ 
ದೇಶ

ಕಲುಷಿತ ನೀರು ಸೇವಿಸಿ ಸಾವು; ಇಂದೋರ್ ಪಾಲಿಕೆ ಆಯುಕ್ತ ವರ್ಗಾವಣೆ & ಇಬ್ಬರು ಅಧಿಕಾರಿಗಳು ಅಮಾನತು | officials suspended

ಬೋಫಾಲ್: ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವಿಸಿ ಹಲವರು ಮೃತಪಟ್ಟ ಹಿನ್ನೆಲೆ ಸಿಎಂ ಮೋಹನ್ ಯಾದವ್ ಕ್ರಮಕೈಗೊಂಡಿದ್ದು, ಪಾಲಿಕೆ ಆಯುಕ್ತರನ್ನು ಸ್ಥಾನದಿಂದ ವಜಾಗೊಳಿಸಲಾಗಿದೆ. ಜೊತೆಗೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು(officials suspended) ಮಾಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ದುರಂತದ ಬಗ್ಗೆ ಯಾವುದೇ ಕ್ರಮಕೈಗೊಳ್ಳಲು ನಮ್ಮ ಸರ್ಕಾರ ಹಿಂದೆಮುಂದೆ ನೋಡಲ್ಲ. ಆಯುಕ್ತ ದಿಲೀಪ್ ಕುಮಾರ್ ಯಾದವ್ ಅವರನ್ನು ಪದಚ್ಯುತಗೊಳಿಸಿ ರಾಜ್ಯ ಸಚಿವಾಲಯಕ್ಕೆ ಮರು ನಿಯೋಜಿಸಲಾಗಿದೆ. ಕರ್ತವ್ಯ ನಿರ್ಲಕ್ಷ್ಯಕ್ಕಾಗಿ  ಹೆಚ್ಚುವರಿ ಆಯುಕ್ತ ರೋಹಿತ್ ಸಿಸ್ಸೋನಿಯಾ ಮತ್ತು ಪಾಲಿಕೆ ಉಸ್ತುವಾರಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಸಂಜೀವ್ ಶ್ರೀವಾಸ್ತವ ಅವರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಸಿಎಂ ಯಾದವ್, ರಾಜ್ಯಾದ್ಯಂತ ಎಲ್ಲಾ ಪಾಲಿಕೆಗಳ ಮೇಯರ್, ವಿಭಾಗೀಯ ಆಯುಕ್ತರು, ಸಂಗ್ರಹಕರು, ಆಯುಕ್ತರ ಜೊತೆ ಸಭೆ ನಡೆಸಿ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದ್ದಾರೆ (ಏಜೆನ್ಸೀಸ್).