ಪ್ರಖ್ಯಾತ ತಾಜ್ ಹೋಟೆಲ್‌ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬಾಂಬ್ ಬೆದರಿಕೆ
- ಪ್ರಖ್ಯಾತ ತಾಜ್ ಹೋಟೆಲ್‌ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬಾಂಬ್ ಬೆದರಿಕೆ
- ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ ಕಾರ್ಯ
- ಮುಂಬೈನಲ್ಲಿ ಮತ್ತೆ ಡಿ-ಕಂಪನಿ ಸಕ್ರೀಯವಾಗಿದೆಯೇ ಎಂಬ ಆಯಾಮದಲ್ಲಿ ಪೊಲೀಸರ ತನಿಖೆ
ಮುಂಬೈ: ನವಿ ಮುಂಬೈನಲ್ಲಿರುವ ದೇಶದ ಪ್ರಖ್ಯಾತ ತಾಜ್ ಹೋಟೆಲ್ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim Bomb Threat) ಬಾಂಬ್ ಇಟ್ಟಿದ್ದಾನೆಂಬ ಬೆದರಿಕೆ ಕರೆ ಬಂದಿದ್ದು, ಸದ್ಯ ಹೋಟೆಲ್ ಸುತ್ತ ಬಿಗಿ ಭದ್ರತೆಯನ್ನು ನೀಡಲಾಗಿದೆ. ತಡರಾತ್ರಿ ನವಿ ಮುಂಬೈ ಪೊಲೀಸ್ ಠಾಣೆಗೆ ಅಪರಿಚಿತ ಕರೆ ಬಂದಿದ್ದು, ಫೋನ್ ಮಾಡಿದ ವ್ಯಕ್ತಿ, ತಾಜ್ ಹೋಟೆಲ್ನಲ್ಲಿ ದಾವೂದ್ ಇಬ್ರಾಹಿಂ ಬಾಂಬ್ ಇಟ್ಟಿದ್ದಾನೆಂದು ಹೇಳಿ ಕರೆಯನ್ನು ಕಟ್ ಮಾಡಿದ್ದಾನೆ.
ಕಾರ್ಯಪ್ರವರ್ತರಾದ ಪೊಲೀಸ್!
ಬೆದರಿಕೆ ಕರೆ ಬಂದ ಕೂಡಲೇ ಜಾಗ್ರತರಾದ ನವಿ ಮುಂಬೈ ಪೊಲೀಸರು ಕೂಡಲೇ ಹೋಟೆಲ್ ಸಿಬ್ಬಂದಿಗಳಿಗೆ ಹಾಗೂ ಬಾಂಬ್ ಸಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್ ಸಿಷ್ಕ್ರಿಯ ದಳದ ಸಿಬ್ಬಂದಿಗಳು ಹೋಟೆಲ್ನ ಕೋಣೆಗಳು, ಸ್ವಿಮ್ಮಿಂಗ್ ಪೂಲ್, ಬಾಂಕ್ವೆಟ್ ಹಾಲ್ಸ್, ರೆಸ್ಟೋರಂಟ್ಸ್, ಪಾರ್ಕಿಂಗ್ ಪ್ರದೇಶ ಎಲ್ಲಾ ಕಡೆ ಬಾಂಬ್ಗಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಎಲ್ಲಿ ಸಹ ಯಾವುದೇ ಸ್ಪೋಟಕ ದೊರೆತಿಲ್ಲ, ಇದೊಂದು ಹುಸಿ ಬಾಂಬ್ ಕರೆ ಇರಬಹುದೆಂದು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹೋಟೆಲ್‌ಗೆ ಭದ್ರತೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಮುಂದುವರಿದ ಶೋಧ ಕಾರ್ಯಚರಣೆ!
ಒಂದು ಕಡೆ ಬಾಂಬ್ ನಿಷ್ಕ್ರಿಯ ದಳದವರು ತಾಜ್ನಲ್ಲಿ ಬಾಂಬ್ ಪತ್ತೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪೊಲೀಸರು ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ. ಮಾಹಿತಿ ಪ್ರಕಾರ, ಈ ಕರೆಯು ನವಿ ಮುಂಬೈನಲ್ಲಿರು ತುರ್ಭೆ ಪ್ರದೇಶದಿಂದ ಬಂದಿದೆ ಎಂದು ತಿಳಿದು ಬಂದಿದ್ದು, ತುರ್ಭೆ ಠಾಣೆಯ ಹಾಗೂ ನವಿ ಮುಂಬೈನ ಪೊಲೀಸರು ಈ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಅಂತಯೇ ಐಬಿ ಹಾಗೂ ರಾ ಮೂಲಕ ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂ, ಮುಂಬೈ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದನೆ? ಎಂಬ ಆಯಾಮದಲ್ಲಿ ಸಹ ಮಾಹಿತಿ ಪಡೆಯಲಾಗುತ್ತಿದೆ, (ಏಜನ್ಸೀಸ್).