ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋಗೆ ಹೋದ ಮಗಳು
- ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋಗೆ ಹೋದ ಮಗಳು
- ಪೊಲೀಸರೊಂದಿಗೆ ಹೊಟೇಲ್ ಮೇಲೆ ದಾಳಿ ಮಾಡಿದ ತಾಯಿ
- ಸೋಶಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಭಾರತದಲ್ಲಿ ಇಂರ್ಟನೆಟ್ ಕ್ರಾಂತಿಯಾದ ದಿನದಿಂದ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ಫೋನ್ ಬಂದಿದೆ. ಹೀಗಾಗಿ ಮೊಬೈಲ್ಲಿರುವ ಪ್ರತಿವ್ಯಕ್ತಿ ಕೂಡ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಮಗಳು ಪ್ರಿಯಕರನೊಂದಿಗೆ ಹೊಟೇಲ್ ರೂಮ್ (Daughter in OYO) ನಲ್ಲಿದ್ದಾಗ ತಾಯಿ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಓಯೋಗೆ ಹೋದ ಸುಂದರಿ!
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಮಗಳು ಓಯೋ ರೂಮ್ನಲ್ಲಿ ತನ್ನ ಪ್ರಿಯಕರನೊಂದಿಗೆ ಇರುವಾಗ ಯುವತಿ ತಾಯಿ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಇಲ್ಲೇನು ಮಾಡುತ್ತಿದ್ದಿಯಾ? ಎಂದು ತಾಯಿ ಕೇಳಿದ ಪ್ರಶ್ನೆಗೆ ಮಗಳು ಶಾಕ್ ಆಗಿದ್ದಾಳೆ.
ತಾಯಿ, ಮಗಳ ಈ ಜಟಾಪಟಿ ವಿಡಿಯೋವನ್ನು ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈಗ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ನೈಸ್ ಸ್ಕ್ರಿಪ್ಟ್ ಎಂದ ನೆಟ್ಟಿಗರು
ಈ ವಿಡಿಯೋ ಎಲ್ಲಡೆ ಹರಿ ದಾಡುತ್ತಿದಂತೆ, ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದರೆ ಗೊತ್ತಾಗುತ್ತೆ, ಇದು ಪ್ರೀ-ಫ್ಲ್ಯಾನ್ಡ್ ಎಂದು ಒಬ್ಬ ಬಳಕೆದಾರ ಹೇಳಿದರೆ, ಓ.. ನೈಸ್ ಸ್ಕ್ರಿಪ್ಟ್ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನೂ ಕೆಲವರು ಈ ವಿಡಿಯೋಗೆ ಸಹಾನುಭೂತಿ ಸೂಚಿಸುತ್ತಾ, ನೋಡಿ ನಿಮ್ಮ ಮಕ್ಕಳ ಮೇಲೆ ಒಂದು ಕಣ್ಣನ್ನು ಯಾವತ್ತು ಇಟ್ಟಿಡಿ, ಅವರು ಎಲ್ಲಿಗೆ ಹೋಗುತ್ತಾರೆ? ಯಾರೊಂದಿಗೆ ಇರುತ್ತಾರೆ ಎಂದು ಪಾಲಕರಾದ ನಿಮಗೆ ತಿಳಿದಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ, (ಏಜನ್ಸೀಸ್).