Dating app trap Bengaluru man kidnapped, robbed of Rs 3.7 lakh 
ದೇಶ

ಡೇಂಜರ್​ ಡೇಟಿಂಗ್​​ ಆ್ಯಪ್‌; ಪಬ್​ಗೆ ಕರೆದು ಯುವಕನ ಕಿಡ್ನಾಪ್ ಮಾಡಿಸಿದ ಯುವತಿ, 3.7 ಲಕ್ಷ ರೂ.ದರೋಡೆ..Bengaluru

ಪ್ರಮುಖ ಮುಖ್ಯಾಂಶಗಳು

  • ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವತಿಯಿಂದ ವ್ಯಕ್ತಿಯ ಅಪಹರಣ.
  • ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ಒಟ್ಟು 3.7 ಲಕ್ಷ ರೂ. ಹಣ ದರೋಡೆ.
  • ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರಿಂದ ಬೆದರಿಕೆ.
  • ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲು.

Dating app trap Bengaluru man kidnapped:

ಡೇಟಿಂಗ್​ ಆಪ್​​ನಲ್ಲಿ ಪರಿಚಯವಾದ ಯುವತಿಯೊಬ್ಬರನ್ನು ಭೇಟಿ ಮಾಡಲು ಹೋದ 33 ವರ್ಷದ ವ್ಯಕ್ತಿಯೊಬ್ಬರು ಅಪಾಯಕ್ಕೆ ಸಿಲುಕಿದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಯುವತಿಯ ಸಂಚಿನಿಂದಾಗಿ ನಾಲ್ವರು ದುಷ್ಕರ್ಮಿಗಳು ಆತನನ್ನು ಅಪಹರಿಸಿ, ಕಾರಿನಲ್ಲಿ ಸುತ್ತಿಸಿ, ಒಟ್ಟು 3.7 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ದರೋಡೆ ಮಾಡಿರುವದು ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರದ ಚಂದಾಪುರ ನಿವಾಸಿಯಾದ ಮತ್ತು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೇಕಬ್​(ಹೆಸರು ಬದಲಾಯಿಸಲಾಗಿದೆ). ಕೆಲವು ತಿಂಗಳಿನಿಂದ ಡೇಟಿಂಗ್​ ಅಪ್ಲಿಕೇಶನ್​ ಬಳಕೆ ಮಾಡುತ್ತಿದ್ದರು. ಇದರ ಮೂಲಕ ಅವರಿಗೆ ಪೂನಮ್​ ಎನ್ನುವ ಯುವತಿಯ ಪರಿಚಯವಾಗಿದೆ. ಆಕೆ ತಾನು ಎಲೆಕ್ಟ್ರಾನಿಕ್​ ಸಿಟಿಯಲ್ಲಿರುವುದು ಎಂದು ಹೇಳಿಕೊಂಡಿದ್ದಾಳೆ. ಪೂನಮ್​ ಮತ್ತು ಆತ ಇಬ್ಬರೂ ಕ್ಲೋಸ್​ ಆದ ಬಳಿಕ ಮೊಬೈಲ್ ನಂಬರ್​ ಕೊಟ್ಟುಕೊಂಡಿದ್ದಾರೆ.

ಪಬ್​ಗೆಂದು ಕರೆಸಿ ವಂಚನೆ

ಆಗಸ್ಟ್ 19 ರಂದು ಎಲೆಕ್ಟ್ರಾನಿಕ್ಸ್ ಸಿಟಿಯ ಹುಲಿಮಂಗಲ ಮುಖ್ಯ ರಸ್ತೆಯಲ್ಲಿರುವ ಪಬ್ ಬಳಿ ಭೇಟಿಯಾಗುವಂತೆ ಪೂನಮ್ ಕೇಳಿಕೊಂಡಿದ್ದಳು. ರಾತ್ರಿ 9.45ರ ಸುಮಾರಿಗೆ ಜೇಕಬ್ ಪಬ್ ತಲುಪಿದಾಗ, ಪೂನಮ್ ಬಿಳಿ ಬಣ್ಣದ ಎಸ್‌ಯುವಿ ಕಾರಿನಲ್ಲಿ ಬಂದಿದ್ದಳು. ಪಬ್‌ಗೆ ಮರಳುವ ಮೊದಲು ಹತ್ತಿರದ ಇಂಧನ ಕೇಂದ್ರಕ್ಕೆ ಹೋಗಬೇಕೆಂದು ಹೇಳಿ ಆಕೆ ಆತನನ್ನು ವಾಹನದೊಳಗೆ ಕೂರಿಸಿಕೊಂಡಿದ್ದಳು.
ಪ್ರಯಾಣದ ಮಧ್ಯೆ, ತನಗೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಹೇಳಿ ಪೂನಮ್ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದಳು. ಆಗ ಆ ಕತ್ತಲೆ ಪ್ರದೇಶಕ್ಕೆ ಎಂಟ್ರಿ ಕೊಟ್ಟ ನಾಲ್ವರು ಅಪರಿಚಿತರು ಸಂತ್ರಸ್ತ ಜೇಕಬ್​ಗೆಗೆ ಬೆದರಿಕೆ ಹಾಕಿ, ಬಲವಂತವಾಗಿ ಎಸ್‌ಯುವಿ ಕಾರಿಗೆ ಹತ್ತಿಸಿ ಸ್ವಲ್ಪ ದೂರ ಕರೆದೊಯ್ದರು. ನಂತರ ಮಾರ್ಗ ಮಧ್ಯೆ ಅವರನ್ನು ಇಳಿಸಿ, ಬೂದು ಬಣ್ಣದ ಕಾರಿಗೆ ಕರೆದೊಯ್ದು ಬೆದರಿಸಿದ್ದಾರೆ.

ಜೀವ ಬೆದರಿಕೆ ಆರೋಪ

ಈ ವಿಚಾರದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡ್ತೀವಿ ಎಂದು ಜೀವ ಬೆದರಿಕೆ ಹಾಕಿ,

ಸಂತ್ರಸ್ತನ ಪರ್ಸ್‌ನಲ್ಲಿದ್ದ 7,000 ರೂ. ನಗದು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ದೋಚಿದ್ದಾರೆ. ನಂತರ ಎಟಿಎಂ ಬಳಿ ತೆರಳಿ ಆತನಿಂದ ಎಟಿಎಂ ಪಿನ್ ಪಡೆದು 45,000 ರೂ. ಡ್ರಾ ಮಾಡಿಕೊಂಡಿದ್ದಾರೆ. ಅಲ್ಲದೆ ಆತನ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ವಂಚಕರು

ಆ.20ರಂದು ಸಂತ್ರಸ್ತ

ಕ್ರೆಡಿಟ್​ ಕಾರ್ಡ್​​ ಪಾಸ್​ವರ್ಡ್​ ಅನ್ನು ಬದಲಾಯಿಸಿ, ಬೇರೆ ಖಾತೆಗೆ 3.2 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣದ ಹಿಂದಿನ ರಸ್ತೆಯಲ್ಲಿ ಜೇಕಬ್​ರನ್ನು ಬಿಟ್ಟು, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿ ಪರಾರಿಯಾಗಿದ್ದಾರೆ.

ಕುಟುಂಬಸ್ಥರಿಗೆ ಘಟನೆ ವಿವರಿಸಿದ ಸಂತ್ರಸ್ತ

ಆನಂತರ ಮನೆಗೆ ತೆರಳಿ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಬ್ಯಾಂಕ್‌ನಿಂದ ವಹಿವಾಟು ಹೇಳಿಕೆಯನ್ನು ಪಡೆದ ಬಳಿಕ ಆಗಸ್ಟ್ 25 ರಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಯಾಣದ ಮಧ್ಯೆ, ತನಗೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಹೇಳಿ ಪೂನಮ್ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದಳು. ಆಗ ಆ ಕತ್ತಲೆ ಪ್ರದೇಶಕ್ಕೆ ಎಂಟ್ರಿ ಕೊಟ್ಟ ನಾಲ್ವರು ಅಪರಿಚಿತರು ಸಂತ್ರಸ್ತ ಜೇಕಬ್​ಗೆ ಬೆದರಿಕೆ ಹಾಕಿ, ಬಲವಂತವಾಗಿ ಎಸ್‌ಯುವಿ ಕಾರಿಗೆ ಹತ್ತಿಸಿ ಸ್ವಲ್ಪ ದೂರ ಕರೆದೊಯ್ದರು. ನಂತರ ಮಾರ್ಗ ಮಧ್ಯೆ ಅವರನ್ನು ಇಳಿಸಿ, ಬೂದು ಬಣ್ಣದ ಕಾರಿಗೆ ಕರೆದೊಯ್ದು ಬೆದರಿಸಿದ್ದಾರೆ.
ದೂರು ದಾಖಲು
ಸಂತ್ರಸ್ತ ವ್ಯಕ್ತಿ ದೂರಿನ ಆಧಾರ ಮೇಲೆ, ಪೊಲೀಸರು ವಂಚಕರ ಮೇಲೆ ಬಿಎನ್‌ಎಸ್ ಸೆಕ್ಷನ್ 140 (ಕೊಲೆ ಅಥವಾ ಅಪಹರಣಕ್ಕಾಗಿ ಅಪಹರಣ) ಮತ್ತು 308 (ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಯುವತಿ ಹಾಗೂ ಇತರ ಆರೋಪಿಗಳ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).