ಇಸ್ಲಾಮಾಬಾದ್: ಕೆಲ ದಿನಗಳ ಹಿಂದೆ ಟೆಹ್ರಾನ್ಗೆ ಬೇಟಿಕೊಟ್ಟಿದ್ದ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್, ಭಾರತದ ಮತ್ತು ಇಸ್ರೇಲ್ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗುತ್ತಿದ್ದು, ಇದರಿಂದ ಜಗತ್ತಿನ ಮುಸ್ಲಿಂ ದೇಶಗಳಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಹಿಂದೂಗಳು ಹಾಗೂ ಯಹೂದಿ (ಜ್ಯೂವಿಶ್) ಗಳು ಒಂದಾದರೆ, ಇಸ್ಲಾಮಿಕ್ ದೇಶಗಳಿಗೆ ಈ ಮೈತ್ರಿ ಮುಂದಿನ ದಿನಗಳಲ್ಲಿ ಖಂಡಿಯವಾಗಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಪಾಕಿಸ್ತಾನ ಹಾಗೂ ಟರ್ಕಿ ದೇಶಗಳು ಇರಾನ್ ಮುಂದೆ ಪ್ರಸ್ತಾಪಿಸಿವೆ ಎಂದಿ ಇರಾನ್ ಗುಪ್ತಚರ ಅಧಿಕಾರಿ ಮೊಹ್ಸೀನ್ ರೇಝಈ ತಿಳಿಸಿದ್ದಾರೆ.
ಅಕ್ಟೋಬರ್ 26 ರಂದು ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ನಡೆದಿದ್ದ ಸಭೆಯಲ್ಲಿ ಪಾಕಿಸ್ತಾನ ಹಾಗೂ ಟರ್ಕಿ, ಭಾರತ ಮತ್ತು ಇಸ್ರೇಲ್ ನಡುವೆ ಬೆಳೆಯುತ್ತಿರುವ ರಾಜತಾಂತ್ರಿಕ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಸಭೆಯಲ್ಲಿ ಪಾಕ್ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್, ಹಿಂದೂಗಳು ಮತ್ತು ಯಹೂದಿಗಳ ನಡುವಿನ ಸಂಬಂದ ಇತ್ತೀಚಿನ ವರ್ಷಗಳಲ್ಲಿ ಬಹಳ ಸುಧಾರಿಸಿದೆ. ಒಂದು ವೇಳೆ ಈ ಎರಡು ಧರ್ಮಗಳು ಒಂದಾದರೆ, ಮುಸ್ಲಿಂ ದೇಶಗಳಿಗೆ ಅದರಲ್ಲೂ ಪಾಕಿಸ್ತಾನಕ್ಕೆ ಭಾರೀ ಸಂಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಈ ಮಾತಿಗೆ ಟಿರ್ಕಿ ಗುಪ್ತಚರ ಮುಖ್ಯಸ್ಥ, ಇಬ್ರಾಹಿಂ ಕಾಲಿನ್ ಕೂಡ ಸಮ್ಮತಿ ಸೂಚಿಸಿದ್ದು, ಈ ವಿದ್ಯಮಾನ ಹೀಗೆ ಮುಂದುವರಿದ ಪಕ್ಷದಲ್ಲಿ ನಮಗೆ ಕೇವಲ ಯಹೂದಿ ಹಾಗೂ ಹಿಂದೂಗಳು ಇಬ್ಬರನ್ನು ಎದುರಿಸಬೇಕಾಗುತ್ತದೆ. ಅದು ನಮಗೆ ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಈ ವಿದ್ಯಮಾನದ ಬಗ್ಗೆ ಪಾಕ್ ಪತ್ರಕರ್ತ ನಜಂ ಸೇಠಿ, ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇರಾನ್ ಗುಪ್ತಚರ ಅಧಿಕಾರಿ ಮೊಹ್ಸೀನ್ ರೇಝಈ ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಮೊಹ್ಸೀನ್ ರೇಝಈ ಹೇಳಿರುವಂತೆ, ನಮ್ಮ ಮಿಲಿಟರಿ ಮುಖ್ಯಸ್ಥರು, ಹಿಂದೂಗಳ ಹಾಗೂ ಯಹೂದಿಗಳ ಬಗ್ಗೆ ಮೈತ್ರಿ ಬಗ್ಗೆ ಕಳವಳ ವ್ಯಕ್ತ ಪಡಿಸಿರುವುದು ಸತ್ಯ ಸಂಗತಿಯಾಗಿದೆ. ಪೆಹಲ್ಗಾಮ್ ಘಟನೆ ಬಳಿಕ ಹಿಂದೂ ಮತ್ತು ಮುಸ್ಲಿಮರಲ್ಲಿ ವೈರತ್ವ ಭಾವ ಮೂಡಿರುವುದು ನಿಜವಾಗಿದೆ.
ಈ ಸಂದರ್ಭದಲ್ಲಿ ಹಿಂದೂಗಳ ಬೆಂಬಲಕ್ಕೆ ಯಹೂದಿಗಳು ನಿಂತಿದ್ದರು. ಪ್ರಸ್ತುತ ದಿನಮಾನದಲ್ಲಿ ಭಾರತ ಹಾಗೂ ಇಸ್ರೇಲ್ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತಿದೆ. ಇದು ಖಂಡಿತವಾಗಿ ಇಸ್ಲಾಮಿಕ್ ದೇಶಗಳಿಗೆ ವಿದೇಶವಾಗಿ ಪಾಕಿಸ್ತಾನಕ್ಕೆ ಮುಳುವಾಗಲಿದ ಎಂದಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಿಸಿದೆ. ಕೃಷಿ, ಮಿಲಿಟರಿ, ಗುಪ್ತಚರ, ರಕ್ಷಣೆ, ನೀರಿನ ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಸೈನ್ಯದಲ್ಲಿ ಆಧುನಿಕತೆಯನ್ನು ಸಾಧಿಸುವುದರಲ್ಲಿ ಭಾರತ ಇಸ್ರೇಲ್ ಜತೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ.
ಆದ್ದರಿಂದಲೇ, ಇರಾನ್ ಹಾಗೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಭಾರತ ನೇರವಾಗಿ ವಿರೋಧಿಸುವ ಬದಲು, ಶಾಂತಿ ಮಾತುಕತೆ ಮೂಲಕ ಪರಿಹಾಕ ಕಂಡುಕೊಳ್ಳಿ ಎಂದು ಹೇಳುತ್ತಾ, ತಟಸ್ಥ ನೀತಿಯನ್ನು ಕಾಪಾಡಿಕೊಂಡಿತ್ತು. ಒಟ್ಟಿನಲ್ಲಿ ಭಾರತ-ಇಸ್ರೇಲ್ ನಡುವಿನ ಮೈತ್ರಿ ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶಗಳ ನಿದ್ದೆಗೆಡಿಸಿದೆ ಎನ್ನುವುದಕ್ಕೆ ಆಸಿಮ್ ಮುನೀರ್ ಅವರ ಹೇಳಿಕೆಯೇ ನೇರ ಸಾಕ್ಷಿಯಾಗಿದೆ, (ಏಜೆನ್ಸೀಸ್).