Cyclone Ditwah 
ದೇಶ

ದಿತ್ವಾ ಚಂಡಮಾರುತ; ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ | Cyclone Ditwah

ಆಂಧ್ರಪ್ರದೇಶ: ದಿತ್ವಾ ಚಂಡಮಾರುತ(Cyclone Ditwah) ಪ್ರಭಾವದಿಂದಾಗಿ ತಮಿಳುನಾಡು, ರಾಯಲಸೀಮಾ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಶುಕ್ರವಾರ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಎಚ್ಚರಿಕೆ ನೀಡಿದೆ. ಅಲ್ಲದೆ, ಇದು ನ.30ರಂದು ಭೂ ಕುಸಿತ ಉಂಟುಮಾಡಲಿದೆ ಎಂದು ತಿಳಿಸಿದೆ.
ಪ್ರಸ್ತುತ ಶ್ರೀಲಂಕಾದ ಕರಾವಳಿ ಮತ್ತು ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ದಿತ್ವಾ ಚಂಡಮಾರುತ ಇದ್ದು, ನವೆಂಬರ್ 30ರ ಬೆಳಗಿನ ಜಾವದ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಪಕ್ಕದ ಕರಾವಳಿಗಳ ಬಳಿ ಬಂಗಾಳಕೊಲ್ಲಿಯ ನೈಋತ್ಯ ಭಾಗವನ್ನು ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ದಿತ್ವಾ ಹೆಸರಿನ ಅರ್ಥವೇನು..?
ದಿತ್ವಾ ಹೆಸರಿನ ಅರ್ಥ 'ಲಗೂನ್​' ಎಂದು ಕರೆಯಲಾಗುತ್ತದೆ. ಯಮೆನ್​ ಚಂಡಮಾರುತಗಳ ಹೆಸರಿಸುವ ಸಮಾವೇಶದ ಭಾಗವಾಗಿ ಸೂಚಿಸುತ್ತದೆ. ಈ ಹೆಸರು ನಿರ್ದಿಷ್ಟವಾಗಿ ಯೆಮೆನ್‌ನ ಸೊಕೊಟ್ರಾ ದ್ವೀಪದಲ್ಲಿರುವ ಡೆಟ್ವಾ ಲಗೂನ್ ಅನ್ನು ಸೂಚಿಸುತ್ತದೆ. ಅಲ್ಲದೆ, "ದಿತ್ವಾ" ಈ ಹೆಸರಿಸುವ ವ್ಯವಸ್ಥೆಯಲ್ಲಿ ಯೆಮೆನ್‌ನ ಕರಾವಳಿ ಮತ್ತು ಕಡಲ ಪರಂಪರೆಯನ್ನು ಸೂಚಿಸುತ್ತದೆ.

ಕರುನಾಡಿನಲ್ಲೂ ಭಾರೀ ಮಳೆ ಸಾಧ್ಯತೆ

ಇದಲ್ಲದೆ, ಚಂಡಮಾರುತ ಬಳಿಕ ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತೆಲಂಗಾಣದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ವ್ಯಾಪಕ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ(ಏಜೆನ್ಸೀಸ್​).