Curtains Drawn, 47 kms Ride: UP Teen Gang-Raped Inside Moving Sleeper Bus 
ದೇಶ

ಡ್ರಾಪ್​ ನೀಡುವ ನೆಪದಲ್ಲಿ ಬಸ್​​ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಕಾಮುಕರ ಬಂಧನ..UP

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಘಟನೆ ಬೆಳಕಿಗೆ
  • ಚಲಿಸುತ್ತಿದ್ದ ಬಸ್​ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
  • ಡ್ರಾಪ್​ ಕೊಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಕಾಮುಕರ ಬಂಧನ

ನೋಯ್ಡಾ

: ಮಳೇಲಿ ನಿಂತಿದ್ದ ಅಪ್ರಾಪ್ತೆಗೆ ಸ್ಲೀಪರ್​ ಬಸ್​​ನಲ್ಲಿ ಡ್ರಾಪ್​ ನೀಡುವುದಾಗಿ ನಂಬಿಸಿ, ಬಾಲಕಿ ಮೇಲೆ  ಸಾಮೂಹಿಕ ಅತ್ಯಾಚಾರ ನಡೆಸಿದ ಪೈಶಾಚಿಕ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಭಾರಿ ಮಳೆ ಹಿನ್ನೆಲೆ  ಮೈನ್‌ಪುರಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿನಿ ಸ್ಲೀಪರ್​ ಬಸ್​ನಲ್ಲಿದ್ದ ಚಾಲಕನಿಗೆ ಡ್ರಾಪ್​  ಕೊಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿಗೆ ಕೊಟ್ಟ ಆತ, ಆಕೆಯನ್ನ  ಹತ್ತಿಸಿಕೊಂಡು, ಚಲಿಸುತ್ತಿದ್ದ ಬಸ್​ನಲ್ಲೇ  ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ನೋಯ್ಡಾಕ್ಕೆ ಹೊರಟಿದ್ದ ಯುವತಿ

ಯುವತಿ ತನ್ನ ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು,. ಈ ಹಿನ್ನೆಲೆ ನೊಯ್ಡಾದಲ್ಲಿರುವ ತನ್ನ ಸೋದರ ಸಂಬಂಧಿ ಅವರನ್ನು ಭೇಟಿ ಮಾಡಲು ಹೊರಟ ಆಗಸ್ಟ್ 4 ರ ರಾತ್ರಿ ಈ ಘಟನೆ ನಡೆದಿದೆ. ಭಾರಿ ಮಳೆ ಹಿನ್ನೆಲೆ,  ತಿಳಿಯದೇ ಪಾರಿ ಚೌಕ್​ನಲ್ಲಿ ಇಳಿದುಕೊಂಡು ಬಿಟ್ಟರು. ಮುಂದೇನೂ ಮಾಡೋದು ಎಂದು ತಿಳಿಯದೇ  ಎದುರು ನೋಡುತ್ತಿದ್ದಾಗ ಬಂದಿದ್ದು ಸ್ಲೀಪರ್​ ಬಸ್​​.  ಆಕೆ ಸಹಾಯಕ್ಕಾಗಿ ಸಿಗ್ನಲ್ ಮಾಡಿದ ನಂತರ ನಿಂತಿತು

ಪೊಲೀಸರಿಗೆ ದೂರು

ಬಸ್ ನೋಯ್ಡಾ ಸೆಕ್ಟರ್ 63 ಕಡೆಗೆ ಹೋಗುತ್ತಿದೆ ಎಂದು ಚಾಲಕ ಕುಲದೀಪ್ ಮತ್ತು ಕಂಡಕ್ಟರ್ ಸಂದೀಪ್ ಆಕೆಗೆ ಹೇಳಿ. ಡ್ರಾಪ್​ ಕೊಡೋದಾಗಿ ಭರವಸೆ ಕೊಟ್ಟರು. ಬಸ್ ಚಲಿಸಲು ಪ್ರಾರಂಭಿಸಿದ ಕೂಡಲೇ ಕಂಡಕ್ಟರ್ ಹದಿಹರೆಯದವಳ ಕಡೆಗೆ ಅಶ್ಲೀಲವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಅದಾದ ನಂತರ ಚಾಲಕ, ಕಂಡಕ್ಟರ್​​ ಹಾಗೂ ಮತ್ತಿಬ್ಬರು ಆಕೆ ಮೇಲೆ ಅತ್ಯಾಚಾರಕ್ಕೆ ಮುಂದಾದರು. ವಿರೋಧಿಸಿದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾರೆ.
ನಂತರ ಬಸ್ ಕಾಶ್ಮೀರಿ ಗೇಟ್ ಕಡೆಗೆ ಸುಮಾರು 47 ಕಿಲೋಮೀಟರ್ ಪ್ರಯಾಣಿಸಿತು. ಆರೋಪಿಗಳು ತಡರಾತ್ರಿ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಬಳಿ ರಿಂಗ್ ರಸ್ತೆಯಲ್ಲಿ ಹದಿಹರೆಯದ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ . ಕೂಡಲೇ ಕಾಶ್ಮೀರಿ ಗೇಟ್ ಪೊಲೀಸರಿಗೆ ಕರೆ ಮಾಡಿ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಬಂಧನ

ಕಾಶ್ಮೀರಿ ಗೇಟ್ ಪೊಲೀಸರು, ಮಾರ್ಪುರದ ಬಸ್ ನಿಲ್ದಾಣದ ಪ್ರದೇಶದಿಂದ ಕುಲದೀಪ್ ಮತ್ತು ಸಂದೀಪ್ ಅವರನ್ನು ಬಂಧಿಸಿ ಸ್ಲೀಪರ್ ಬಸ್ ಅನ್ನು ವಶಪಡಿಸಿಕೊಂಡರು. ವಾಹನವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ,(ಏಜೆನ್ಸೀಸ್).