ಮೂಕಜೀವಿಯ ಪ್ರಾಣ ಉಳಿಸಿದ ವಿಡಿಯೋ ವೈರಲ್​ 
ದೇಶ

ಡ್ರಮ್‌ನಲ್ಲಿ ಸಿಲುಕಿದ ಮುಖ, ಉಸಿರುಗಟ್ಟಿ ಒದ್ದಾಡಿದ ಗೋಮಾತೆ: ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬದುಕುಳಿದ ಮೂಕಜೀವ; ವಿಡಿಯೋ ವೈರಲ್​!

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮುಖ ಸಿಲುಕಿ ಉಸಿರುಗಟ್ಟುತ್ತಿದ್ದ ಹಸು
  • ಪ್ರಾಣದ ಹಂಗು ತೊರೆದು ರಕ್ಷಿಸಿದ ಸಾರ್ವಜನಿಕರು
  • ಮೂಕಜೀವಿಯ ಪ್ರಾಣ ಉಳಿಸಿದ ವಿಡಿಯೋ ವೈರಲ್​
ಗುಜರಾತ್​: ಹಸುವನ್ನು ಗೋಮಾತೆ, ಕಾಮಧೇನು ನಾನಾ ಪೂಜ್ಯ ಹೆಸರುಗಳಿಂದ ಸಂಬೋಧಿಸುವ ಸಂಸ್ಕೃತಿ ನಮ್ಮದು. ಆಕಳನ್ನು ಕೇವಲ ಪ್ರಾಣಿಯಾಗಿ ನೋಡದೆ, ಅದನ್ನು ದೇವರಿಗೆ ಸಮಾನವಾದ ಜೀವಿ ಎಂದು ನಂಬಿದ್ದೆವೆ.
ಇತ್ತೀಚೆಗೆ ಗುಜರಾತಿನಲ್ಲಿ ಬೀದಿ ಹಸುವೊಂದರ ಮುಖ ಪ್ಲಾಸ್ಟಿಕ್​ ಡ್ರಮ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆ ಹಸುವನ್ನು ರಕ್ಷಣೆ ಮಾಡಿರುವ ವಿಡಿಯೋವೊಂದಿ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ (Cow Rescue Viral Video)​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಬಿದಿ ಹಸುವೊಂದು ತನ್ನ ಮುಖವನ್ನು ಪ್ಲಾಸ್ಟಿಕ್​ ಡ್ರಮ್​​ವೊಂದರಲ್ಲಿ ಸಿಕ್ಕಿಸಿಕೊಂಡಿದೆ. ಅನುಮಾನದ ಪ್ರಕಾರ, ಆ ಡ್ರಮ್​ನಲ್ಲಿ ಇರಿಸಿದ್ದ ಆಹಾರವನ್ನು ತಿನ್ನಲು ಯತ್ನಿಸಿದ ಹಿನ್ನಲೆ ಅದರ ಮೂಖ ಸಿಕ್ಕಿಹಾಕಿ ಕೊಂಡಿದೆ ಎನ್ನಲಾಗಿದೆ.
ಮೂಖ ಪ್ಲಾಸ್ಟಿಕ್​ ಡ್ರಮ್​ನಲ್ಲಿ ಸಿಕ್ಕಿಹಾಕಿಕೊಂಡ ನಂತರ, ಹಸುವಿಗೆ ಉಸಿರುಗಟ್ಟಲು ಪ್ರಾರಂಭವಾಗಿದೆ. ಈ ದೃಶ್ಯವನ್ನು ಕಂಡ ಪಾದಾಚಾರಿಗಳು ಹಸುವಿನ ನೆರವಿಗೆ ಧಾವಿಸಿದ್ದಾರೆ. ಆದರೆ ಗಾಬರಿಗೊಂಡಿದ್ದ ಹಸು ರಕ್ಷಣೆ ಬಂದವರ ಮೇಲೆ ದಾಳಿಗೆ ಯತ್ನಿಸಿದೆ. ಆದರೂ, ಹಸುವಿನ ರಕ್ಷಣೆಯಲ್ಲಿ ಜನರು ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಮೂಕ ಪ್ರಾಣಿಯ ಜೀವವನ್ನು ಕಾಪಾಡುವುದರಲ್ಲಿ ಸಫಲರಾಗಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ದೇವರಂತೆ ಕಾಣುವ ಸಂಸ್ಕೃತಿ ಕೇವಲ ಭಾರತದಲ್ಲಿ ಮಾತ್ರ ಕಂಡುಬರುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದಾರೆ.
ಆ ಮೂಕ ಜೀವಿಯ ಪ್ರಾಣ ಉಳಿಸಿದ ಸಾರ್ವಜನಿಕರಿಗೆ ಅನಂತ ವಂದನೆಗಳು ಎಂದು ಇನ್ನೊಬ್ಬರು ಶುಭಕೋರಿದ್ದಾರೆ. ಇನ್ನೊಮ್ಮೆ ಪ್ಲಾಸ್ಟಿಕ್​ ಡ್ರಮ್​ಗಳಲ್ಲಿ ಆಹಾರವನ್ನು ಇಡಬೇಡಿ, ಪಾಪ ಪ್ರಾಣಿಗಳಿಗೆ ಬಹಳ ಸಂಕಟವಾಗುತ್ತದೆ ಎಂದು ಮತ್ತೊಬ್ಬರು ಕಿವಿಮಾತನ್ನು ಹೇಳಿದ್ದಾರೆ, (ಏಜನ್ಸೀಸ್​).