ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಂಧನಕ್ಕೆ ಕೋರ್ಟ್ ಆದೇಶ 
ದೇಶ

ಭಾರತೀಯ ಸೇನೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: TMC ಸಂಸದೆ ಮಹುವಾ ಮೊಯಿತ್ರಾ ಬಂಧನಕ್ಕೆ ಕೋರ್ಟ್​ ಆದೇಶ! Mahua Moitra

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಸೇನೆ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಪ್ರಕರಣ
  • ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಂಧನಕ್ಕೆ ಕೋರ್ಟ್ ಆದೇಶ
  • ಕೊಲ್ಕತ ಪೊಲೀಸರಿಗೆ ಅನುಮತಿ ನೀಡಿದ ಕೃಷ್ಣಾನಗರ ನ್ಯಾಯಾಲಯ
ಕೊಲ್ಕತ: ಭಾರತ ಸೇನೆ ವಿರುದ್ಧ ಆಕ್ಷೇಪಾರ್ಹ ಹೇಳಿದೆ ನೀಡಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ತ್ರಣಮೂಲ ಕಾಂಗ್ರೆಸ್​ (TMC) ಸಂಸದೆ ಮಹುವಾ ಮೊಯಿತ್ರಾ (TMC MP Mahua Moitra) ಬಂಧನಕ್ಕೆ ಕೃಷ್ಣಾನಗರ ನ್ಯಾಯಾಲಯ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದೆ.
ಸಂದರ್ಶನವೊಂದರಲ್ಲಿ ಆಪರೇಷನ್​ ಸಿಂದೂರ್​ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಹಿನ್ನಲೆ ಸಂಸದೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ನ್ಯಾಯಾಲಯ ಮಹುವಾ ಬಂಧನಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ.

ನ್ಯಾಯಾಲಯಕ್ಕೆ ಹಾಜರಾಗಲು ಸಂಸದೆ ನಕಾರ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗಲು ಮಹುವಾ ಹಿಂದೇಟು ಹಾಕಿದ್ದರು. ಈ ಹಿಂದೆ ಜನ ನಾನು ನನ್ನ ಕ್ಷೇತ್ರಕ್ಕೆ ಹೋದಾಗ ಮೊಟ್ಟೆ ಮೂಲಕ ದಾಳಿ ನಡೆಸಿದ್ದರು. ಹೀಗಾಗಿ ನ್ಯಾಯಾಲಯಕ್ಕೆ ಬರಲು ತಮಗೆ ಜೀವಭಯವಿದೆ ಎಂದು ಹೇಳಿದ್ದರು.

ಈ ವಾದವನ್ನು ಆಲಿಸಿದ, ನ್ಯಾಯಪೀಠ ನಮ್ಮ ಸ್ವಾಂತಂತ್ರ ಹೋರಾಟಗಾರರು ಬ್ರಿಟಿಷರ ಬಂದೂಕಿನ ಗುಂಡಿಗೆ ಅಂಜಲಿಲ್ಲ, ನೀವು ಮೊಟ್ಟೆಗೆ ಹೆದರುತ್ತೀರಾ? ರಾಜಕೀಯಕ್ಕೆ ಬರುವ ಮೊದಲು ಇವುಗಳ ಬಗ್ಗೆ ನಿಮಗೆ ಅರಿವಿರಲಿಲ್ಲವೇ? ಎಂದು ಪ್ರಶ್ನಿಸಿತ್ತು.


ಹೀಗೆ ಸತತವಾಗಿ, ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಸಂಸದೆಗೆ ಕಾನೂನಿನ ಮೇಲೆ ಯಾವುದೇ ಗೌರವವಿಲ್ಲ ಎಂದು ಕಾಣುತ್ತದೆ ಎಂದು ಪರಿಗಣಿಸಿ, ನ್ಯಾಯಾಧೀಶರು ಕೊಲ್ಕತ ಪೊಲೀಸರಿಗೆ ಸಂಸದೆಯನ್ನು ಬಂಧಿಸಲು ಅನುಮತಿ ನೀಡಿದ್ದಾರೆ, (ಏಜನ್ಸೀಸ್​).