Lavish Wedding (ಚಿತ್ರ Instagram) 
ದೇಶ

ಮದುವೆ ಖರ್ಚಿನ ಹಣದಲ್ಲಿ ಫ್ಲಾಟ್ ಖರೀದಿ: ಹೊಸ ಮನೆಯಲ್ಲೇ ಹಸೆಮಣೆ ಏರಿದ ದಂಪತಿ! Lavish Wedding

ಪ್ರಮುಖ ಮುಖ್ಯಾಂಶಗಳು

  • ಮದುವೆ ಎಂದರೆ ಕೇವಲ ಎರಡು ಜೀವಗಳ ಒಂದಾಗುವುದಲ್ಲ, ಅದು ನಂಬಿಕೆ ಮತ್ತು ಪ್ರೀತಿಯ ಸಮ್ಮಿಲನ
  • ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ, ಆಡಂಭರ ಮತ್ತು ತೋರಿಕೆಗೆ ಮಾತ್ರ ಸೀಮಿತವಾಗಿರುತ್ತದೆ
  • ಅದ್ದೂರಿ ಮದುವೆಗೆ ಖರ್ಚು ಮಾಡುವ ಹಣದಲ್ಲಿ ಹೊಸ ಮನೆಯನ್ನು ಖರೀದಿಸಿ, ಅದರಲ್ಲೇ ಸರಳ ವಿವಾಹವಾದ ಜೋಡಿ
  • ಈ ನಿರ್ಧಾರವು ಅವರಿಗೆ ಹೊಸ ಮನೆ ಹೊಂದಲು ಮತ್ತು ಹೊಸ ಜೀವನವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ
Lavish Wedding: ಮದುವೆ ಎಂದರೆ ಕೇವಲ ಎರಡು ಜೀವಗಳ ಒಂದಾಗುವುದಲ್ಲ, ಅದು ನಂಬಿಕೆ ಮತ್ತು ಪ್ರೀತಿಯ ಸಮ್ಮಿಲನ ಎಂದು ಯಾರೋ ಹೇಳಿದ ಮಾತು ಇಂದು ನೆನಪಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ, ಆಡಂಭರ ಮತ್ತು ತೋರಿಕೆಗೆ ಮಾತ್ರ ಸೀಮಿತವಾಗಿರುತ್ತದೆ. ಅದೆಲ್ಲದರ ನಡುವೆ ಇಲ್ಲೊಂದು ಜೋಡಿ ಅದ್ದೂರಿ ಮದುವೆಗೆ ಖರ್ಚು ಮಾಡುವ ಹಣದಲ್ಲಿ ಹೊಸ ಮನೆಯನ್ನು ಖರೀದಿಸಿ, ಅದರಲ್ಲೇ ಸರಳ ವಿವಾಹವಾಗಿರುವ ಘಟನೆ ಸಧ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ನವ ಜೋಡಿ ಹೊಸದಾಗಿ ಖರೀದಿಸಿದ ಮನೆಯೊಳಗೆ ಸರಳವಾಗಿ ಅಲಂಕಾರ ಮಾಡಿದ್ದಾರೆ. ಅದರಲ್ಲಿ ಶಾಸ್ತ್ರ ಸಂಪ್ರದಾಯದಂತೆ ವಿವಾಹವಾಗುತ್ತಿದ್ದಾರೆ. ಈ ವೇಳೆ ಅವರಿಬ್ಬರ ಸುತ್ತ ಕುಟುಂಬದ ಸದಸ್ಯರು ಸುತ್ತುವರೆದು ಶಾಸ್ತ್ರಗಳನ್ನು ನೆರವೇರಿಸುವುದನ್ನು ನೋಡಬಹುದಾಗಿದೆ.
ಈ ವಿವಾಹದ ಬಗ್ಗೆ ಮಾತನಾಡಿದ ವರನ ಸಹೋದರ, ದುಬಾರಿ ವಿವಾಹ ಆಚರಣೆಗಳ ಬದಲಿಗೆ, ಅದೇ ಹಣವನ್ನು ಕೂಡಿಟ್ಟು ಮನೆ ಖರೀದಿಸಲಾಗಿದೆ. ಈ ನಿರ್ಧಾರವು ಅವರಿಗೆ ಹೊಸ ಮನೆ ಹೊಂದಲು ಮತ್ತು ಹೊಸ ಜೀವನವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಅನೇಕ ಬಳಕೆದಾರರು ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಆಸ್ತಿ ಬೆಲೆಗಳು ಮತ್ತು ಜೀವನ ವೆಚ್ಚಗಳು ಏರುತ್ತಿರುವುದರಿಂದ, ಅದ್ದೂರಿ ಆಚರಣೆಗಳಿಗಿಂತ ವಸತಿ ಭದ್ರತೆಗೆ ಆದ್ಯತೆ ನೀಡುವುದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಮದುವೆ ಎಂದರೆ 10 ವರ್ಷಗಳ ಕಾಲ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡುವುದಲ್ಲ ಎಂದು ಬರೆದಿದ್ದಾರೆ (ಏಜೆನ್ಸೀಸ್​).