ಸಿಎಂ ದೇವೇಂದ್ರ ಫಡ್ನವೀಸ್ 
ದೇಶ

ಆಟೋ-ಟ್ಯಾಕ್ಸಿ ಚಾಲಕರಿಗೆ ಭಾಷೆ ಕಡ್ಡಾಯ ವಿವಾದ; ಮರಾಠಿ ಕಲಿಯಲು ಒಂದು ವರ್ಷ ಸಮಯಾವಕಾಶ ನೀಡಿದ ಸಿಎಂ ಫಡ್ನವೀಸ್ | language mandatory

ಮುಂಬೈ: ಮಹಾರಾಷ್ಟ್ರದಲ್ಲಿ ಆಟೋ-ಟ್ಯಾಕ್ಸಿ ಚಲಾಯಿಸಲು ಮರಾಠಿ ಭಾಷೆ ಕಡ್ಡಾಯ(language mandatory) ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಮಧ್ಯೆ ಸಿಎಂ ದೇವೇಂದ್ರ ಫಡ್ನವೀಸ್ ಗುರುವಾರ(ಆ. 27) ಮರಾಠಿ ಕಲಿಯಲು ಚಾಲಕರಿಗೆ ಹೆಚ್ಚುವರಿ ಒಂದು ವರ್ಷ ಕಾಲಾವಕಾಶ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಕ್ಯಾಬ್ ಮತ್ತು ಆಟೋ ಚಾಲಕರನ್ನು ಭೇಟಿಯಾಗಿದ್ದೇನೆ. ಎಲ್ಲರೂ ಮರಾಠಿ ತಿಳಿದುಕೊಳ್ಳಬೇಕು ಎಂಬುದನ್ನು ಅವರೆಲ್ಲರೂ ಒಪ್ಪುತ್ತಾರೆ. ಆದರೆ ವಿವಿಧ ವಯೋಮಾನದ ಜನರು ಈ ವೃತ್ತಿಯಲ್ಲಿದ್ದಾರೆ ಮತ್ತು ಅವರಿಗೆ ಮರಾಠಿ ಬೇಗನೆ ಕಲಿಯುವುದು ಕಷ್ಟ ಎಂದು ಹೇಳಿದ್ದಾರೆ.
ಹೀಗಾಗಿ ವಿವಿಧ ವಯೋಮಾನದ ಚಾಲಕರಿಗೆ ಭಾಷೆಯನ್ನು ಕಲಿಯಲು ಹೆಚ್ಚಿನ ಸಮಯ ಬೇಕಾಗಬಹುದು ಎಂದು ಸರ್ಕಾರ ಅರ್ಥಮಾಡಿಕೊಂಡಿದೆ ಮತ್ತು ಆದ್ದರಿಂದ ಹೆಚ್ಚುವರಿ ವರ್ಷದ ಅವರ ಬೇಡಿಕೆಯನ್ನು ಒಪ್ಪಿಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಚಾಲಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ರಾಜ್ಯಾದ್ಯಂತ ಎಲ್ಲಾ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರು ಮರಾಠಿ ಭಾಷೆಯನ್ನು ಕಲಿಯಬೇಕು. ಅದರಲ್ಲೇ ಸಂವಹನ ನಡೆಸಬೇಕು ಎಂಬ ಆದೇಶ ಹೊರಡಿಸಿದ ಬಳಿಕ ರಾಜ್ಯಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಸ್ತುತ ಸಿಎಂ ಈ ಅವಧಿಯನ್ನು ಒಂದು ವರ್ಷ ಮೂಂದೂಡಿದ್ದಾರೆ (ಏಜೆನ್ಸೀಸ್).