Sathankulam 
ದೇಶ

ಸಾತಂಕುಲಂ ಲಾಕಪ್ ಡೆತ್ ಕೇಸ್; ತಂದೆ-ಮಗನನ್ನು ಪೊಲೀಸರು ಅಂದು ಕೊಂದಿದ್ಯಾಕೆ?..sathankulam

ಪ್ರಮುಖ ಮುಖ್ಯಾಂಶಗಳು

  • ಸಾಂತಕುಲಂ ಲಾಕಪ್​ ಡೆತ್​ 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ಕೊಟ್ಟ ಕೋರ್ಟ್
  • ತನ್ನದೇ ಠಾಣೆಯ ಹಿರಿಯ ಅಧಿಕಾರಿಗಳ ವಿರುದ್ಧ ಸಾಕ್ಷಿ ನುಡಿದ ಧೀರೆ ಲೇಡಿ ಕಾನ್​ಸ್ಟೇಬಲ್​
  • ಇಬ್ಬರು ಮಕ್ಕಳು, ಕೆಲಸ ಕಳೆದುಕೊಳ್ಳುವ ಹಂಗಿಲ್ಲದೆ ಸಾಕ್ಷ್ಯ ನುಡಿದ ಲೇಡಿ ಸಿಂಗ ರೇವತಿ
  • ಲಾಕಪ್‌ನಲ್ಲಿ ತಂದೆ ಜಯರಾಜ್ ಮತ್ತು ಮಗ ಬೆನ್ನಿಕ್ಸ್ ಮೇಲೆ ನಡೆದ ದೌರ್ಜನ್ಯ ಕೋರ್ಟ್​ ಮುಂದೆ ಬಯಲು
Sathankulam Custodial Death Case2020 ಅದು ಕೋವಿಡ್​ ಕಾಲ ಕರ್ಫ್ಯೂ ಜಾರಿಯಲ್ಲಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಭೀತಿ,  ಆತಂಕ. ಹೀಗಾಗಿ, ಎಲ್ಲವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ.. ವ್ಯಾಪಾರವನ್ನೇ ಆದಾಯವಾಗಿ ನಂಬಿಕೊಂಡು ಇರುವ ಸಾಮಾನ್ಯ ಜನರಿಗೆ ಮಾರಾಟಕ್ಕಿಟ್ಟಿರುವ  ಒಂದು ವಸ್ತುವಾದರೂ ಸೇಲ್​ ಆದರೆ ಅದ್ರಿಂದ ಹಣ ಸಿಗಲಿದೆ. ಹಣ ಸಿಕ್ಕರೆ ದಿನಸಿ ಖರೀದಿಸಬಹುದು ಎನ್ನುವ ತುಡಿತ. 
2020 ಜೂನ್​ 19 ತಮಿಳುನಾಡಿನ ಸಾತಂಕುಲಂನ ತೂತುಕುಡಿ ಚಂದ್ರನ ಕಾಂತಿಯಲ್ಲಿ ಶಾಂತವಾಗಿತ್ತು. ನೀರವ ಮೌನ ಆವರಿಸಿತ್ತು. ಅಲ್ಲಲ್ಲಿ ಪೊಲೀಸರ ಗಸ್ತು ಮಧ್ಯೆ ಪಿ. ಜಯರಾಜ್(59) ಮತ್ತು ಅವರ ಪುತ್ರ ಜೆ. ಬೆನ್ನಿಕ್ಸ್ (31) ಧೈರ್ಯಮಾಡಿ ತಾವಿಟ್ಟಿದ್ದ ಮೊಬೈಲ್​ ಅಂಗಡಿಯ ಶಟರ್​ ಎಳೆದೇ ಬಿಟ್ಟರು. ತಪ್ಪಾಗಿದ್ದೇ ಅಲ್ಲಿ ನೋಡಿ.. ತಂದೆ-ಮಗ ಪೊಲೀಸ್​ ಕೆಂಗಣ್ಣಿಗೆ ಗುರಿಯಾದರು. 

ಕ್ಲುಲ್ಲಕ ಕಾರಣಕ್ಕೆ ಹಲ್ಲೆ

ಕೋವಿಡ್​ ನಿಯಮ ಉಲ್ಲಂಘಿಸಿದ ಕ್ಷುಲ್ಲಕ ಕಾರಣವನ್ನು, ದೊಡ್ಡ ಘಟನೆಯಾಗಿ ಭಾವಿಸಿದ ಸಾತಂಕುಲಂ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಅಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಲಾಕಪ್​​ನಲ್ಲಿ ಹಾಕಿ,, ಹೊಡೆದು, ಬಡೆದು ಹಿಗ್ಗಾಮುಗ್ಗ ಹಲ್ಲೆ ಮಾಡಿದರು. ತೀವ್ರ ನೋವು ತಾಳಲಾರದೆ 2020 ಜೂನ್​22ರಂದು ಮಗ ಮೃತಪಟ್ಟರೆ, 23ರಂದು ತಂದೆ ವಿಧಿವಶರಾದರು.
ಪ್ರಕರಣ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು, ಜನರಿಂದ ಆಕ್ರೋಶ ಹೆಚ್ಚಾಯ್ತು. ಆನಂತರ  Central Bureau of Investigation ತನಿಖೆ ಶುರುವಿಟ್ಟುಕೊಂಡಿತ್ತು. ಸಿಬಿಐ ಅಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷಾ ವರದಿ ಪ್ರಕಾರ ಜಯರಾಜ್​​ ದೇಹದ ಮೇಲೆ 17 ಮತ್ತು ಬೆನಿಕ್ಸ್​ ದೇಹದ ಮೇಲೆ 17 ಗಾಯವಾಗಿದ್ದನ್ನು ಉಲ್ಲೇಖಿಸಲಾಗಿತ್ತು. ಇದಕ್ಕೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿ 9 ಪೊಲೀಸರ ವಿರುದ್ಧ ಚಾರ್ಜ್​ ಶೀಟ್​ ದಾಖಲು ಮಾಡಲಾಗಿತ್ತು.

ಯಾರ್ಯಾರಿಗೆ ಸಿಕ್ತು ಮರಣ ದಂಡನೆ?

ಸುಮಾರು ಆರು ವರ್ಷಗಳ ಬಳಿಕ ಈ ಮನಕಲಕುವ ಲಾಕಪ್​ ಡೆತ್​​ ಘಟನೆಗೆ ನ್ಯಾಯ ಸಿಕ್ಕಿದೆ. ಮಧುರೈನ ಕೋರ್ಟ್​ ಐತಿಹಾಸಿಕ ತೀರ್ಪನ್ನು ನೀಡಿದೆ. ತಂದೆ-ಮಗನ ಸಾವಿಗೆ ಕಾರಣರಾದ, ಮಾಜಿ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್  ಸೇರಿ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ   ಮರಣದಂಡನೆ ಶಿಕ್ಷೆ ವಿಧಿಸಿದೆ. 
ನ್ಯಾಯ ಎಲ್ಲಿದೆ ಎನ್ನುವ ಈ ಕಲಿಯುಗದ ಕಾಲದಲ್ಲಿ ಲಾಕಪ್​ ಡೆತ್​ಗಳಂತಹ ಕೇಸ್​ಗಳನ್ನು ಅಲ್ಲಲ್ಲೇ ಮುಚ್ಚಿ ಹಾಕುವ ಘಟನೆಗಳು ಸುಮಾರಿದೆ. ಇಂತಹ ಸಂದರ್ಭಲ್ಲಿ ಇವರಿಬ್ಬರ ದಾರುಣ ಸಾವಿಗೆ ಸರಿಯಾದ ತೀರ್ಪು ಸಿಕ್ಕಿದ್ದು ಹೇಗೆ, ಸತ್ಯ ಹೇಳಿದ್ಯಾರು ಎಂದು ಈ ಕೇಸ್​​ನ ವೃತ್ತಾಂತ ನೋಡಿದಾಗ ಶಾಕ್​ ಆಗೋದಂತು ಗ್ಯಾರಂಟಿ. ಯಾಕೆಂದ್ರೆ ಈ ಐತಿಹಾಸಿಕ ತೀರ್ಪಿನ ಹಿಂದೆ ಇರೋದು ಒಬ್ಬ ಸಾಮಾನ್ಯ ಮಹಿಳಾ ಕಾನ್‌ಸ್ಟೆಬಲ್ ರೇವತಿ.

ಯಾರಿದು ರೇವತಿ?

2020ರಲ್ಲಿ ಈ ಘಟನೆ ನಡೆದ ವೇಳೆ ರೇವತಿ ಸಹ ಅದೇ ಸ್ಥಳದಲ್ಲಿ ಇದ್ದರು. ಕಣ್ಣೆದುರೇ  ಕೌರ್ಯವನ್ನು ಕಂಡು ಮುಮ್ಮಲ ಮರುಗಿದರು. ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಎಸ್. ಭಾರತೀದಾಸನ್ ಅವರು ತನಿಖೆಗೆ ಬಂದಾಗ, ರೇವತಿ ತನ್ನ ಹುದ್ದೆ ಮತ್ತು ಇಬ್ಬರು ಮಕ್ಕಳಿಗೆ ಏನಾಗುತ್ತದೋ ಎನ್ನುವ ಜೀವದ ಹಂಗನ್ನು ಮರೆತು ಸತ್ಯ ನುಡಿದರು.
 ರೇವತಿ ಹೇಳಿದ್ದಿಷ್ಟು..
ಸರ್ ನಾನು ಎಲ್ಲ ಸತ್ಯವನ್ನು ಬಾಯ್ಬಿಟ್ಟು  ಹೇಳುತ್ತೇನೆ. ಎಲ್ಲೇ ಕರೆದರು ಬಂದು ಸಾಕ್ಷಿ ಹೇಳುತ್ತೇನೆ. ಆದರೆ ನಂಗಿರೋದು ಒಂದೇ ಬೇಡಿಕೆ, ನನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ನನ್ನ ಕೆಲಸಕ್ಕೆ ರಕ್ಷಣೆ ನೀಡುತ್ತೀರಾ ಎಂದು ಕೇಳುತ್ತಾ ಅಂದು ಠಾಣೆಯಲ್ಲಿ ನಡೆದ ಎಲ್ಲ ಸಂದರ್ಭವನ್ನು ವಿವರಿಸಿದರು.

ಠಾಣೆಯಲ್ಲಿ ಅಂದು ಆಗಿದ್ದೇನು?

ರೇವತಿಯವರ ಪ್ರಕಾರ, ಅಂದು  ಪೊಲೀಸರು ತಂದೆ-ಮಗನನ್ನು ಬೆತ್ತಲೆಗೊಳಿಸಿ, ಬೂಟುಗಾಲುಗಳಿಂದ ತುಳಿದು, ಸಿಕ್ಕ ಸಿಕ್ಕ ವಸ್ತುಗಳಿಂದ ಮನಬಂದಂತೆ ಹೊಡೆದಿದ್ದರು. ಸಂತ್ರಸ್ತರು ನೋವಿನಿಂದ ಕಿರುಚಾಡುತ್ತಿದ್ದಾಗ ಪೊಲೀಸರು ಮದ್ಯ ಸೇವಿಸುತ್ತಾ ವಿಕೃತಿ ಮೆರೆದಿದ್ದರು. ರೇವತಿ ಅವರು ಗಾಯಗೊಂಡಿದ್ದ ಜಯರಾಜ್‌ಗೆ ಕಾಫಿ ನೀಡಲು ಮುಂದಾದಾಗ, ಇತರ ಪೊಲೀಸರು ಅದನ್ನು ಕಿತ್ತೆಸೆದಿದ್ದ ಬಗ್ಗೆ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).​

ಜೀವಬೆದರಿಕೆಗೆ ಅಳುಕದ ಲೇಡಿ ಸಿಂಗಂ

ಸಹೋದ್ಯೋಗಿಗಳೇ ಆರೋಪಿಗಳಾಗಿದ್ದ ಕಾರಣ, ಆಕೆಗೆ ಜೀವಬೆದರಿಕೆ ಇತ್ತು.ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಾಗಲೂ ಇತರ ಪೊಲೀಸರು ಹೊರಗಡೆ ನಿಂತು ರೇವತಿ ಅವರಿಗೆ ಮಾನಸಿಕ ಕಿರುಕುಳ ನೀಡಲು ಯತ್ನಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಆದೇಶಿಸಿತ್ತು. ಕಾನ್​ಸ್ಟೇಬಲ್​ ರೇವತಿ ಕೊಟ್ಟ ಹೇಳಿಕೆಯೇ ಇಂದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲು ಕಾರಣವಾಯ್ತು, (ಏಜೆನ್ಸೀಸ್).