ಹಳೇ ಕಚೇರಿ ಖಾಲಿ ಮಾಡುವಂತೆ ಕಾಂಗ್ರೆಸ್​ಗೆ ಕೇಂದ್ರದಿಂದ ನೋಟಿಸ್; ಮಾ.28ರವರೆಗೂ ಗಡುವು! Congress 
ದೇಶ

ಹಳೇ ಕಚೇರಿ ಖಾಲಿ ಮಾಡುವಂತೆ ಕಾಂಗ್ರೆಸ್​ಗೆ ಕೇಂದ್ರದಿಂದ ನೋಟಿಸ್; ಮಾ.28ರವರೆಗೂ ಗಡುವು! Congress

ಪ್ರಮುಖ ಮುಖ್ಯಾಂಶಗಳು

  • ಲುಟಿಯನ್ಸ್​ ವಲಯದಿಂದ ರಾಜಕೀಯ ಪಕ್ಷ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್​ ಆದೇಶ
  • ಕಾಂಗ್ರೆಸ್ ಹಳೇ ಕಚೇರಿ ಸ್ಥಳಾಂತರಿಸಲು ಸೂಚನೆ ಕೊಟ್ಟ ಕೇಂದ್ರ ಸರ್ಕಾರ
  • ಭಾರತದಲ್ಲಾಗುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ನಾಯಕರು ಕಿಡಿ
ನವದೆಹಲಿ: ದಶಕಗಳ ನೆನಪುಗಳನ್ನು ಹೊತ್ತ ದೆಹಲಿಯ 24, ಅಕ್ಬರ್ ರಸ್ತೆಯ ಐತಿಹಾಸಿಕ ಕಚೇರಿಗೆ ಕಾಂಗ್ರೆಸ್ ( Congress ) ವಿದಾಯ ಹೇಳುವ ಅನಿವಾರ್ಯತೆ ಬಂದಿದೆ. 1978ರಲ್ಲಿ  ನಿರ್ಮಿಸಲಾಗಿದ್ದ ಕಾಂಗ್ರೆಸ್​ ಪ್ರಧಾನ ಕಚೇರಿಯನ್ನು ಮಾ.28 ಶನಿವಾರದೊಳಗೆ  ಖಾಲಿ ಮಾಡುವಂತೆ ಕೇಂದ್ರ ಬಿಜೆಪಿ ಸರ್ಕಾರದಿಂದ ಸೂಚನೆ ಸಿಕ್ಕಿದೆ. ಸದ್ಯ ಈ ವಿಚಾರವೂ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. 
ಜನವರಿ 15ರಂದು ಕೋಟ್ಲಾ ರಸ್ತೆಯಲ್ಲಿರುವ ನೂತನ ಇಂದಿರಾ ಭವನವನ್ನು ಕಾಂಗ್ರೆಸ್​​ ಉದ್ಘಾಟಿಸಿತ್ತು.  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಕಾಂಗ್ರೆಸ್​ ನಾಯಕರು ಉಪಸ್ಥಿಯಲ್ಲಿದ್ದರು. ನೂತನ ಕಚೇರಿಗೆ ಸ್ಥಳಾಂತರಗೊಳ್ಳುವ ಸಿದ್ಧತೆಗಳು ನಡೆದಿವೆ.

ಸ್ಥಳಾಂತರಕ್ಕೆ ಕಾರಣವೇನು?

ಎಲ್ಲ​ ರಾಜಕೀಯ ಪಕ್ಷಗಳು ಲೂಟಿಯಾನ್ಸ್​ ವಲಯದಿಂದ ಹೊರಭಾಗದಲ್ಲಿ ಕಚೇರಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ಹೊರಡಿಸಿತ್ತು ಅದರ ಅನುಸಾರ ಕೇಂದ್ರ ಸರ್ಕಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಅದರ ಅನುಸಾರ  ಕೇಂದ್ರ ಸರ್ಕಾರವು ಹಳೆಯ ಕಚೇರಿ ಮತ್ತು ರೈಸಿನಾ ರಸ್ತೆಯ 5ನೇ ಸಂಖ್ಯೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿ ಮತ್ತೊಂದನ್ನು ಖಾಲಿ ಮಾಡುವಂತೆ ಸೂಚನೆ ನೀಡಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್​ ಕಿಡಿ

"ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರವಲ್ಲ. ಇದು ದುರದೃಷ್ಟಕರ. ಕಚೇರಿ ಸ್ಥಳಾಂತರದ ಬಗ್ಗೆ ನಮಗೆ ನೋಟಿಸ್ ಸಿಗಲಿ. ಚರ್ಚೆ ನಡೆಸಿದ ನಂತರ ನಾವು ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ" ಎಂದು 24 ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ಬಗ್ಗೆ ಪಕ್ಷದ ಸಂಸದ ಪ್ರಮೋದ್ ತಿವಾರಿ ಮಾತನಾಡಿದರು.
ಕೇಂದ್ರ ಸರ್ಕಾರವು ನಮ್ಮ ಮೇಲೆ ಒತ್ತಡ ಹೇರುವ ಮೂಲಕ ನಮ್ಮನ್ನು ಮೌನಗೊಳಿಸಬಹುದು ಎಂದು ಭಾವಿಸಿದ್ದಾರೆ.   ನಮ್ಮನ್ನು ಹೆದರಿಸಲು ಪ್ರಯತ್ನಿಸದಬೇಡಿ. 11, ಅಶೋಕ್ ರಸ್ತೆ ಅಥವಾ ಪಂತ್ ಮಾರ್ಗ್‌ನಲ್ಲಿರುವ ಬಿಜೆಪಿ ಕಚೇರಿಗೆ ನೋಟಿಸ್ ಕೊಟ್ಟಿದೆಯೇ?. ಇರಾನ್​ -ಅಮೆರಿಕ ಮಧ್ಯೆಯ ಸಂಘರ್ಷದಿಂದ ದೇಶದಲ್ಲಿ ನಷ್ಟವುಂಟಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಯಾಕೆ ಕಾಳಜಯಿಲ್ಲ ಎಂದು ಸಂಸದ ಇಮ್ರಾನ್ ಮಸೂದ್ ಕಿಡಿಕಾರಿದರು, (ಏಜೆನ್ಸೀಸ್).