ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಕುಮಾರ್ ಕೇತ್ಕರ್ | Kumar Ketkar 
ದೇಶ

2014ರ ಎನ್​ಡಿಎ ಗೆಲುವಿಗೆ CIA-ಮೊಸಾದ್ ಕಾರಣವಂತೆ; ಮಹತ್ವದ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ | Kumar Ketkar

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅಮೆರಿಕ ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳಾದ ಸಿಐಎ ಮತ್ತು ಮೊಸಾದ್ ಸಂಚು ಕಾರಣ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಕುಮಾರ್ ಕೇತ್ಕರ್(Kumar Ketkar) ಬುಧವಾರ (ನ.26) ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕೇತ್ಕರ್, ಕಾಂಗ್ರೆಸ್​ನ ಹಿಂದಿನ ಚುನಾವಣಾ ಸಾಧನೆಯನ್ನು ಪ್ರತಿಬಿಂಬಿಸುತ್ತಾ, 2000ದ ದಶಕದಲ್ಲಿ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಹೇಗೆ ಸ್ಥಿರವಾಗಿ ಸುಧಾರಿಸಿಕೊಂಡಿತು. ಅಲ್ಲದೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್​ 145 ಸ್ಥಾನಗಳನ್ನು ಗಳಿಸಿತು ಮತ್ತು 2009ರಲ್ಲಿ 206 ಸ್ಥಾನಗಳನ್ನು ಗೆದ್ದಿತು ಎಂದು ನೆನಪಿಸಿದ್ದಾರೆ. ಕೇತ್ಕರ್ ಪ್ರಕಾರ, ಈ ಏರಿಕೆಯ ಪ್ರವೃತ್ತಿ ಮುಂದುವರಿದಿದ್ದರೆ, ಕಾಂಗ್ರೆಸ್ 2014ರಲ್ಲಿ 250 ಸ್ಥಾನಗಳ ಗಡಿಯನ್ನು ದಾಟಿ ಆರಾಮವಾಗಿ ಅಧಿಕಾರವನ್ನು ಉಳಿಸಿಕೊಳ್ಳಬಹುದಿತ್ತು ಎಂದಿದ್ದಾರೆ.
ಅದರೆ, 2014ರ ಚುನಾವಣೆಯಲ್ಲಿ ಪಕ್ಷದ ಸಂಖ್ಯೆಗಳು ಕೇವಲ 44 ಸ್ಥಾನಗಳಿಗೆ ಇಳಿದವು. ಅಲ್ಲದೆ, ಆ ಕ್ಷಣದಲ್ಲಿ ಆಟ ಪ್ರಾರಂಭವಾಯಿತು. ಈ ತೀವ್ರ ಕುಸಿತವು ನೈಜ ರಾಜಕೀಯ ಫಲಿತಾಂಶವಲ್ಲ ಎಂದು ಕೇತ್ಕರ್ ಆರೋಪಿಸಿದರು.

ನಮ್ಮ ಸೋಲಿನಲ್ಲಿ ವಿದೇಶಿ ಸಂಸ್ಥೆಗಳ ಕೈವಾಡ

ಮುಂದುವರೆದು ಮಾತನಾಡಿದ ಕೇತ್ಕರ್, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಕೆಲವು ವಿದೇಶಿ ಸಂಸ್ಥೆಗಳು ದೃಢನಿಶ್ಚಯ ಹೊಂದಿದ್ದವು. ಯಾವುದೇ ಸಂದರ್ಭದಲ್ಲೂ 2014 ರಲ್ಲಿ ಕಾಂಗ್ರೆಸ್‌ನ ಸಂಖ್ಯೆ 206 ಮೀರಬಾರದು ಎಂದು ನಿರ್ಧರಿಸಲಾಯಿತು ಎಂದಿದ್ದಾರೆ.
ಅಲ್ಲದೆ, ಈ ಸಂಸ್ಥೆಗಳು ಕಾಂಗ್ರೆಸ್​ನ್ನು ಗಣನೀಯವಾಗಿ ಕೆಳಗಿಳಿಸದ ಹೊರತು, ಭಾರತದಲ್ಲಿ ತಮ್ಮ ಆಟವಾಡಲು ಸಾಧ್ಯವಾಗುವುದಿಲ್ಲ ಎಂದು ನಂಬಿದ್ದವು. ಸಿಐಎ ಮತ್ತು ಮೊಸಾದ್ ಎರಡೂ ತಮ್ಮ ಪ್ರಭಾವವನ್ನು ತಮ್ಮ ನೀತಿಗಳನ್ನು ಜಾರಿಗೆ ತರಲು ಭಾರತದಲ್ಲಿ ರಾಜಕೀಯ ಬದಲಾವಣೆಯ ಅಗತ್ಯವನ್ನು ಗುರುತಿಸಿವೆ ಎಂದು ಕೇತ್ಕರ್ ಹೇಳಿದ್ದಾರೆ.

ಮೊಸಾದ್ ಭಾರತದ ವಿವರವಾದ ಡೇಟಾವನ್ನು ಸಂಗ್ರಹಿಸಿದೆ

ಮೊಸಾದ್ ಭಾರತದ ರಾಜ್ಯಗಳು ಮತ್ತು ಕ್ಷೇತ್ರಗಳ ಕುರಿತು ವ್ಯಾಪಕವಾದ ಡೇಟಾವನ್ನು ಸಿದ್ಧಪಡಿಸಿದೆ. ಸಿಐಎ ಕೂಡ ಅದೇ ರೀತಿ ಮಾಡಿದೆ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಾರ್ವಜನಿಕರಲ್ಲಿ ಸ್ವಲ್ಪ ಅಸಮಾಧಾನವಿತ್ತು ಎಂದು ಒಪ್ಪಿಕೊಂಡ ಕೇತ್ಕರ್, ಕಾಂಗ್ರೆಸ್ ಸ್ಥಾನಗಳು 206 ರಿಂದ 44 ಕ್ಕೆ ಕುಸಿದಿರುವುದನ್ನು ಸಮರ್ಥಿಸುವಷ್ಟು ಅಸಮಾಧಾನದ ಮಟ್ಟ ಇರಲಿಲ್ಲ ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).