Jaismine Lamboria: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾನುವಾರ(ಆ. 01) ಮಹಿಳೆಯರ 57 ಕೆಜಿ ಬಾಕ್ಸಿಂಗ್ ಫೈನಲ್ನಲ್ಲಿ ಉತ್ತರ ಐರ್ಲೆಂಡ್‌ನ ಮೈಕೆಲಾ ವಾಲ್ಷ್ ಅವರನ್ನು ಸೋಲಿಸುವ ಮೂಲಕ ಭಾರತದ ಜೈಸ್ಮಿನ್ ಲಂಬೋರಿಯಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಒಟ್ಟು ಭಾರತದ ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಜೈಸ್ಮಿನ್ ಲಂಬೋರಿಯಾ ಪಂದ್ಯದ ಉದ್ದಕ್ಕೂ ಸಂಯಮ, ನಿಖರತೆ ಮತ್ತು ಆಕ್ರಮಣಶೀಲತೆಯನ್ನು ಪ್ರದರ್ಶಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದರು. ಅತ್ಯುತ್ತಮ ಫಾರ್ಮ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಜೈಸ್ಮಿನ್, ಆರಂಭಿಕ ಸುತ್ತಿನಿಂದಲೇ ವಾಲ್ಷ್ ಅವರನ್ನು ಒತ್ತಡದಲ್ಲಿಡಲು ಅವರು ತಮ್ಮ ತೀಕ್ಷ್ಣವಾದ ಪಾದಚಲನೆ, ತ್ವರಿತ ಸಂಯೋಜನೆಗಳು ಮತ್ತು ಶಿಸ್ತುಬದ್ಧ ರಕ್ಷಣೆಯನ್ನು ಅವಲಂಬಿಸಿ ವಿಜಯದ ನಗೆ ಬೀರಿದರು.
ಈ ಗೆಲುವು ಜೈಸ್ಮಿನ್ ಅವರ ವೃತ್ತಿಜೀವನದ ಅತಿದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಏರಿಳಿತಗಳನ್ನು ಕಂಡ ಬಳಿಕ ಹರಿಯಾಣ ಬಾಕ್ಸರ್ ಅತ್ಯಂತ ಮುಖ್ಯವಾದ ಗೇಮ್ಸ್ನಲ್ಲಿ ಅತ್ಯುತ್ತುಮ ಪ್ರದರ್ಶನ ನೀಡಿದ್ದಾರೆ. ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಪ್ರಮುಖ ಮಹಿಳಾ ಬಾಕ್ಸರ್ಗಳ ಸಾಲಿನಲ್ಲಿ ಸ್ಥಾನ ಪಡೆದರು (ಏಜೆನ್ಸೀಸ್).