ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ ಶರ್ಮಿಳಾ ಧನ್ಕರ್ಗೆ ಚಿನ್ನ
- ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶರ್ಮಿಳಾ ಧನ್‌ಕರ್ ಐತಿಹಾಸಿಕ ಸಾಧನೆ
- ಮಹಿಳೆಯರ ಶಾಟ್‌ಪಟ್ (F57) ಕೊನೆಯ ಸುತ್ತಿನಲ್ಲಿ ಶರ್ಮಿಳಾಗೆ ಚಿನ್ನ
- ಭಾರತದ ಒಟ್ಟು ಪದಕಗಳ ಸಂಖ್ಯೆ ಈಗ 10ಕ್ಕೆ ಏರಿಕೆ
ಗ್ಲ್ಯಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ (Commonwealth Games ) ಭಾರತೀಯರು ಪದಕಗಳ ಓಟವನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ ಎಂಬುದಕ್ಕೆ ಮತ್ತೊಂದು ಶರ್ಮೀಳಾ ಧನಕರ್ ಸ್ವರ್ಣ ಗೆಲುವು ಜ್ವಲಂತ ಸಾಕ್ಷಿ.
ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶರ್ಮಿಳಾ ಧನ್‌ಕರ್ ಐತಿಹಾಸಿಕ ಸಾಧನೆಗೈಯುವ ಮೂಲಕ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪಟ್ (F57) ಕೊನೆಯ ಸುತ್ತಿನಲ್ಲಿ ಭರ್ಜರಿ ಪೈಪೋಟಿ ನೀಡಿದ ಶರ್ಮಿಳಾ, ಪ್ರಥಮ ಸ್ಥಾನ ಪಡೆದು ಸ್ವಣಕ್ಕೆ ಮುತ್ತಿಟ್ಟರು. ಕ್ರೀಡಾಕೂಟದ 5ನೇ ದಿನದಂದು ವಿದೇಶಿ ನೆಲದಲ್ಲಿ ಭಾರತೀಯರು ಅದ್ಭುತ ಪ್ರದರ್ಶನ ನೀಡಿದ್ದು, ದೇಶಕ್ಕೆ ಒಲಿದ ಪದಕಗಳ ಸಂಖ್ಯೆ ಇದೀಗ 10ಕ್ಕೆ ಏರಿದೆ.
ಶರ್ಮಿಳಾ ಚಿನ್ನದ ಬೇಟೆ, ಶಿಲ್ಪಾಗೆ ಕಂಚು
ಶರ್ಮಿಳಾ ಧನ್‌ಕರ್ ಪ್ರಥಮ ಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಟ್ಟರೆ, ಇದೇ ಸ್ಪರ್ಧೆಯಲ್ಲಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಶಿಲ್ಪಾ ಕೆ. ಶೈಲಾ, ತಡವಾಗಿ ಬಂದ ಫಲಿತಾಂಶದ ಅಪ್ಡೇಟ್ನಿಂದ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಹೈಜಂಪ್, ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ
ಇನ್ನು, ಪುರುಷರ ಹೈಜಂಪ್ ಫೈನಲ್‌ನಲ್ಲಿ ಸರ್ವೇಶ್ ಅನಿಲ್ ಕುಶಾರೆ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿಯ ಪದಕ ಗೆದ್ದರೆ, ಪುರುಷರ 79 ಕೆಜಿ ವಿಭಾಗದಲ್ಲಿ ವಲ್ಲೂರಿ ಅಜಯ್ ಬಾಬು ಹಾಗೂ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮಹಿಳೆಯರ 58 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಕಂಚಿನ ಪದಕ ಗೆದ್ದು ಸ್ಕಾಟ್ಲ್ಯಾಂಡ್ನಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಬಾಕ್ಸಿಂಗ್‌ನಲ್ಲಿ ಮತ್ತೊಂದು ಪದಕ ಖಚಿತ!
ಬಾಕ್ಸಿಂಗ್ ರಿಂಗ್‌ನಲ್ಲೂ ಭಾರತಕ್ಕೆ ಶುಭಸುದ್ದಿ ಸಿಗುವ ಮುನ್ಸೂಚನೆ ಲಭಿಸಿದ್ದು, ಸಚಿನ್ ಸಿವಾಚ್ (60 ಕೆಜಿ), ಅಂಕುಶ್ ಪಂಘಾಲ್ (80 ಕೆಜಿ) ಮತ್ತು ಸಾಕ್ಷಿ ಚೌಧರಿ (ಮಹಿಳೆಯರ 51 ಕೆಜಿ) ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಬಾಕ್ಸಿಂಗ್‌ನಲ್ಲೂ ದೇಶಕ್ಕೆ ಮತ್ತೊಂದು ಪದಕ ಸಿಗುವುದು ಖಚಿತ ಎಂಬ ಭರವಸೆಗಳು ಹೆಚ್ಚಿವೆ.
ಭಾರತದ ಒಟ್ಟು ಪದಕಗಳ ಪಟ್ಟಿ (5ನೇ ದಿನಕ್ಕೆ)