Kangana Ranaut attacks CJP protesters
- ಪ್ರತಿಭಟನೆ ವೇಳೆ ಝೆನ್-ಜಿಗಳು ನಡೆಸಿದ ರೀಲ್ಸ್ ವಿರುದ್ಧ ಕೆಂಡಕಾರಿದ ಕಂಗನಾ ರಣಾವತ್.
- ಕೊಳಕನ್ನು ದೇಶಕ್ಕೆ ಬಿತ್ತರಿಸುವ ಕೆಲಸವನ್ನು ಜಿರಳೆಗಳು ಎಂದು ಕರೆದುಕೊಂಡವರು ಮಾಡುತ್ತಿದ್ದಾರೆ.
- ಝೆನ್ಜಿ ಗಳ ಭಾಷೆ, ರೀಲ್ಸ್ ವಾಕರಿಕೆ ಬರುವಂತೆ ಇದೆ ಎಂದ ಬಿಜೆಪಿ ಸಂಸದೆ ಕಂಗನಾ ರಣಾವತ್.
Kangana Ranaut attacks CJP protesters: 'ಝೆನ್ಜಿಗಳ ರೀಲ್ಸ್ಗಳು ಕೊಳಕು, ಕಸ, ಅಸಹ್ಯತನವನ್ನು ದೇಶಕ್ಕೆ ಬಿತ್ತರಿಸುವ ಕೆಲಸ ಮಾಡುತ್ತಿದೆ. ಅವರನ್ನು ಜಿರಳೆಗಳು ಎಂದು ಕರೆದುಕೊಂಡು ಅವುಗಳಂತೆ ಕೊಳಕಾಗಿ ವರ್ತಿಸುತ್ತಿದ್ದಾರೆ. ಇವರನ್ನು ಹೆತ್ತು, ಬೆಳಸುತ್ತಿರೋದಾದ್ರೂ ಯಾರು' ಎಂದು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್(kangana ranaut) ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಂಟಾದ ಲೋಪದೋಷದ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್(dharmendra pradhan) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಪ್ರತಿಭಟನೆ ನಡೆಸಿತು. ಜುಲೈ.20ರಂದು ಸಂಸತ್ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸಿದರು. ಇಷ್ಟೇ ಅಲ್ಲದೇ ಅದೇ ಪ್ರತಿಭಟನೆ ದಿನ ಹಾಗೂ ನಂತರ ಝೆನ್ ಜಿಗಳ ವಿನೂತನ ರೀಲ್ಸ್ಗಳು ವೈರಲ್ ಆದವು. ಈ ಬಗ್ಗೆ ಬಿಜೆಪಿ ಸಂಸದೆ ಕಂಗನಾ ಗುಡುಗಿದ್ದಾರೆ.
ಕಂಗನಾ ಪೋಸ್ಟ್ನಲ್ಲಿ ಏನಿದೆ?
'ಒಂದೇ ಸ್ಥಳದಲ್ಲಿ ಇಷ್ಟು ಅರಾಜಕತೆ, ಅಸಹ್ಯ ತರುವಂತಹ ಸ್ಥಿತಿಯನ್ನು ಎಂದಿಗೂ ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಝೆನ್ ಜಿಗಳ ರೀಲ್ಸ್ ವಾಕರಿಕೆ ಬಂದಂತೆ ಇದೆ. ಅಷ್ಟೇ ಅಲ್ಲದೆ ಅವರು ಬಳಕೆ ಮಾಡುವ ಭಾಷೆಯನ್ನು ನನ್ನ ಜೀವನದಲ್ಲಿ ಪ್ರತಿಯೊಂದು ಫ್ರೇಮ್‌ನಲ್ಲೂ ಇಷ್ಟು ಜುಗುಪ್ಸೆ ಹುಟ್ಟಿಸುವ ಮತ್ತು ಒರಟಾದ ದೃಶ್ಯಗಳನ್ನು ಒಟ್ಟಿಗೆ ಕಂಡಿರಲಿಲ್ಲ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.
ಕಂಗನಾ ರಣಾವತ್ ಇನ್ಸ್ಟಾ ಪೋಸ್ಟ್ ಮುಂದುವರೆದು, ಇವರನ್ನು ಹೆತ್ತು, ಬೆಳಸಿದವರು ಯಾರು? ಭಾರತವು ವೈವಿಧ್ಯಮಯ ಸುಂದರ ನೆಲೆಬೀಡು. ಇಲ್ಲಿಯ ಜನರು ಸಂಪ್ರದಾಯವನ್ನು ಮೈಗೂಡಿಸಿಕೊಂಡು ಸಾಂಸ್ಕೃತಿಕ ಪರಿಪಕ್ವತೆಯಿಂದ ಕೂಡಿರುತ್ತಾರೆ. ನಿಮ್ಮನ್ನು ನೀವು ಜಿರಳೆಗಳಂತೆ ಕರೆದುಕೊಂಡು ಅದರಂತೆ ವರ್ತಿಸುತ್ತಿದ್ದೀರಿ. ಹಾಗೆಯೇ ಕಾಣುತ್ತಿದ್ದೀರಿ. ಇಲ್ಲಿ ಯಾವುದೇ ವಿರೋಧಾಭಾಸ ಇಲ್ಲ. ನಿಮ್ಮ ಕೊಳಕುತನ, ಅಸಹ್ಯವನ್ನು ಇಡೀ ದೇಶಕ್ಕೆ ಬಿತ್ತರಿಸುತ್ತಿದ್ದೀರಿ. ಈ ರೀಲ್ಸ್ಗಳನ್ನು ನೋಡಿ ನನಗೆ ಭಯವಾಗಲು ಶುರುವಾಗಿದೆ. ಹೀಗಾಗಿ ನನಗೆ ಡಿಜಿಟಲ್ ಹೀಲಿಂಗ್ ಡಿಟಾಕ್ಸ್ ಅಗತ್ಯವಿದೆ ಎಂದು ಬಿಜೆಪಿ ಸಂಸದೆ ಇನ್ಸ್ಟಾದಲ್ಲಿ ಕಿಡಿಕಾರಿದ್ದಾರೆ.
ವಿಪಕ್ಷಗಳ ವಿರುದ್ಧ ಸಿಡಿಮಿಡಿ
ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ ಅವರು, ವಿರೋಧ ಪಕ್ಷಗಳಿಗೆ ಸದ್ಯ ಅಧಿಕಾರ ಬೇಕು. ಅವರಿಗೆ ಕುರ್ಚಿ ಸಿಗೋವರೆಗೂ ಕಲಾಪ ಸುಗಮವಾಗಿ ಸಾಗಲು ಬಿಡೋದಿಲ್ಲ. ಶಿಕ್ಷಣ ಸುಧಾರಣ ಮಸೂದೆ ಮಂಡನೆ ಮಾಡಲು ವಿಪಕ್ಷ ವಿರೋಧಿಸಿದೆ. ದೇಶದ ಜನರು ಅವರ ಈ ನಿಲುವನ್ನು ಗಮನಿಸಬೇಕು ಎಂದು ಹೇಳಿದರು.
ಧರ್ಮೇಂದ್ರ ಪ್ರಧಾನ್ಗೆ ಭವ್ಯ ಸ್ವಾಗತ
ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ನಂತರ, ಸಂಸತ್ ಕಲಾಪಕ್ಕೆ ಆಗಮಿಸಿದ ವೇಳೆ ಬಿಜೆಪಿ ನಾಯಕರು ಅವರ ಪರ ಘೋಷಣೆ ಕೂಗಿ, ಭವ್ಯವಾಗಿ ಸ್ವಾಗತಸಿದರು. ಸಾಂಪ್ರದಾಯಿಕ ಟೋಪಿ, ಶಾಲು, ಹೂ ಹಾರ ಹಾಕಿ, ಪ್ರಧಾನ್ ಜಿಂದಾಬಾದ್ ಎಂದಿರುವ ವಿಡಿಯೋಗಳು ವೈರಲ್ ಆಗಿದೆ, (ಏಜೆನ್ಸೀಸ್).