- ಕಾಕ್ರೋಚ್ ಜನತಾ ಪಾರ್ಟಿಗೆ ಪ್ರಕಾಶ್ ರಾಜ್ ಬೆಂಬಲ
- ಪ್ರಧಾನಿ ಮೋದಿಯವರಿಗೆ ಇಷ್ಟವಾದ ಮಾವಿನ ಹಣ್ಣನ್ನು ಜಿರಳೆ ಹೀಗೆ ತಿನ್ನುತ್ತೆ ಎಂದ ಪ್ರಕಾಶ್ ರಾಜ್
Prakash Raj: ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ಬಾರಿ ಧ್ವನಿ ಎತ್ತುವ ಪ್ರಕಾಶ್ ರಾಜ್ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ಕೊಡುವ ಮೂಲಕ, ವಿನೂತನವಾಗಿ ವಿಡಿಯೋ ಕ್ರಿಯೇಟ್ ಮಾಡಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಲೇವಡಿ ಮಾಡಿರುವ ಅವರ ವಿಡಿಯೋದಲ್ಲಿ ಹೀಗಿದೆ, ಮಾವಿನ ಹಣ್ಣಿನೊಳಗಿನ ಅಂಶವನ್ನು ತೆಗೆದು ಅದನ್ನು ರಸಾಯನ ಮಾಡಿ, ಅದರ ಸಿಪ್ಪೆಯೊಳಗೆ ಹಾಲು ಮತ್ತು ಹಣ್ಣನ್ನು ಬೆರಕೆ ಮಾಡಿ ತಿನ್ನುತ್ತಿರುವುದು ಕಂಡುಬಂದಿದೆ. ಜೊತೆಗೆ ಅವರನ್ನು ಜಿರಳೆ ಎಂದು ಕರೆದುಕೊಂಡಿದ್ದಾರೆ. ಪ್ರಧಾನಿಯವರ ಇಷ್ಟದ ಹಣ್ಣಾದ ಮಾವಿನ ಹಣ್ಣನ್ನು ಜಿರಳೆಗಳು ಹೇಗೆ ತಿನ್ನುತ್ತವೆ ಎನ್ನುವುದರ ಮೂಲಕ ವ್ಯಂಗ್ಯಮಾಡಿದ್ದಾರೆ.
ಮಾವಿನ ಹಣ್ಣಿನ ರಸ ಕುಡಿಯುತ್ತಾ ಕಾಕ್ರೋಚ್ ಮಾವಿನ ಹಣ್ಣನ್ನು ತಿನ್ನುತ್ತಿದೆ..ಸೋ ಯಮ್ಮಿ ಎಂದು #CockroachJantaParty #justasking" ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರಕಾಶ್ ರಾಜ್ ಮೊದಲಿನಿಂದಲೂ 'ಕಾಕ್ರೋಚ್ ಜನತಾ ಪಾರ್ಟಿ'ಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಫಾಲೋ ಮಾಡುತ್ತಿದ್ದು, ಅದರ ಪೋಸ್ಟ್‌ಗಳನ್ನು ರೀ-ಶೇರ್ ಮಾಡುವ ಮೂಲಕ ಬೆಂಬಲಿಸುತ್ತಾ ಬಂದಿದ್ದಾರೆ.
ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರರಾದ ಅಬಿಜಿತ್ ದೀಪ್ಕೆ ಅವರೇ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ. ಸಿಜೆಐ ಸೂರ್ಯಕಾಂತ್ ಅವರು ಯುವ ಸಮೂಹ ಜಿರಳೆಗಳಿದ್ದಂತೆ ಎಂದು ಹೇಳಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸೃಷ್ಟಿಯಾಗಿ ಹವಾ ಸೃಷ್ಟಿಸಿತು. ಹೌದು ನಾವು ಸೋಮಾರಿಗಳು, ನಿರಂತರ ಆನ್ಲೈನ್ ಬಳಕೆ ಮಾಡುವವರು. ನಿರುದ್ಯೋಗಿಗಳು ಎಂದು ವೆಬ್ಸೈಟ್ ಆರಂಭಿಸಲಾಯಿತು.
ಸಿಜೆಐ ಕೊಟ್ಟ ಸ್ಪಷ್ಟನೆ ಏನು?
ನಾನು ಕೊಟ್ಟ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥಮಾಡಿಕೊಂಡು, ತಪ್ಪಾಗಿ ಬಿಂಬಿಸಿವೆ. ಯುವ ಸಮೂಹವನ್ನು ಟೀಕಿಸಿದ್ದೇನೆ ಎನ್ನುವುದು ಆಧಾರ ರಹಿತ. ನಾನು ಹೇಳಿದ್ದು ನಕಲಿ ಪದವಿ ಪಡೆದು, ವಕೀಲರಾಗಿ, ಮಾಧ್ಯಮ, ಸೋಶಿಯಲ್ ಮೀಡಿಯಾ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಇವರು ಪರಾವಲಂಬಿ ಜೀವಿಗಳು ಎಂದು ಟೀಕೆ ಮಾಡಿದೆ. ಭಾರತದ ಯುವ ಪೀಳಿಗೆಯ ಮೇಲೆ ನನಗೆ ಅಪಾರ ಗೌರವವಿದೆ ಎಂದು ಸ್ಪಷ್ಟನೆ ಕೊಟ್ಟರು, (ಏಜೆನ್ಸೀಸ್).