ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್
ನವದೆಹಲಿ: ಕಳೆದ ತಿಂಗಳು ನೀಟ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮವನ್ನು ವಿರೋಧಿಸಿ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಸುಮಾರು 26 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಕೊನೆಗೆ ಈ ಹೋರಾಟಕ್ಕೆ ಮಣಿದ ಸರ್ಕಾರ, ಮುಂದಿನ ದಿನಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಮಸೂದೆ ಮಂಡಿಸಿ, ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೂಡ ಪಡೆಯಲಾಗಿತ್ತು.
ಈಗ, ಈ ಜಂತರ್-ಮಂತರ್ ಹೋರಾಟದ ಬಗ್ಗೆ ಸೋನಮ್ ವಾಂಗ್ಚುಕ್ (Sonam Wangchuk) ಪಾಡ್ಕಾಸ್ಟ್ವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅದು ಈಗ ಎಲ್ಲಡೆ ವೈರಲ್ ಆಗುತ್ತಿದೆ.
ಜುಲೈ 20 ರಂದೇ ಹೋರಾಟ ಮುಗಿಯುತ್ತಿತ್ತು!
ಈ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ ಸೋನಮ್ ವಾಂಗ್ಚುಕ್, ಜುಲೈ 20 ರಂದು ಸಂಸತ್ ಚಲೋ ನಡೆಸಿದಾಗ, ದೆಹಲಿ ಪೊಲೀಸರು ಬಹಳ ಕಠಿಣ ಕ್ರಮವನ್ನು ಕೈಗೊಂಡಿದ್ದರು. ಪೊಲೀಸರ ಲಾಠಿ ಏಟು, ಅಶ್ರವಾಯು ಹಾಗೂ ಪೆಲೆಟ್ ಗನ್ನಿನ ಗುಂಡನ್ನು ತಿಂದಿದ್ದ ಪ್ರತಿಭಟನಾಕಾರರ ಮನೋಬಲ ಕುಸಿದು ಹೋಗಿತ್ತು.
ಹೋರಾಟ ಇಲ್ಲಿಗೆ ಸಾಕು, ನಾಳೆಯಿಂದ ಹೋರಾಟವನ್ನು ನಿಲ್ಲಿಸಿ ಬಿಡುವ ಎನ್ನುವ ಮಟ್ಟಿಗೆ ಅಲ್ಲಿದ್ದ ಜನರು ಬಂದು ಬಿಟ್ಟಿದ್ದರು. ಹಾಗೆಯೇ ನನಗೆ, ಈ ಹೋರಾಟ ಇಲ್ಲಿಗೆ ಮುಕ್ತಾಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನಗೆ ಮರಳುವಂತೆ ಹೇಳಬೇಕೆಂದು ಕಾಕ್ರೋಚ್ ಪಾರ್ಟಿ ಮುಖಂಡರು ತಿಳಿಸಿದ್ದರೆಂದು ವಾಂಗ್ಚುಕ್ ತಿಳಿಸಿದ್ದಾರೆ.
ನಾನು ಅವರಿಗೆ ಹುರಿದುಂಬಿಸಿದೆ!
ಪೊಲೀಸರ ಲಾಠಿ ಏಟಿನಿಂದ ಹಾಗೂ ಪೊಲೀಸರ ದಂಡಾತ್ಮಕ ಕ್ರಮದಿಂದ ಕಾಕ್ರೋಚ್ ಪಾರ್ಟಿ ನಾಯಕರು ತುಂಬಾ ದುಃಖಿತರಾಗಿದ್ದರು. ಹೋರಾಟವನ್ನು ನಾಳೆಯಿಂದ ಮುಂದುವರಿಸಲು ಸಾಧ್ಯವಿಲ್ಲವೆಂದು ನೊಂದುಕೊಂಡಿದ್ದರು.
ಆ ಸಂದರ್ಭದಲ್ಲಿ ನಾನು, ಅವರಿಗೆ ಧೈರ್ಯ ಹೇಳಿದೆ, ಸಾಧ್ಯವಾದಷ್ಟು ಹುರಿದುಂಬಿಸಿದೆ. ನಾಳೆ ಈ ಹೋರಾಟ ಖಂಡಿತ ಫಲ ಕೊಡುತ್ತದೆ, ಚಿಂತಿಸಬೇಡಿ ಎಂದೆ. ಕೊನೆಗೆ ಕಾಕ್ರೋಚ್ ಪಾರ್ಟಿ ಹೋರಾಟನ್ನು ಮುಂದುವರಿಸಿತು, ಹಾಗೂ ಈ ಹೋರಾಟ ಸಫಲವಾಯಿತೆಂದು ಅವರು ಹೇಳಿದ್ದಾರೆ, (ಏಜನ್ಸೀಸ್).