ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅಭಿಜೀತ್ ದೀಪ್ಕೆ 
ದೇಶ

ಕಾಕ್ರೋಚ್ ಜನತಾ ಪಾರ್ಟಿ ಸೈಟ್ ಬಂದ್; ಎಕ್ಸ್​ನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅಭಿಜಿತ್ ವಾಗ್ವಾದ | Cockroach Janata Party

ನವದೆಹಲಿ: ದೇಶದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸೋಷಿಯಲ್ ಮೀಡಿಯಾ ಕ್ಯಾಂಪೇನ್​ ಕಾಕ್ರೋಚ್ ಜನತಾ ಪಾರ್ಟಿಯ(Cockroach Janata Party) ವೆಬ್​ಸೈಟ್​ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದು, ಈ ಸಂಬಂಧ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ನಡುವೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ವಾಗ್ವಾದ ನಡೆದಿದೆ.
ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಮ್ ಪುಟವು ಪ್ರಾರಂಭವಾದ ಐದು ದಿನಗಳಲ್ಲೇ ಎರಡು ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ. ಈ ಫಾಲೋವರ್ಸ್​ ಗುರಿಯಾಗಿಸಿ ಕಿರಣ್ ರಿಜಿಜು ಪೋಸ್ಟ್ ಹಾಕಿದ್ದು, ಅದರಲ್ಲಿ ಬಹಳಷ್ಟು ಫಾಲೋವರ್ಸ್ ಪಾಕಿಸ್ತಾನ ಮತ್ತು ಜಾರ್ಜ್ ಸೊರೋಸ್ ಬೆಂಬಲಿಗರು ಎಂದು ಕರೆದಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ, ತಮ್ಮ ಪೇಜ್ ಫಾಲೋವರ್ಸ್​ಗಳನ್ನು ಪಾಕಿಸ್ತಾನಿಗಳು ಎಂದಿದ್ದನ್ನು ಖಂಡಿಸಿದ್ದಾರೆ. ಮತ್ತು ತಮ್ಮ ಖಾತೆ ಹ್ಯಾಕ್ ಮಾಡುವ ಮೊದಲು ಫಾಲೋವರ್ಸ್ ವಿವರಗಳನ್ನು ಸ್ಕ್ರೀನ್ ರೆಕಾರ್ಡ್ ಮೂಲಕ ಹಂಚಿಕೊಂಡಿದ್ದೆ ಎಂದು ಹೇಳಿದ್ದಾರೆ.
ಅಭಿಜೀತ್ ಅವರ ಪೇಜ್ ಅನುಯಾಯಿಗಳಲ್ಲಿ ಶೇಕಡಾ 94 ಕ್ಕೂ ಹೆಚ್ಚು ಜನರು ಭಾರತದವರು. ಭಾರತೀಯ ಯುವಕರನ್ನು ಪಾಕಿಸ್ತಾನಿಗಳು ಎಂದು ಯಾಕೆ ಬ್ರಾಂಡ್ ಮಾಡುತ್ತಿದ್ದೀರಿ? ಎಂದು ರಿಜಿಜು ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ರಿಟ್ವಿಟ್ ಮಾಡಿ ಪ್ರತಿಕ್ರಿಯಿಸಿರುವ ರಿಜಿಜು, ಪಾಕಿಸ್ತಾನ ಮತ್ತು ಜಾರ್ಜ್ ಸೊರೊಸ್ ಅವರ ವಲಯಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳನ್ನು ಪಡೆಯಲು ಬಯಸುವವರ ಬಗ್ಗೆ ವಿಷಾದವಿದೆ. ಭಾರತದಲ್ಲಿ ಸಾಕಷ್ಟು ಜನಸಂಖ್ಯೆ ಮತ್ತು ಸಕ್ರಿಯ ಯುವಕರಿದ್ದಾರೆ. ಅವರು ನಿಜವಾದ ಮತ್ತು ಅಮೂಲ್ಯವಾದ ಅನುಯಾಯಿಗಳಾಗಬಹುದು. ಮಾನ್ಯತೆಗಾಗಿ ರಾಷ್ಟ್ರವಿರೋಧಿ ಶಕ್ತಿಗಳನ್ನು ಆಶ್ರಯಿಸುವ ಅಗತ್ಯವಿಲ್ಲ ಎಂದಿದ್ದಾರೆ (ಏಜೆನ್ಸೀಸ್).