ಹೆಮ್ಮೆಯ ಜಿರಳೆ ಟೀ-ಶರ್ಟ್ ಈಗ ಟ್ರೆಂಡಿಂಗ್
- ದೇಶದಲ್ಲಿ ಹೆಚ್ಚಾದ ಕಾಕ್ರೋಚ್ ಕ್ರೇಜ್
- ಹೆಮ್ಮೆಯ ಜಿರಳೆ ಟೀ-ಶರ್ಟ್ ಈಗ ಟ್ರೆಂಡಿಂಗ್
- ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ
ವೈರಲ್: ದೇಶದಲ್ಲಿ ಒಂದು ವಾರದಿಂದ ಕಾಕ್ರೋಚ್ ಜನತಾ ಪಾರ್ಟಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾರತದ ಮುಖ್ಯನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ದಿನದಿಂದ ಈ ಸೋಷಿಯಲ್ ಮೀಡಿಯಾ ಕ್ರಾಂತಿ ಜೋರಾಗಿದೆ.
ಈ ಕಾಕ್ರೋಚ್ ಪಕ್ಷಕ್ಕೆ ಝೇನ್ಜೀ ಯುವಕ/ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿದ್ದು, ಈಗ ಈ ಪಕ್ಷಕ್ಕೆ ಬೆಂಬಲ ಸೂಚಿಸುವ ಟೀ-ಶರ್ಟ್ಗಳು ಮಾರಿಕಟ್ಟೆಗೆ ಲಗ್ಗೆ ಇಟ್ಟಿವೆ. ಈಗ ಈ ಟೀ-ಶರ್ಟ್ ತಯಾರಿಕೆ ಹಾಗೂ ಪ್ಯಾಕಿಂಗ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Proud Cockroach Tshirt) ಆಗುತ್ತಿವೆ.
ವಿಡಿಯೋನಲ್ಲಿ ಏನಿದೆ?
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಪ್ರಿಂಟಡ್ ಟೀ-ಶರ್ಟ್ ತಯಾರಿಕಾ ಘಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಕ್ರೋಚ್ ಪಾರ್ಟಿಗೆ ಸಪೋರ್ಟ್ ನೀಡುವ ಟೀ-ಶರ್ಟ್ಗಳನ್ನು ತಯಾರಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.
ಪ್ರಿಂಟ್ ಮಾಡಲಾಗುತ್ತಿರುವ ಟೀ-ಶರ್ಟ್ಗಳ ಮೇಲೆ, ನಾನು ಕಾಕ್ರೋಚ್ ಪಾರ್ಟಿಯನ್ನು ಬೆಂಬಲಿಸುತ್ತೇನೆ, ಎದ್ದೇಳು ಝೇನ್ಜೀ, ಹೆಮ್ಮೆಯ ಕಾಕ್ರೋಚ್ ಎಂಬ ಬರಹಗಳನ್ನು ನೋಡಬಹುದಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ಟೀ-ಶರ್ಟ್ ಪ್ರಿಂಟಿಂಗ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ. ಈ ಕಾಕ್ರೋಚ್ಗಳನ್ನು ಚಪ್ಪಲಿಯಿಂದ ಹೊಡೆದು ಕೊಲ್ಲಬೇಕು ಎಂದು ಒಬ್ಬರು ಕಮೆಂಟ್ ಮಾಡಿದರೆ, ಈ ರೋಗ ಹರಡುವ ಜೀವಿಯನ್ನು ಜಾಸ್ತಿದಿನ ಬದುಕಲು ಬಿಡಬಾರದು ಎಂದು ಇನ್ನೊಬ್ಬರು ಹೇಳಿದ್ದಾರೆ. ಅಂತೂ ನಮ್ಮ ದೇಶದಲ್ಲಿ ಸರ್ಕಾರವನ್ನು ಪ್ರಶ್ನಿಸಿಲು ಜಿರಳೆ ಜನ್ಮ ಎತ್ತಿ ಬರಬೇಕಾಯಿತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
BJP ಯನ್ನು ಹಿಂದಿಕ್ಕಿದ CJP
ಸೋಷಿಯಲ್ ಮೀಡಿಯಾನಲ್ಲಿ ಈ ಕಾಕ್ರೋಚ್ ಜನತಾ ಪಾರ್ಟಿಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಪಕ್ಷ ಪ್ರಾರಂಭವಾದ ಐದೇ ದಿನಗಳಲ್ಲಿ ಇದು ಸುಮಾರು 1.50 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ 87 ಲಕ್ಷ ಹಿಂಬಾಲಕರನ್ನು ಹೊಂದಿರುವ ಬಿಜೆಪಿಯನ್ನು ಹಾಗೂ 1.33 ಕೋಟಿ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಾರ್ಟಿಯನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಕುಳಿತು ಕೊಂಡಿದೆ.
ಏನು ಈ ಕಾಕ್ರೋಚ್ ಜನತಾ ಪಾರ್ಟಿ?
ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜ. ಸೂರ್ಯಾಕಾಂತ್ ಅವರು ಭಾರತದ ನಿರುದ್ಯೋಗಿ ಯುವಕರನ್ನು ಜಿರಲೆ(ಕಾಕ್ರೋಚ್) ಗಳಿಗೆ ಹೋಲಿಕೆ ಮಾಡಿದ ನಂತರ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ, ಅಭಿಜಿತ್ ದಿಪ್ಕೆ ಈ ಕಾಕ್ರೋಚ್ ಜನತಾ ಪಾರ್ಟಿಯನ್ನು ಸೋಷಿಯಲ್ ಮೀಡಿಯಾನಲ್ಲಿ ಸ್ಥಾಪಿಸಿದರು. ಈ ಜಿರಲೆ ಪಕ್ಷವು ತನ್ನನ್ನು ತಾನು, ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷವೆಂದು ಹೇಳಿಕೊಂಡಿದೆ, (ಏಜನ್ಸೀಸ್).