ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ: ಸಿಜೆಐ ಸೂರ್ಯಕಾಂತ್
- ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜಿರಳೆ ವಿವಾದ
- ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ: ಸಿಜೆಐ ಸೂರ್ಯಕಾಂತ್
- ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ ಎಂಬ ಆನ್ಲೈನ್ ಅಭಿಯಾನ ಪ್ರಾರಂಭವಾದ ಹಿನ್ನಲೆ ಈ ಪಕ್ಷದ ಮೇಲೆ ಸಿಬಿಐ ತನಿಖೆ ಆಗ್ರಹಿಸಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಸೋಮವಾರ (ಮೇ.25) ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನಾಯಮೂರ್ತಿ ಜ. ಸೂರ್ಯಕಾಂತ್ (CJI SuryaKant on Cockroach Janata Party) ಅವರ ನ್ಯಾಯಪೀಠ, ಈ ಅಭಿಯಾನವನ್ನು ಅಷ್ಟು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದೆ.
ವಿಚಾರಣೆ ಸಂದರ್ಭದಲ್ಲಿ ವಕೀಲ ಎನ್.ಕೆ. ಗೋಸ್ವಾಮಿ, ಈ ಕಾಕ್ರೋಚ್ ಜನತಾ ಪಕ್ಷವು ನ್ಯಾಯಾಂಗದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ ಎಂದು ಹೇಳಿದಾಗ ಮುಖ್ಯನಾಯಮೂರ್ತಿ ಜ. ಸೂರ್ಯಕಾಂತ್, ಜಾಯ್ಮಲ್ಯ ಬಾಗ್ಚಿ ಮತ್ತು ವಿ.ಎಂ ಪಾಂಚೋಲಿ ಅವರ ನ್ಯಾಯಪೀಠ ಈ ವಿಷಯವನ್ನು ಭಾವನಾತ್ಮಕವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಕೆಲ ದಿನಗಳ ಹಿಂದೆ ರಾಜಾ ಚೌಧರಿ ಎನ್ನುವವರು ನ್ಯಾಯಾಂಗದಲ್ಲಿ ನಕಲಿ ಪದವಿ ಪಡೆದ ವಕೀಲರ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ಕುರಿತು ಕ್ರಮ ಕೈಗೊಳ್ಳಬೇಕೆಂದು ಪಿಐಎಲ್ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ ಅವರ ನ್ಯಾಯಪೀಠ, ನಕಲಿ ಪದವಿ ಪಡೆದ ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ, ಇವರು ತಮ್ಮನ್ನು ತಾವೇ ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್ಗಳೆಂದು, ಆರ್ಟಿಐ ಕಾರ್ಯಕರ್ತರೆಂದು ಭಾವಿಸಿದ್ದಾರೆ ಎಂದು ಹೇಳಿದ್ದರು.
ನಂತರ ಈ ಮಾತು ಬೇರೆ-ಬೇರೆ ರೂಪ ಪಡೆದು ಸಿಜೆಐ ಅವರು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ್ದಾರೆ ಎನ್ನುವ ರೀತಿ ಬಿಂಬಿತವಾಗಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಸೋಷಿಯಲ್ ಮೀಡಿಯಾ ಅಭಿಯಾನ ಪ್ರಾರಂಭವಾಗಿದೆ.
ಸದ್ಯ ಈ ಕಾಕ್ರೋಚ್ ಜನತಾ ಪಾರ್ಟಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 2 ಕೋಟಿ ಜನ ಫಾಲೋವರ್ಸ್ಗಳಿದ್ದಾರೆ. ಇದರ ಸಂಖ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿರುವ ಸೋಷಿಯಲ್ ಮೀಡಿಯಾ ಫಾಲೋವರ್ಸಗಳನ್ನು ಮೀರಿಸಿದೆ, (ಏಜನ್ಸೀಸ್).