ಆರೋಪಿ ಕೋಚ್ ಅಭಿಜಿತ್ ಮೆಂಡಲ್
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಫುಟ್ಬಾಲ್ ಕೋಚ್(football Coach) ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಶನಿವಾರ(ಜೂ. 13) ವರದಿಯಾಗಿದೆ.
ಆರೋಪಿ 36 ವರ್ಷದ ಅಭಿಜಿತ್ ಮೆಂಡಲ್ ಬಂಧಿತನಾದ ಫುಟ್ಬಾಲ್ ಕೋಚ್. 17 ವರ್ಷದ ಫುಟ್ಬಾಲ್ ಆಟಗಾರ್ತಿ ನೀಡಿದ ದೂರಿನನ್ವಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ಪೊಲೀಸರ ಪ್ರಕಾರ, 2023ರಲ್ಲಿ ವಸಾಯಿಯಲ್ಲಿರುವ ತನ್ನ ಫುಟ್ಬಾಲ್ ತರಬೇತಿ ಅಕಾಡೆಮಿಗೆ ಸೇರಿದ್ದ 17 ವರ್ಷದ ಬಾಲಕಿಯ ಮೇಲೆ ಮೆಂಡಲ್ ಪದೇ-ಪದೇ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಹುಡುಗಿಯ ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡಿದ್ದಲ್ಲದೆ, ಅವುಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ಆರೋಪಿಸಿಲಾಗಿದೆ.
ಇನ್ನೂ ವಿದ್ಯಾರ್ಥಿನಿ ನೀಡಿರುವ ದೂರಿನ ಪ್ರಕಾರ, ಆರೋಪಿ ಕೋಚ್ ತನ್ನ ವಿಶ್ವಾಸ ಗಳಿಸಿದ ಬಳಿಕ ಫುಟ್‌ಬಾಲ್‌ನಲ್ಲಿ ದೊಡ್ಡ ಅವಕಾಶಗಳ ಭರವಸೆಯ ಆಮಿಷವೊಡ್ಡಿ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.
ಇತ್ತೀಚೆಗೆ ಆ ಶೋಷಣೆಯಿಂದ ಬೇಸತ್ತು ಆತನ ಸಂಪರ್ಕದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೆ, ಆದರೆ ಆರೋಪಿ ತನ್ನ ಬಳಿ ಇದ್ದ ವೀಡಿಯೊಗಳು ಮತ್ತು ಫೋಟೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದನು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇನ್ನೂ ಘಟನೆಯ ಬಗ್ಗೆ ನಿರಂತರ ಮಾನಸಿಕ ಕಿರುಕುಳದಿಂದ ನೊಂದ ಬಾಲಕಿ ಕೊನೆಗೂ ತನ್ನ ಮನೆಯವರಿಗೆ ತಿಳಿಸಿದ್ದು, ಬಳಿಕ ಕುಟುಂಬವು ಪೊಲೀಸರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ದೂರಿನ ಆಧಾರದ ಮೇಲೆ, ವಸಾಯಿಯ ಮಾಣಿಕ್‌ಪುರ ಪೊಲೀಸರು ಪ್ರಾಥಮಿಕ ವಿಚಾರಣೆಯ ನಂತರ ಮೆಂಡಾಲ್‌ನನ್ನು ಬಂಧಿಸಿದ್ದಾರೆ (ಏಜೆನ್ಸೀಸ್).