Yogi Adityanath (ಚಿತ್ರ X)
ಲಕ್ನೋ: ಉತ್ತರ ಪ್ರದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಸಂಭವಿಸಿದ ಭೀಕರ ಮಳೆ, ಧೂಳಿನ ಬಿರುಗಾಳಿ (Yogi Adityanath) ಮತ್ತು ಸಿಡಿಲು ಬಡಿತಕ್ಕೆ ಕನಿಷ್ಠ 70 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ, ಪ್ರಯಾಗ್‌ರಾಜ್, ಫತೇಪುರ್, ಭದೋಹಿ ಮತ್ತು ಕಾನ್ಪುರ್ ದೇಹತ್ ಜಿಲ್ಲೆಗಳು ಈ ನೈಸರ್ಗಿಕ ವಿಕೋಪಕ್ಕೆ ಅತಿ ಹೆಚ್ಚು ತುತ್ತಾಗಿವೆ ಎಂದು ವರದಿಯಾಗಿದೆ.
ಸಂತಾಪ ಸೂಚಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವುದರಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ, ಮಾನವ ಜೀವಿ, ಜಾನುವಾರುಗಳ ಸಾವು ಮತ್ತು ಬೆಳೆ ಹಾನಿಯ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆದುಕೊಂಡು ಮುಂದಿನ 24 ಗಂಟೆಗಳ ಒಳಗಾಗಿ ಸಂತ್ರಸ್ತರಿಗೆ ಪರಿಹಾರ ಹಣ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದಾಗ್ಯೂ, ಹಿರಿಯ ಜಿಲ್ಲಾ ಅಧಿಕಾರಿಗಳು ಸಂತ್ರಸ್ತ ಕುಟುಂಬಗಳೊಂದಿಗೆ ನೇರವಾಗಿ ಸಂವಹನ ನಡೆಸಬೇಕು. ಯಾವುದೇ ಸಂದರ್ಭದಲ್ಲೂ ಅವರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಈ ಹಂತದಲ್ಲಿ ದೋಷವೇನಾದರೂ ಕಂಡುಬಂದಲ್ಲಿ ಇದನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ, ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ, ರಾಜ್ಯದ ಪರಿಹಾರ ಆಯುಕ್ತರ ಕಚೇರಿಯು ಹಗಲಿರುಳು ಕಾರ್ಯಾಚರಣೆಗೆ ಇಳಿದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದು, ಪರಿಹಾರ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಉರುಳಿಬಿದ್ದ ಮರಗಳು, ಮನೆಗಳಿಗೆ ಹಾನಿ
ಈ ದುರಂತದ ಕುರಿತು ಮಾತನಾಡಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ , ಹಲವಾರು ಪ್ರದೇಶಗಳಿಂದ ಮರಗಳು, ವಿದ್ಯುತ್ ಕಂಬಗಳು ಮತ್ತು ಮನೆಗಳು ಹಾನಿಗೊಳಗಾಗಿವೆ ಎಂದು ವರದರಿಗಳು ಬರುತ್ತಿದೆ. ಆದಾಗ್ಯೂ, ಚಂಡಮಾರುತದಿಂದ ಮೊಬೈಲ್ ನೆಟ್ವರ್ಕ್ಗಳು ಅಡ್ಡಿಪಡಿಸಿದ್ದರಿಂದ ಪುನಃಸ್ಥಾಪನೆ ಮತ್ತು ಕಾರ್ಯಾಚರಣೆಗಳು ತೊಂದರೆಗಳನ್ನು ಎದುರಿಸಿದವು ಎಂದು ಹೇಳಿದರು.
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಉಪವಿಭಾಗೀಯ ನ್ಯಾಯಾಧೀಶರು, ತಹಶೀಲ್ದಾರ್‌ಗಳು, ಇತರ ಜಿಲ್ಲಾ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದು ಮೌರ್ಯ ತಿಳಿಸಿದರು (ಏಜೆನ್ಸೀಸ್).