ಸಿಎಂ ವಿಜಯ್​ ಅಣ್ಣ... ಮೊದಲ ಅಧಿಕೃತ ಭ್ರಷ್ಟಾಚಾರ ಮಾಡಿದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! CM Vijay  
ದೇಶ

ಸಿಎಂ ವಿಜಯ್​ ಅಣ್ಣ... ಮೊದಲ ಅಧಿಕೃತ ಭ್ರಷ್ಟಾಚಾರ ಮಾಡಿದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! CM Vijay

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷಿ ರಾಧನ್ ಪಂಡಿತ್ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಿ ವಿವಾದಕ್ಕೀಡಾದ ವಿಜಯ್ ಸರ್ಕಾರ
  • ಜನರ ತೆರಿಗೆ ಹಣವನ್ನು ಜ್ಯೋತಿಷಿಗಳ ಸಂಬಳಕ್ಕೆ ಬಳಸುವುದು 'ಅಧಿಕೃತ ಹಗರಣ' ಎಂದು ನಟಿ ಜೂಲಿ ಟೀಕೆ
  • ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೇಮಕಾತಿ ಆದೇಶ ರದ್ದು
  • ರಿಯಾರ್ ವಿಚಾರವಾದದ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಮೂಢನಂಬಿಕೆ ತರುವುದಕ್ಕೆ ಜೂಲಿ ವಿರೋಧ
CM Vijay : ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಹೆಸರು ಮತ್ತು ಮುಹೂರ್ತದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರನ್ನು ಮುಖ್ಯಮಂತ್ರಿಯ ವಿಶೇಷಾಧಿಕಾರಿಯಾಗಿ ನೇಮಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ಆ ಆದೇಶವನ್ನು ಹಿಂಪಡೆದಿದೆ. ಈ ಬೆಳವಣಿಗೆಯನ್ನು ಬಿಗ್ ಬಾಸ್ ಖ್ಯಾತಿಯ ನಟಿ ಜೂಲಿ ತೀವ್ರವಾಗಿ ಟೀಕಿಸಿದ್ದು, ಸರ್ಕಾರದ ಈ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಟಿ ಜೂಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಮೊದಲ 'ಹಗರಣ' ಇದೆಂದು ಲೇವಡಿ ಮಾಡಿದ್ದಾರೆ.
"ಅಣ್ಣಾ.. ಸೂಪರ್, ನಿಮ್ಮ ಮೊದಲ ಅಧಿಕೃತ ಹಗರಣವನ್ನು ಮಾಡಿದ್ದೀರಿ, ಅಭಿನಂದನೆಗಳು" ಎಂದು ವ್ಯಂಗ್ಯವಾಡಿರುವ ಜೂಲಿ, ತಾವು ಪೆರಿಯಾರ್ ವಿಚಾರಧಾರೆಗಳನ್ನು ನಂಬುವವರು ಮತ್ತು ಸನಾತನ ಧರ್ಮವನ್ನು ವಿರೋಧಿಸುವವರು ಎಂದು ಹೇಳಿಕೊಂಡಿದ್ದಾರೆ. ವಿಜಯ್ ಅವರ ವೈಯಕ್ತಿಕ ನಂಬಿಕೆಗಳನ್ನು ಗೌರವಿಸುವುದಾಗಿ ತಿಳಿಸಿರುವ ಜೂಲಿ, ದೇವರನ್ನು ನಂಬುವುದು ಅಥವಾ ಪ್ರಾರ್ಥಿಸುವುದು ತಪ್ಪೆಂದು ತಾವು ಎಲ್ಲಿಯೂ ಹೇಳಿಲ್ಲ, ಆದರೆ ದೇವರನ್ನು ಮುನ್ನೆಲೆಗೆ ತಂದು ಮಾಡುವ ಇಂತಹ ರಾಜಕೀಯ ನಿರ್ಧಾರಗಳನ್ನು ಬಲವಾಗಿ ವಿರೋಧಿಸುವುದಾಗಿ ಕಿಡಿಕಾರಿದ್ದಾರೆ.
ನಟಿ ಜೂಲಿ ತಮ್ಮ ವಿಡಿಯೋದಲ್ಲಿ ವಿಜಯ್ ಅವರನ್ನು ಪ್ರಶ್ನಿಸುತ್ತಾ, "ಜ್ಯೋತಿಷಿಯೊಬ್ಬರಿಗೆ ಪ್ರಮುಖ ಅಧಿಕೃತ ಹುದ್ದೆಯನ್ನು ನೀಡುವ ಮೂಲಕ ನೀವು ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದೀರಿ, ಅದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ಅಣ್ಣಾ, ಅವರಿಗೆ ನೀಡುವ ಸಂಬಳ ಎಲ್ಲಿಂದ ಬರುತ್ತದೆ? ಅದು ನಮ್ಮಂತಹ ಸಾಮಾನ್ಯ ಜನರ ತೆರಿಗೆ ಹಣವಲ್ಲವೇ? ಎಂದು ನೇರವಾಗಿ ಕಿಡಿಕಾರಿದ್ದಾರೆ.
ಈ ವಿಡಿಯೋದೊಂದಿಗೆ, ವಿಜಯ್ ಅವರು ಈ ಹಿಂದೆ ಚುನಾವಣಾ ರ‍್ಯಾಲಿಗಳಲ್ಲಿ 'ಜನರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ' ಎಂದು ಭಾಷಣ ಮಾಡಿದ್ದ ಹಳೆಯ ವಿಡಿಯೋವನ್ನು ಜೂಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಅವರ ಪರ ಮತ್ತು ವಿರೋಧವಾಗಿ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
2024ರಲ್ಲೇ ವಿಜಯ್ ತಮಿಳುನಾಡಿನ ಅಧಿಕಾರ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ರಾಧನ್ ಪಂಡಿತ್ ಅವರ ಸಲಹೆಯಂತೆ, ವಿಜಯ್ ಅವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭದಿನವಾದ ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತ ನಂತರ, ಆರಂಭದಲ್ಲಿ ಮೇ 10ರಂದು ಮಧ್ಯಾಹ್ನ 3:45ಕ್ಕೆ ಪ್ರಮಾಣ ವಚನ ಸ್ವೀಕರಿಸಲು ವಿಜಯ್ ನಿರ್ಧರಿಸಿದ್ದರು ಆದರೆ, ನಂತರ ರಾಧನ್ ಪಂಡಿತ್ ಅವರ ಸೂಚನೆಯ ಮೇರೆಗೆ ಶುಭ ಮುಹೂರ್ತಕ್ಕಾಗಿ ಸಮಯವನ್ನು ಬದಲಾಯಿಸಿ ಅಂದು ಬೆಳಿಗ್ಗೆ 10 ಗಂಟೆಗೆ ಪದಗ್ರಹಣ ಮಾಡಿದರು, (ಏಜೆನ್ಸೀಸ್​).