ಮುಸ್ಲಿಂ ವೈದ್ಯೆಯ ಹಿಜಾಬ್ ತೆಗೆಯುತ್ತಿರುವ ಸಿಎಂ ನಿತೀಶ್ ಕುಮಾರ್ 
ದೇಶ

ನೇಮಕಾತಿ ಪತ್ರ ವಿತರಿಸುವಾಗ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್; ನೀಚಕೃತ್ಯ ಎಂದು ವಿಪಕ್ಷಗಳು ಕಿಡಿ | CM Nitish Kumar

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್(CM Nitish Kumar) ಅವರು ಸೋಮವಾರ(ಡಿ. 15) ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನೇಮಕಾತಿ ಪತ್ರಗಳನ್ನು ವಿತರಸುವ ವೇಳೆ ಮುಸ್ಲಿಂ ವೈದ್ಯೆಯೊಬ್ಬರು ಹಿಜಾಬ್​ ಅನ್ನು ಎಳೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಇದನ್ನು ನೀಚ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಪಾಟ್ನಾದ ಸಿಎಂ ನಿವಾಸದಲ್ಲಿ ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವಾಗ ಘಟನೆ ನಡೆದಿದೆ. ವೈದ್ಯೆ ನುಸ್ರತ್ ಪರ್ವೀನ್ ಅವರು ಪತ್ರ ಸ್ವೀಕರಿಲು ವೇದಿಕೆ ಬಳಿ ಬಂದು ಸ್ವೀಕರಿಸಿದಾಗ, ಸಿಎಂ ಅವರ ಹಿಜಾಬ್ ಬಗ್ಗೆ ಇದೇನಿದು ಎಂದು, ಸ್ವತಃ ತಾವೇ ಅದನ್ನು ಎಳೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇದೊಂದು ನೀಚ ಕೃತ್ಯ ಎಂದು ಆರ್​ಜೆಡಿ, ಕಾಂಗ್ರೆಸ್ ಟೀಕೆ

ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆರ್​ಜೆಡಿ, ನಿತೀಶ್ ಜಿ ಅವರಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆಯೇ ಅಥವಾ ಈಗ 100% ಸಂಘಿಯಾಗಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪಕ್ಷವೂ ಸಹ ಇದೊಂದು ನೀಚಕೃತ್ಯ ಎಂದು ಕರೆದಿದ್ದು, ಈ ನಾಚಿಕೆಯಿಲ್ಲದ ಕೃತ್ಯ ನೋಡಿ. ಮಹಿಳಾ ವೈದ್ಯೆಯೊಬ್ಬರು ತಮ್ಮ ನೇಮಕಾತಿ ಪತ್ರವನ್ನು ಸ್ವೀಕರಿಸಲು ಬಂದಾಗ, ನಿತೀಶ್ ಕುಮಾರ್ ತಮ್ಮ ಹಿಜಾಬ್ ಅನ್ನು ಬಿಚ್ಚಿದರು. ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಷ್ಟೊಂದು ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು. ಈ ಖಂಡನೀಯ ಕೃತ್ಯಕ್ಕಾಗಿ ನಿತೀಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು. ಈ ರೀತಿಯ ದುಷ್ಕೃತ್ಯ ಕ್ಷಮಿಸಲಾಗದು ಎಂದು ಕಿಡಿಕಾರಿದೆ (ಏಜೆನ್ಸೀಸ್).