ದೇಶ

ಪೆಟ್ರೋಲ್ ಸುರಿದುಕೊಂಡು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ; ಬ್ಯಾಗ್​ನಲ್ಲಿ 3 ಪುಟ ಬರೆದ ಡೆತ್​ ನೋಟ್ ಪತ್ತೆ..Delhi

  • ಪೆಟ್ರೋಲ್​​ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ದ್ವಿತೀಯ ಪಿಯುಸಿ ಸ್ಟೂಡೆಂಟ್​.

  • ಕೃಷ್ಣ ನಗರದಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ.

  • ಬ್ಯಾಗ್​ನಲ್ಲಿ ಸುದೀರ್ಘವಾಗಿ ಬರೆಯಲಾದ ಮೂರು ಪುಟದ ಡೆತ್​ನೋಟ್ ಪತ್ತೆ.

ನವ ದೆಹಲಿ; ಇಲ್ಲಿನ ಶಹದಾರಾ ಜಿಲ್ಲೆಯ ಕೃಷ್ಣ ನಗರದಲ್ಲಿನ ಕಾಲೇಜೊಂದರಲ್ಲಿ, ವಿದ್ಯಾರ್ಥಿನಿಯೊಬ್ಬರು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ (ಅ,24) ಬೆಳಕಿಗೆ ಬಂದಿದೆ. ಆಕೆಯ ಬ್ಯಾಗ್​ನಲ್ಲಿ ಪತ್ತೆಯಾದ ಮೂರು ಪುಟದ ಡೆತ್​ ನೋಟ್​ ಅನ್ನು ಕೃಷ್ಣ ನಗರ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಓದುತ್ತಿದ್ದ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಂದು ಆಕೆಯನ್ನು ಗುರತಿಸಲಾಗಿದೆ. ಆಕೆಯ ಬ್ಯಾಗ್​ನಲ್ಲಿದ್ದ ಡೆತ್​ನೋಟ್​ ಮತ್ತು ಕೆಲವು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿದೆ ಎಂದು ಕೃಷ್ಣ ನಗರ ಪೊಲಿಸರು ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದೇನು?

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪಿಸಿಆರ್ ಮೂಲಕ ಪೊಲೀಸರಿಗೆ ಕರೆ ಬಂದಿತ್ತು. ಅದರ ಮೂಲಕ ಕೃಷ್ಣ ನಗರ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿದ್ಯಾರ್ಥಿನಿ ದೇಹವು ಸುಟ್ಟ ಸ್ಥಿತಿಯಲ್ಲಿ ಕಾಲೇಜಿನ ಸೆಕ್ಯುರಿಟಿ ಗಾರ್ಡ್​​​ ಕೊಠಡಿ ಹಿಂದೆ ಪತ್ತೆಯಾಗಿದೆ. ಆಕೆಯ ಸಾವಿಗೆ ಕಾರಣವೇನು ಎನ್ನುವುದಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದರು,

ಮುಂದುವರೆದು, 17 ವರ್ಷದ ವಿದ್ಯಾರ್ಥಿನಿ ಬ್ಯಾಗ್​ನಲ್ಲಿ ಮೂರು ಪುಟಗಳ ಡೆತ್​ನೋಟ್​​ ಪತ್ತೆಯಾಗಿದೆ. ಆಕೆಯ ಬ್ಯಾಗ್​ನಲ್ಲಿ ರಾಸಾಯನಿಕ ವಸ್ತುವಿನ ಬಾಟಲಿ ಸಹ ಇತ್ತು. ಜೊತೆಗೆ ಆಕೆಯೇ ಪೆಟ್ರೋಲ್ನ್ನು ಕಾಲೇಜಿಗೆ ತಂದಿರಬಹುದು. ಯುವತಿಗೆ ಸಂಬಂಧಿಸಿದ ಎಲ್ಲ ವಸ್ತುವನ್ನು ನಾವು ವಶಕ್ಕೆ ಪಡಿಸಿಕೊಂಡಿದ್ದೇವೆ. ವಿಚಾರಣೆಯ ನಂತರ ಆಕೆಯ ಸಾವಿಗೆ ಕಾರಣವೇನು ಎನ್ನುವುದು ಪತ್ತೆಯಾಗಲಿದೆ ಎಂದು ಹೇಳಿದರು.

ಸಹೋದರಿ ಹೇಳಿದ್ದೇನು?

ಆಕೆಗೆ ಏನಾಗಿತ್ತು ಅನ್ನೋದೆ ತಿಳಿದಿಲ್ಲ. ಮಧ್ಯಾಹ್ನ 1:40ರ ಸುಮಾರಿಗೆ ನಮಗೆ ಶಾಲಾ ಆಡಳಿತ ಮಂಡಳಿ ಕರೆ ಮಾಡಿ ವಿಚಾರವನ್ನು ತಿಳಿಸಿತು ಎಂದು ಮೃತ ವಿದ್ಯಾರ್ಥಿನಿಯ ಸಹೋದರಿ ತಿಳಿಸಿದ್ದಾರೆ, (ಏಜೆನ್ಸೀಸ್).