ಸಿಜೆಪಿ ಮತ್ತೆರೆಡು ಡಿಮಾಂಡ್
- ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ
- ಪ್ರಧಾನ್ ರಾಜೀನಾಮೆ ಕೊಟ್ಟರೂ 2 ಡಿಮಾಂಡ್ ಮುಂದಿಟ್ಟ ಸಿಜೆಪಿ
- ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮುಂದಿಟ್ಟ ಬೇಡಿಕೆಗಳು ಇಂತಿವೆ
ನವದೆಹಲಿ: ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಹೇಳಿ ಹೋರಾಟವನ್ನು ಮುಂದುವರಿಸಿದ್ದ ಸಿಜೆಪಿ ಮತ್ತು ವಿದ್ಯಾರ್ಥಿಗಳ ಒತ್ತಡಕ್ಕೆ ಕಡೆಗೂ ಮಣಿದ ಕೇಂದ್ರ ಸರ್ಕಾರ, ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್ರನ್ನು ಕೆಳಗಿಳಿಸಿದೆ. ಈ ಖುಷಿಯನ್ನು ಸಂಭ್ರಮಿಸಿದ ಸಿಜೆಪಿ, ಇಲ್ಲಿಗೆ ತಮ್ಮ ಹೋರಾಟ ಮುಗಿದಿಲ್ಲ. ಇನ್ನೆರೆಡು ಬೇಡಿಕೆಗಳು ಇನ್ನೂ ಬಾಕಿ ಉಳಿದಿವೆ ಎಂದಿದೆ.
ಪ್ರಧಾನ್ ರಾಜೀನಾಮೆ ಬಳಿಕ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ನಮಗೆ ಇನ್ನೂ ಎರಡು ಬೇಡಿಕೆಗಳಿವೆ. ಅದನ್ನು ಸರ್ಕಾರ ಈಡೇರಿಸಲೇಬೇಕು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಸಿಗಬೇಕಲ್ಲವೇ? ಇದು ನಮ್ಮ ಒಂದು ಬೇಡಿಕೆ ಎಂದರು.
ಎಲ್ಲಾ ಕುಟುಂಬಗಳು 1 ಕೋಟಿ ರೂಪಾಯಿ ಪರಿಹಾರಕ್ಕೆ ಅರ್ಹರು. ಎರಡನೆಯ ಬೇಡಿಕೆ, ಜೂನ್ 20ರಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಮತ್ತು ನಮ್ಮ ಮೇಲೆ ಗೂಂಡಾಗಳಂತೆ ವರ್ತಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ದೀಪ್ಕೆ ಪಟ್ಟು ಹಿಡಿದಿದ್ದಾರೆ.