MS Dhoni  
ದೇಶ

ಫಿಟ್ನೆಸ್ ಐಕಾನ್ ಧೋನಿ ಕಾರಲ್ಲಿ ಸಿಗರೇಟ್ ಪ್ಯಾಕೆಟ್! ವೈರಲ್ ವಿಡಿಯೋ ಬೆನ್ನಲ್ಲೇ ಶುರುವಾಯ್ತು ನೆಟ್ಟಿಗರ ಚರ್ಚೆ..MS Dhoni

ಪ್ರಮುಖ ಮುಖ್ಯಾಂಶಗಳು

  • ಧೋನಿ ಧೂಮಪಾನ ಮಾಡುತ್ತಾರಾ?
  • ಸಲ್ಮಾನ್ ಪಾರ್ಟಿಯಲ್ಲಿ ಧೋನಿ ಕಾರಿನೊಳಗೆ ಸಿಗರೇಟ್ ಪ್ಯಾಕೆಟ್
ಮುಂಬೈ: (MS Dhoni) ಸಲ್ಮಾನ್ ಖಾನ್ ಅವರ 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಎಂ.ಎಸ್. ಧೋನಿ ಅವರ ಕಾರಿನಲ್ಲಿ ಸಿಗರೇಟ್ ಪ್ಯಾಕೆಟ್ ಕಂಡುಬಂದಿದೆ ಎನ್ನಲಾದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
2025 ಡಿಸೆಂಬರ್ 27ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಗೆ ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಆಗಮಿಸಿದ್ದರು. ಧೋನಿ ಕಾರಿನಿಂದ ಇಳಿಯುವ ಸಂದರ್ಭದಲ್ಲಿ ಪಾಪರಾಜಿಗಳು (ಛಾಯಾಗ್ರಾಹಕರು) ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವೇಳೆ ಕ್ಯಾಮೆರಾ ಜೂಮ್ ಮಾಡಿದಾಗ, ಕಾರಿನ ಹಿಂಭಾಗದ ಸೀಟಿನ ಮೇಲೆ ಸಿಗರೇಟ್ ಪ್ಯಾಕೆಟ್ ಇರುವುದು ಕಂಡುಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, "ಫಿಟ್ನೆಸ್ ಐಕಾನ್" ಆಗಿರುವ ಧೋನಿ ಅವರಿಗೆ ಧೂಮಪಾನದ ಅಭ್ಯಾಸವಿದೆಯೇ? ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದಾರೆ.ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ವಿಡಿಯೋದಲ್ಲಿ ಧೋನಿ ಅವರು ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು. ಸಿಗರೇಟ್ ಪ್ಯಾಕೆಟ್ ಕಂಡುಬಂದಿದ್ದು ಹಿಂಭಾಗದ ಸೀಟಿನಲ್ಲಿ. ಕಾರಿನ ಹಿಂಭಾಗದ ಸೀಟಿನಲ್ಲಿ ಸಾಕ್ಷಿ ಧೋನಿ ಮತ್ತು ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಹಾಗಾಗಿ ಆ ಪ್ಯಾಕೆಟ್ ಧೋನಿ ಅವರಿಗೇ ಸೇರಿದ್ದು ಎಂದು ಹೇಳಲು ಯಾವುದೇ ಖಚಿತ ಆಧಾರವಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಧೋನಿ ಸಿಗರೇಟ್ ಸೇದುತ್ತಾರೆ ಎನ್ನುವುದಕ್ಕೆ ಈ ವಿಡಿಯೋದಲ್ಲಿ ಯಾವುದೇ ನೇರ ಪುರಾವೆಗಳಿಲ್ಲ. ಇದು ಕೇವಲ ಸಾಮಾಜಿಕ ಜಾಲತಾಣದ ಊಹಾಪೋಹವಷ್ಟೇ ಆಗಿದೆ.