Bihar Election | ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಿಎಂ ನಿತೀಶ್ ಕುಮಾರ್​​ರನ್ನು ಭೇಟಿಯಾದರು 
ದೇಶ

Bihar Election | ನಿತೀಶ್​ ಕುಮಾರರನ್ನು ಭೇಟಿಯಾದ ಚಿರಾಗ್​​ ಪಾಸ್ವಾನ್; ಡಿಸಿಎಂ ಸ್ಥಾನದ ಮೇಲೆ ಎಲ್​ಜೆಪಿ ಕಣ್ಣು..?

ಪಟನಾ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎನ್‌ಡಿಎ ಪಾಳಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಚರ್ಚೆಗಳು ಆರಂಭವಾಗಿದ್ದು, ಈ ನಡುವೆ ಎಲ್‌ಜೆಪಿ ಮುಖ್ಯಸ್ಥ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶನಿವಾರ ( ನ 15) ಸಿಎಂ ನಿತೀಶ್ ಕುಮಾರ್​​ರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ಒಂದೇ ಮೈತ್ರಿಕೂಟದಲ್ಲಿದ್ದರೂ, ನಿತೀರ್​ರ ಕಟ್ಟಾ ವಿರೋಧಿ ಎಂಬಂತೆ ಬಿಂಬಿತವಾಗಿದ್ದ ಪಾಸ್ವಾನ್, ಸಮಯ ಸಿಕ್ಕಾಗಲೆಲ್ಲಾ ಅವರ ನಾಯಕನ ವಿರುದ್ಧವೇ ಬೆಂಕಿಯುಗುಳುತ್ತಿದ್ದರು, ಚುನಾವಣೆಯಲ್ಲಿನ ಅನೇಕ ಸಂಧಾನ ಸಭೆಗಳ ಬಳಿಕ ಇಬ್ಬರು ಕೈ ಮಿಲಾಯಿಸಿದ್ದಾರೆ.
ಸದ್ಯ ಭೇಟಿಯ ವಿಷಯವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಚಿರಾಗ್​, ಜೆಡಿಯು ಮುಖ್ಯಸ್ಥರನ್ನು ಅಭಿನಂದಿಸಲು ಹೋಗಿದ್ದೆ ಎಂದು ಹೇಳಿದ್ದರೂ ಕೂಡ, ಬೇರೆ ರೀತಿಯ ವದಂತಿಗಳು ಹಬ್ಬಿದ್ದು, ಚುನಾವಣೆಯಲ್ಲಿ ಎಲ್​ಜೆಪಿ ಉತ್ತಮ ಪ್ರದರ್ಶನ ನೀಡಿದ ಬಳಿಕ ತಮ್ಮ ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆಯ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಹಾರ ಚುನಾವಣೆಗಳು
ನಾನು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಭಿನಂದಿಸಿದೆ ಮತ್ತು ಚುನಾವಣೆ ಗೆಲುವಿನ ಶುಭಾಶಯಗಳನ್ನು ತಿಳಿಸಿದೆ. ಎನ್‌ಡಿಎಯ ಮೈತ್ರಿಕೂಟದ ಪ್ರತಿಯೊಂದು ಮಿತ್ರಪಕ್ಷಗಳ ಪಾತ್ರವನ್ನು ಸಿಎಂ ಮೆಚ್ಚಿಕೊಂಡಿದ್ದು ಕೇಳಿ ಸಂತೋಷವಾಗಿದೆ ಎಂದರು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನ ಗಳಿಸಿದೆ. ಇತ್ತ ಮಹಾಘಟಬಂಧನ್ 35 ರಲ್ಲಿ ಗೆಲುವು ಸಾಧಿಸಿದೆ, 6 ಸ್ಥಾನಗಳು ಪಕ್ಷೇತರರ ಪಾಲಾಗಿವೆ.